ನ್ಯೂಸ್

'ರಾ ನು ಕಾವಾಲಯ್ಯ' ಹಾಡಿಗೆ ಮಾಡರ್ನ್​ ಔಟ್​​ಫಿಟ್​​​​ನಲ್ಲಿ ಹೆಜ್ಜೆ ಹಾಕಿದ ಗೋರಿಲ್ಲಾ; ಈ ಡ್ಯಾನ್ಸ್​​ ಮುಂದೆ ಯಾವ ನಟಿಯರೂ ಲೆಕ್ಕಕ್ಕೇ ಇಲ್ಲ ಎಂದ ನೆಟ್ಟಿಗರು

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದ 'ನೂವು ಕಾವಾಲಯ್ಯ' ಹಾಡು ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಹುಟ್ಟಿಸಿದೆ. ಮೊನ್ನೆಯಷ್ಟೇ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಸಿನಿಮಾದ ಹಾಡುಗಳು ಭಾರೀ ಸದ್ದು ಮಾಡುತ್ತಿವೆ.


'ರಾ ನು ಕಾವಾಲಯ್ಯ' ಹಾಡಿನಲ್ಲಿ ನಟಿ ತಮನ್ನಾ ಭಾಟಿಯಾ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಜನರು ಈ ಹಾಡಿಗೆ ನೃತ್ಯ ಮಾಡುವ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದ್ರೆ ಇದೀಗ ಫೇಸ್​ಬುಕ್, ಇನ್‌ಸ್ಟಾಗ್ರಾಮ್​, ವಾಟ್ಸಪ್‌ ಸ್ಟೇಟಸ್‌ನಲ್ಲೂ ಇದೇ ಈಗ ಟ್ರೆಂಡಿಂಗ್‌ನಲ್ಲಿದೆ. ಮಕ್ಕಳಿಂದ ಹಿಡಿದು ಅಜ್ಜಿಯರವರೆಗೆ, ಕಿರುತೆರೆ ಕಲಾವಿದರಿಂದ ಹಿಡಿದು ಬೇರೆ ಬೇರೆ ನಟಿಯರೂ ಈ ಹಾಡಿಗೆ ಡಾನ್ಸ್​ ಮಾಡಿ ಮೋಡಿ ಮಾಡುತ್ತಿದ್ದಾರೆ. ನಟಿಯರು, ನಟರು ಸೇರಿದಂತೆ ಹಿರಿಯರು, ಕಿರಿಯರು ಎಲ್ಲರೂ ಇಷ್ಟು ದಿಬ ಈ ಹಾಡಿಗೆ ಸ್ಟೆಪ್ಸ್​​ ಹಾಕಿದ್ದಾಯ್ತು. ಅವರೆಲ್ಲರನ್ನೂ ನಾಚಿಸುವಂತೆ ಗೋರಿಲ್ಲಾ ಭರ್ಜರಿ ಸ್ಟೆಪ್​ ಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗುತ್ತಿದೆ.


ಸೊಂಟ ಬಳುಕಿಸಿ ಕುಣಿದ ಈ ಡ್ಯಾನ್ಸ್​ ನೋಡಿದ ನೆಟ್ಟಿಗರು ಗೋರಿಲ್ಲಾ ಸ್ಟೆಪ್ಸ್​ ಸೂಪರ್​​ ಅಂತಿದ್ದಾರೆ. ಗೋರಿಲ್ಲಾ ಮುಂದೆ ಯಾವ ನಟಿಯರೂ ಲೆಕ್ಕಕ್ಕಿಲ್ಲ ಅಷ್ಟು ಸುಂದರವಾಗಿ ಈ ಗೋರಿಲ್ಲಾ ಸ್ಟೆಪ್ಸ್​ ಹಾಕಿದೆ. ಸೀರೆಯುಟ್ಟ ಗೋರಿಲ್ಲಾ ಡ್ರೆಸ್‌ಗೂ ನೆಟ್ಟಿಗರು ಫಿದಾ ಆಗಿದ್ದಾರೆ.


ಸೂಪರ್ ಸ್ಟಾರ್ ರಜನಿಕಾಂತ್ ಎರಡು ವರ್ಷಗಳ ನಂತರ ತೆರೆಯ ಮೇಲೆ ಕಾಣಿಸಿಕೊಂಡಿದ್ದು, ಆರಂಭದಲ್ಲಿಯೇ ದೇಶಾದ್ಯಂತ 8.2 ಕೋಟಿ ರು. ಬೆಲೆಯ ಮುಂಗಡ ಟಿಕೆಟ್‌ ಬುಕಿಂಗ್‌ ಮಾಡಲಾಗಿತ್ತು. ನೆಲ್ಸನ್‌ ದಿಲೀಪ್‌ಕುಮಾರ್‌ ಚಿತ್ರವನ್ನು ನಿರ್ದೇಶಿಸಿದ್ದು, ಸಿನಿಮಾದಲ್ಲಿ ರಜನೀಕಾಂತ್‌ ನಿವೃತ್ತ ಪೊಲೀಸ್‌ ಅಧಿಕಾರಿಯ ಪಾತ್ರ ನಿರ್ವಹಿಸಿದ್ದಾರೆ. ಜೈಲರ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ.


ಕಾವಾಲಯ್ಯ ಹಾಡು ಜುಲೈ 6ರಂದು ಬಿಡುಗಡೆಯಾಗಿತ್ತು. ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದ ದಿನವೇ 80 ದಶಲಕ್ಷ ವೀಕ್ಷಣೆ ಗಳಿಸಿತ್ತು. ಇದೀಗ ಮನುಷ್ಯರ ಬಳಿಕ ಪ್ರಾಣಿಗಳೂ ಈ ಹಾಡಿಗೆ ಸ್ಟೆಪ್ಸ್ ಹಾಕುವಂತಾಗಿದೆ.