ಗಿಡದಲ್ಲಿ ಬಿಟ್ಟಿರುವ ಮಾವು.  
ನ್ಯೂಸ್

ಮಾವು ಮಾರಾಟದ ಮೇಲೆ ನಿಗಾ

ಕಿರುವಾರ ಎಸ್.ಸುದರ್ಶನ್

* ಕಿರುವಾರ ಎಸ್​.ಸುದರ್ಶನ್​ ಕೋಲಾರ

ಜಿಲ್ಲೆಯಲ್ಲಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಪರಿಹಾರದ ಕೂಗು ಹೆಚ್ಚಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ತಾಲೂಕುವಾರು ಅಧಿಕಾರಿಗಳ ತಂಡ ರಚಿಸಿ, ಮಾವು ಮಾರುಕಟ್ಟೆಯ ಮೇಲೆ ನಿಗಾವಹಿಸಲು ಮುಂದಾಗಿದೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು ಬೆಳೆಯುತ್ತಿರುವ ಶ್ರೀನಿವಾಸಪುರ, ಮುಳಬಾಗಿಲು, ಕೋಲಾರ, ಮಾಲೂರು ತಾಲೂಕು ವ್ಯಾಪ್ತಿಯಲ್ಲಿ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯ ನಿರ್ದೇಶಕರನ್ನು ಮುಖ್ಯಸ್ಥರನ್ನಾಗಿ ನೇಮಿಸಿ ಎಪಿಎಂಸಿ ಮಾರುಕಟ್ಟೆ, ತೋಟಗಾರಿಕೆ ಇಲಾಖೆಯ ಸಹಾಯಕ ಅಧಿಕಾರಿಗಳ ತಂಡ ರಚನೆ ಮಾಡಿ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಆದೇಶಿಸಿದ್ದು, ಕರ್ತವ್ಯ ಹಂಚಿಕೆ ಮಾಡಿದ್ದಾರೆ.

ಜತೆಗೆ ಪಲ್ಪ್​ ್ಯಾಕ್ಟರಿಗಳಿಗೆ ರವಾನೆಯಾಗುತ್ತಿರುವ ಮಾವು ನಿರ್ವಹಣೆಗೂ ಪ್ರತ್ಯೇಕ ತಂಡ ರಚನೆ ಮಾಡಿದ್ದು, ಶ್ರೀನಿವಾಸಪುರ ಮಾರುಕಟ್ಟೆಯಿಂದ ಬೆಂಗಳೂರಿನ ಮಾವು ಸಂಸ್ಕರಣಾ ಟಕ ಹಾಗೂ ಮಾರುಕಟ್ಟೆಗಳಿಗೆ ರವಾನೆ, ಆಂಧ್ರ ಸೇರಿ ವಿವಿಧ ಜಿಲ್ಲೆಗಳಲ್ಲಿನ ಮಾವು ಸಂಸ್ಕಾರಣಾ ಟಕ ಹಾಗೂ ಮಾರುಕಟ್ಟೆಗೆ ರವಾನೆ, ಮಾಲೂರು ಇನೋವಾ ುಡ್​ ಪಾರ್ಕ್​ ಮತ್ತು ಸಲ್​ ಮಾರ್ಕೆಟ್​, ಕೋಲಾರ ಐಕ್ಯೂಎ್​, ಮುಳಬಾಗಿಲು ಸ ುಡ್​ ಪೆ.ಲಿ, ಶ್ರೀನಿವಾಸಪುರದ ಸನ್​ಸ್​ಿ ಪ್ರೋಸಸ್​ ಮತ್ತು ಎಸ್ಪೆಟಿಕ್​ ಕ್ವಾಲಿಟಿ ುಡ್ಸ್​ ಕಂಪನಿಗಳ ಕಾರ್ಯ ಕುರಿತು ಹಾಗೂ ಮುಳಬಾಗಿಲು, ಶ್ರೀನಿವಾಸಪು ಮಾರುಕಟ್ಟೆಗಳಲ್ಲಿ ಮಾವು ವಹಿವಾಟು ಕುರಿತು ವರದಿ ನೀಡಲು ಒಟ್ಟು 8 ತಂಡ ರಚಿಸಲಾಗಿದೆ.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಕುಮಾರಸ್ವಾಮಿ ಅವರು ತಂಡಗಳ ಮೇಲುಸ್ತುವಾರಿ ವಹಿಸಿ, ನಿಯೋಜಿಸಿದ ತಂಡದ ಅಧಿಕಾರಿಗಳಿಂದ ಪ್ರತಿದಿನ ವರದಿ ಪಡೆದು ಜಿಲ್ಲಾಡಳಿತಕ್ಕೆ ಸಲ್ಲಿಸುವುದು, ಮಾರುಕಟ್ಟೆಯಲ್ಲಿ ಲೋಪದೋಷಗಳಾಗದಂತೆ ಎಚ್ಚರವಹಿಸುವುದು, ಪ್ರತಿ ದಿನ ಸಂಜೆ 6 ಗಂಟೆಯೊಳಗೆ ಆಯಾ ದಿನದ ವಹಿವಾಟಿನ ವಿವರ ಸಲ್ಲಿಸಲಿದ್ದಾರೆ.

ತೋತಾಪುರಿ ಮಾವು ಬೆಲೆ ಕುಸಿತದಿಂದ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಬೆಂಬಲ ಬೆಲೆ ಘೋಷಿಸಲು ತೋಟಗಾರಿಕೆ ಇಲಾಖೆಯಿಂದ ಸರ್ಕಾರದ ಕಾರ್ಯದರ್ಶಿಗೆ ಪ್ರಸ್ತಾವ ಸಲ್ಲಿಸಲಾಗಿದೆ.

* 2018-19ರಲ್ಲೂ ಬೆಲೆ ಕುಸಿತ

ಪ್ರಸಕ್ತ ಸಾಲಿನಲ್ಲಿ ಎದುರಾಗಿರುವ ಸಮಸ್ಯೆಯೂ ಕಳೆದ 2018&2019ರಲ್ಲೂ ಉಂಟಾಗಿತ್ತು. ಆಗಲೂ ಆಂಧ್ರದಲ್ಲಿ ಸಕಾಲಕ್ಕೆ ಅಲ್ಲಿನ ಸರ್ಕಾವು ಬೆಂಬಲ ಬೆಲೆ ಘೋಷಣೆ ಮಾಡಿ ರೈತರ ನೆರವಿಗೆ ಧಾವಿಸಿತು. ಕರ್ನಾಟದಲ್ಲಿ ಅಂದಿನ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ತಡವಾಗಿಯಾದರೂ ಬೆಂಬಲ ಬೆಲೆ ಘೋಷಿಸಿದ್ದರು. ಈ ಬಾರಿಯೂ ಬೆಂಬಲ ಬೆಲೆ ಘೋಷಿಸಲು ಒತ್ತಾಯ ಕೇಳಿ ಬಂದಿದೆ.

* ಕಳೆದ ವರ್ಷ ಇಳುವರಿ ಕುಂಠಿತ

ಜಿಲ್ಲೆಯಲ್ಲಿ ಒಟ್ಟು 96,805 ಹೆಕ್ಟೇರ್​ ತೋಟಗಾರಿಕೆ ಪ್ರದೇಶವಿದ್ದು, ಆ ಪೈಕಿ ಸುಮಾರು 50 ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಮಾವು ಬೆಳೆ ಬೆಳೆಲಾಗುತ್ತಿದೆ. 2024ರಲ್ಲಿ ಮಳೆ ಕೊರತೆ ಹಾಗೂ ಹೆಚ್ಚಿದ ಉಷ್ಣಾಂಶದಿಂದ 39,331.27 ಹೆಕ್ಟೇರ್​ ಪ್ರದೇಶದಲ್ಲಿ ಶೇ.70&80 ಮಾವು ಇಳುವರಿ ಕುಂಠಿತವಾಗಿತ್ತು.

ಎಸ್​ಡಿಆರ್​ಎಫ್​ ಹಾಗೂ ಎನ್​ಡಿಆರ್​ಎಫ್​ನಡಿ 88.49 ಕೋಟಿ ರೂ ಪರಿಹಾರ ಕೋರಿ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿ ಅವರಿಗೆ ಹಿಂದಿನ ಜಿಲ್ಲಾಧಿಕಾರಿ ಅಕ್ರಂ ಪಾಷ ಪತ್ರ ಬರೆದಿದ್ದರು. ಬಿಡುಗಡೆಯಾಗಿದ್ದ ಪರಿಹಾರ ಹಣವೂ ರೈತರ ಖಾತೆಗೆ ಶೇ.90 ಡಿಬಿಟಿ ಮೂಲಕ ಜಮೆ ಆಗಿದೆ.

ಸಮಿತಿಯ ರ್ನಿಣಯಗಳು?

* ನೋಡಲ್​ ಅಧಿಕಾರಿ ಜಿಲ್ಲಾಡಳಿತ, ತೋಟಗಾರಿಕೆ ಮತ್ತು ಸಂಸ್ಕರಣಾ ಟಕಗಳೊಂದಿಗೆ ಸಮನ್ವಯ ಸಾಧಿಸಿ, ಪೂರ್ಣ ಪ್ರಮಾಣದಲ್ಲಿ ಸಂಸ್ಕರಣೆಗೆ ಕ್ರಮವಹಿಸುವುದು.

* ರಾಜ್ಯದಲ್ಲಿನ ಸಂಸ್ಕರಣಾ ಟಕಗಳಲ್ಲಿ, ಸಂಸರಣಾ ಸಾಮರ್ಥ್ಯ ಕನಿಷ್ಠ 1,500 ಮೆಟ್ರಿಕ್​ ಟನ್​ ಆಗಿದ್ದು, ಮಾವು ಹಂಗಾಮು ಕಾಲಾವಧಿಯಲ್ಲಿ 45,000ದಿಂದ 50,000ಕ್ಕೆ ಹೆಚ್ಚಿಸಬಹುದು.

* ಪೂರ್ಣ ಪ್ರಮಾಣದಲ್ಲಿ ಸಂಸ್ಕರಿಸುವುದು ಕಷ್ಟ ಸಾಧ್ಯವಾಗಿರುವುದರಿಂದ 2018&2019ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ಬೆಂಬಲ ಬೆಲೆ ಘೋಷಿಸಿದ್ದ ಮಾದರಿಯಲ್ಲಿ ಪ್ರಸಕ್ತ ಸಾಲಿನಲ್ಲೂ ಬೆಂಬಲ ಬೆಲೆ ಘೋಷಿಸಿದರೆ ಖರೀದಿಗೆ ಸೂಕ್ತವಾಗುತ್ತದೆ.

* ಆಂಧ್ರದಲ್ಲಿ ತೋತಾಪುರಿ ಖರೀದಿ ಬೆಲೆ ಕೆಜಿಗೆ 12 ರೂ. ನಿಗದಿಪಡಿಸಿ ಆದೇಶಿಸಿದ್ದು, ಇದರಲ್ಲಿ 8 ರೂ. ಸಂಸ್ಕರಣ ಟಕ ಹಾಗೂ 4 ರೂ. ಸರ್ಕಾರ ನೀಡುತ್ತಿದೆ. ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರವು ಘೋಷಿಸಬಹುದು.

* ಮುಂದಿನ ದಿನಗಳಲ್ಲಿ ಟಭಲ್​ ತಳಿ ಹೊರತುಪಡಿಸಿ ತೋತಾಪುರಿ ತಳಿಯನ್ನು ಪಿಪಿಪಿ ಮಾದರಿಯಲ್ಲಿ ಸಂಸ್ಕರಣೆ ಕೈಗೊಳ್ಳಲು ಮತ್ತು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಟೇಟ್ರಾ ಮಾವಿನ ಹಣ್ಣಿನ ರಸ ನೀಡುವ ಬಗ್ಗೆ ಪರಿಶೀಲಿಸಬಹುದು.

ಕೋಟ್​...

ಮಾರುಕಟ್ಟೆಗೆ ಬರುವ ಮಾವನ್ನು ಸಮರ್ಪಕವಾಗಿ ಮಾರಾಟ ಮಾಡಲು ತಂಡಗಳನ್ನು ರಚನೆ ಮಾಡಿದ್ದು, ಪ್ರತಿ ದಿನ ವರದಿ ಪಡೆಯಲಾಗುತ್ತಿದೆ. ಸದ್ಯಕ್ಕೆ ಮಾರಾಟ ನಡೆಯುತ್ತಿದೆ.

> ಕುಮಾರಸ್ವಾಮಿ, ಉಪ ನಿರ್ದೇಶಕ, ತೋಟಗಾರಿಕೆ, ಕೋಲಾರ