ಹೌದಾ!? ನಾನೂ ಗಾಣದ ಎಣ್ಣೆ ಉದ್ಪಾದನಾ ಘಟಕ ಆರಂಭಿಸಬಹುದಾ? ಅದಕ್ಕೆ ಮಾರ್ಕೆಟ್ ಇದೆಯಾ? ಎಷ್ಟು ಲಾಭ ಗಳಿಸಬಹುದು? ಹೀಗೆ ನಿಮ್ಮ ಮನದಲ್ಲಿರುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ ಅಂಕಣದಲ್ಲಿದೆ.
ಗಾಣದ ಎಣ್ಣೆ ಉತ್ಪಾದನೆ ಘಟಕ ಆರಂಭಿಸಲು ಎಷ್ಟು ಹಣ ಬೇಕು?: ನಮ್ಮ ದೇಶದಲ್ಲಿ ಪ್ರತಿ ವರ್ಷ 1.5 ಲಕ್ಷ ಕೋಟಿ ಮೌಲ್ಯದ ಖಾದ್ಯ ಎಣ್ಣೆ ಮಾರಾಟವಾಗುತ್ತೆ. ನಾವು ಸೇವಿಸೋ ಬಹಳಷ್ಟು ಖಾದ್ಯಗಳಿಗೆ ಎಣ್ಣೆ ಬಳಸೇ ಬಳಸ್ತೀವಿ. ಹೀಗಾಗಿಯೇ ಎಣ್ಣೆ ಉತ್ಪಾದಿಸುವ ಉದ್ಯಮಗಳಿಗೆ ಸಾಕಷ್ಟು ಬೇಡಿಕೆ ಇದೆ. ಅದರಲ್ಲೂ ಬಹಳ ವಿರಳವಾಗಿರುವ ಶುದ್ಧ ಎಣ್ಣೆ ಅಂದರೆ, ಈ ಗಾಣದ ಎಣ್ಣೆಗೆ ಬೇಡಿಕೆ ಬಹಳಷ್ಟಿದೆ. ತಾಲೂಕು ಮಟ್ಟದಲ್ಲಿ ಸಣ್ಣದಾಗಿ ಈ ಉದ್ಯಮ ಆರಂಭ ಮಾಡ್ತೀವಿ ಅನ್ನೋದಾದ್ರೆ, ಅಬ್ಬಬ್ಬಾ ಅಂದ್ರೆ 1-2 ಲಕ್ಷ ಹೂಡಿಕೆ ಸಾಕಾಗುತ್ತೆ. ಇಲ್ಲ, ದೊಡ್ಡ ಪ್ರಮಾಣದಲ್ಲಿ ಒಂದಷ್ಟು ಯಂತ್ರೋಪಕಾರಣಗಳೊಂದಿಗೆ ಆರಂಭ ಮಾಡ್ತೀನಿ ಅನ್ನೋದಾದ್ರೆ, 10 ಲಕ್ಷ ರೂ. ಹೂಡಿಕೆ ಬೇಕಾಗಬಹುದು. ಎತ್ತು ಕಟ್ಟಿ ಗಾಣ ನಡೆಸಿ ಎಣ್ಣೆ ಉತ್ಪಾದನೆ ಮಾಡೋ ಪದ್ಧತಿಯಿಂದ ಹಿಡಿದು ಅತ್ಯಾಧುನಿಕ ಯಂತ್ರಗಳ ಮೂಲಕ ಎಣ್ಣೆ ಉತ್ಪಾದಿಸುವ ಪದ್ಧತಿವರೆಗೆ ತಂತ್ರಜ್ಞಾನ ಬೆಳೆದು ನಿಂತಿದೆ. ಹೀಗಾಗಿ ಯಾವ ರೀತಿಯಲ್ಲಿ ಎಣ್ಣೆ ಉತ್ಪಾದನೆ ಮಾಡಬೇಕೆಂಬುದರ ನಿರ್ಧಾರವನ್ನು ನೀವು ಕೈಗೊಳ್ಳಬಹುದು.
ಇತರ ಎಣ್ಣೆಗೂ ಗಾಣದ ಎಣ್ಣೆಗೂ ಇರುವ ವ್ಯತ್ಯಾಸ: ನಾವು ಸದ್ಯ ಬಳಸುವ ಎಣ್ಣೆಗಳು 30 ಡಿಗ್ರಿ ಸೆಲ್ಸಿಯಸ್ನಲ್ಲಿ ಕುದಿಸಿದ ನಂತರ ತಯಾರಿಸಲ್ಪಡುತ್ತವೆ. ಈ ಕ್ರಮದಿಂದ ಎಣ್ಣೆ ತನ್ನಲ್ಲಿರುವ ಎಲ್ಲ ಆರೋಗ್ಯಕರ ಅಂಶಗಳನ್ನು ಕಳೆದುಕೊಳ್ಳುತ್ತದೆ ಮತ್ತು ಒಮ್ಮೆ ಕುದಿಸಿದ ಎಣ್ಣೆಯನ್ನು ಮತ್ತೆ ಗ್ರಾಹಕರು ಮನೆಗೆ ತಂದು ಅಡುಗೆಯಲ್ಲಿ ಬಳಸಿದಾಗ ಅದು ಆರೋಗ್ಯಕ್ಕೆ ಬಹಳ ಹಾನಿಕಾರಕ. ಇತರ ಎಣ್ಣೆಗಳಿಗೆ ಹೋಲಿಕೆ ಮಾಡಿದ್ರೆ, ಈ ಗಾಣದ ಎಣ್ಣೆಗಳು ನಮ್ಮ ಆರೋಗ್ಯ ಕಾಪಾಡಲು ಬೇಕಾಗುವ ಎಲ್ಲ ಅಂಶಗಳನ್ನು ಹೊಂದಿವೆ. ಬೆಲೆ ವಿಷಯಕ್ಕೆ ಬಂದ್ರೆ, ಇತರ ಎಣ್ಣೆಗಳಿಗಿಂತ ಗಾಣದ ಎಣ್ಣೆಗಳಿಗೆ ಬೆಲೆ ಜಾಸ್ತಿ. ಕಾರಣ, 1 ಲೀಟರ್ ಕಡಲೆಕಾಯಿ ಎಣ್ಣೆ ಪಡೆಯೋದಕ್ಕೆ 3 ಕೆಜಿ ಕಡೆಕಾಯಿ ಬೀಜ ಬೇಕಾಗುತ್ತೆ. ಒಂದು ಕೆಜಿ ಕಡಲೇಕಾಯಿ 100 ರೂಪಾಯಿ ಅಂತ ಅನ್ಕೋಡ್ರು 1 ಲೀಟರ್ ಎಣ್ಣೆಗೆ 300 ರೂಪಾಯಿ ಮೌಲ್ಯದ ಕಡಲೇಬೀಜ ಬೇಕು. ಜತೆಗೆ ಎಣ್ಣೆ ತಯಾರಿಕೆಗೆ ಬೇಕಾಗುವ ಮಾನವ ಸಂಪನ್ಮೂಲ ಮತ್ತು ಇತರ ವೆಚ್ಚಗಳನ್ನು ಗಮನದಲ್ಲಿಡುವುದಾದ್ರೆ ಪ್ರತಿ ಲೀಟರ್ ಕಡಲೇಕಾಯಿ ಎಣ್ಣೆಗೆ ಕಡಿಮೆ ಅಂದ್ರು 350ರಿಂದ 400 ರೂ. ಖರ್ಚು ಬರುತ್ತೆ. ಹೀಗಿರುವಾಗ ಇತರ ಖಾದ್ಯ ಎಣ್ಣೆ ವಿತರಕರು ಶುದ್ಧ ಎಣ್ಣೆಯನ್ನು ಕೇವಲ 100 ಅಥವಾ 150 ರೂಪಾಯಿಗೆ ಕೊಡಲು ಹೇಗೆ ಸಾಧ್ಯ? ಚಿಂತಿಸಿ ನೋಡಿ.
ಹಳ್ಳಿಯಲ್ಲೂ ಬಿಸಿನೆಸ್: ನಿಮ್ಮ ಊರಿನ ಜನರ ಆರೋಗ್ಯವೂ ಚೆನ್ನಾಗಿರಬೇಕು. ಜತೆಗೆ ನೀವೂ ಒಳ್ಳೆಯ ಲಾಭ ಪಡೆಯಬೇಕು ಅಂದುಕೊಂಡಲ್ಲಿ ಈ ಗಾಣದ ಎಣ್ಣೆ ಉದ್ಯಮ ಉತ್ತಮ ಆಯ್ಕೆ. ಸಾಂಸ್ಕೃತಿಕ ದೇಶವಾಗಿರುವ ಭಾರತದಲ್ಲಿ ಪ್ರತಿಯೊಂದು ರಾಜ್ಯ, ಪ್ರತಿಯೊಂದು ಜಿಲ್ಲೆ, ಪ್ರತಿಯೊಂದು ಹಳ್ಳಿ ತನ್ನದೇ ಆದ ಆಹಾರ ವೈಶಿಷ್ಟ್ಯವನ್ನು ಹೊಂದಿದೆ. ಹೀಗಾಗಿ, ಒಂದೊಂದು ಪ್ರಾಂತ್ಯದಲ್ಲೂ ಅದಕ್ಕೆ ಸರಿಹೊಂದುವಂತಹ ಎಣ್ಣೆ ತಯಾರಿಕೆ ಘಟಕ ಗಳನ್ನು ಆರಂಭಿಸಬಹುದು. ಉತ್ತರ ಭಾರತದಲ್ಲಿ ಸಾಸಿವೆ ಎಣ್ಣೆಗೆ ಪ್ರಾಧಾನ್ಯತೆ ಹೆಚ್ಚು, ಇನ್ನೂ ಕರಾವಳಿ ಪ್ರದೇಶದಲ್ಲಿ ಕೊಬ್ಬರಿ ಎಣ್ಣೆಗೆ ಬೇಡಿಕೆ ಹೆಚ್ಚಿದೆ. ಬಯಲುಸೀಮೆಯಲ್ಲಿ ಕಡಲೆಕಾಯಿ ಎಣ್ಣೆ ರೂಢಿಯಲ್ಲಿದೆ.
ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಮಾಹಿತಿ: ಗಾಣದ ಎಣ್ಣೆ ಘಟಕ ಆರಂಭಿಸಲು ಬೇಕಾಗುವ ಸಂಪನ್ಮೂಲಗಳಾವುವು, ಎಷ್ಟು ಕೆಲಸಗಾರರು ಬೇಕು, ಸರ್ಕಾರದಿಂದ ಇದಕ್ಕೆ ಏನಾದರೂ ಸವಲತ್ತುಗಳು ಲಭ್ಯ ಇವೆಯೇ, ಎಣ್ಣೆಗೆ ಬೆಲೆ ನಿಗದಿ ಪಡಿಸೋದು ಹೇಗೆ, ವಿತರಣೆ ಹೇಗಿರಬೇಕು, ಈ ಉದ್ಯಮದಲ್ಲಿ ಎದುರಾಗುವ ಸವಾಲುಗಳಾವುವು ಮತ್ತು ಅದನ್ನೆದುರಿಸುವ ಬಗೆ ಹೇಗೆ? ಇವೆಲ್ಲವನ್ನೂ ನೀವು ಇಂಡಿಯನ್ ಮನಿ ಡಾಟ್ ಕಾಮ್ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿರುವ ಗಾಣದ ಎಣ್ಣೆ ಉದ್ಯಮ ಕೋರ್ಸ್ನಲ್ಲಿ ತಿಳಿದುಕೊಳ್ಳಬಹುದು. ಗಾಣದ ಎಣ್ಣೆ ಘಟಕ ಸ್ಥಾಪಿಸಿ ಲಕ್ಷಗಳಿಂದ ಕೋಟಿವರೆಗೆ ಗಳಿಸುತ್ತಿರುವ ಉದ್ಯಮಿಗಳು ನಿಮಗೆ ಇಲ್ಲಿ ಮಾರ್ಗದರ್ಶನ ಮಾಡಲಿದ್ದಾರೆ. ಹಾಗಾದ್ರೆ ಇನ್ನೇಕೆ ತಡ, ಆದಷ್ಟು ಬೇಗ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಇರುವ ಗಾಣದ ಎಣ್ಣೆ ಬಿಜಿನೆಸ್ನಲ್ಲಿ ಲಾಭ ಗಳಿಸೋದು ಹೇಗೆ ಎಂಬ ಕೋರ್ಸ್ ಅನ್ನು ನೋಡಲಾರಂಭಿಸಿ ಮತ್ತು ಶ್ರೀಮಂತಿಕೆಯ ಪ್ರಯಾಣ ಶುರು ಮಾಡಿ.
ಕೋರ್ಸ್ನ ಮಾರ್ಗದರ್ಶಕರು
ಕೋರ್ಸ್ನಲ್ಲಿ ಏನಿದೆ?