ನ್ಯೂಸ್

ರುದ್ರಾಕ್ಷಿ ಮಾರೋದು ಬಿಟ್ಟು ಹೊಸ ಬ್ಯುಸಿನೆಸ್ ಆರಂಭಿಸಿದ ಮೊನಾಲಿಸಾ! ಕೇವಲ 10 ದಿನಗಳಲ್ಲಿ ₹ 10 ಕೋಟಿ ಆದಾಯ.. Monalisa Stunning ₹10 Crore Income

Monalisa Stunning ₹10 Crore Income:  ಮಹಾಕುಂಭ ಮೇಳದಲ್ಲಿ ವೈರಲ್ ಹುಡುಗಿ ತನ್ನ ಆಕರ್ಷಕ ಸೌಂದರ್ಯ ಮತ್ತು ತೀಕ್ಷ್ಣವಾದ ವೈಶಿಷ್ಟ್ಯಗಳಿಂದ ಎಲ್ಲರ ಗಮನ ಸೆಳೆದ ಮೊನಾಲಿಸಾ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾರೆ.  ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ  ಮಾರಾಟ  ಮಾಡುತ್ತಿದ್ದ  ಮೊನಾಲಿಸಾ ಇದೀಗ ಈ ವ್ಯಾಪಾರವನ್ನು ಬಿಟ್ಟು ಕೇವಲ 10 ದಿನಗಳಲ್ಲಿ 10 ಕೋಟಿ ಗಳಿಸುತ್ತಿದ್ದಾರೆ.

ಮೊನಾಲಿಸಾ ಕ್ರೇಜ್ ಹೇಗಿತ್ತು ಅಂದ್ರೆ ಫ್ಯಾನ್ಸ್​ ಮುತ್ತಿಕೊಳ್ಳುತ್ತಿದ್ದರು. ಸೆಲ್ಫಿಗಾಗಿ ಸುತ್ತುವರೆಯುತ್ತಿದ್ದರು. ಹಾಗಾಗಿಯೇ ಮೊನಾಲಿಸಾ ಅಪ್ಪ ಮಹಾಕುಂಭಮೇಳದ ಮಧ್ಯದಲ್ಲೇ ಊರಿಗೆ ಕಳುಹಿಸಿಬಿಟ್ಟರು.  ಇದೀಗ ಈಕೆ ಹೊಸ ಬ್ಯುಸಿನೆಸ್​​ ಪ್ರಾರಂಭಿಸಿದ್ದಾಳೆ.

ಮಧ್ಯ ಪ್ರದೇಶದ ಇಂದೋರ್​ನ ಮಹೇಶ್ವರ ಗ್ರಾಮದ ಹುಡುಗಿ ಮೊನಾಲಿಸಾ. ಮಹಾಕುಂಭಮೇಳದಲ್ಲಿ ದಿನಕ್ಕೆ ₹1000 ದಿಂದ ₹3000 ದುಡಿಯುತ್ತಿದ್ದಳು. ಆದ್ರೀಗ ಈಕೆಯ ರೇಂಜೇ ಚೇಂಜ್ ಆಗಿದೆ. ಹೊಸ ಬ್ಯುಸಿನೆಸ್​ ಆರಂಭಿಸಿರೋ ಮೊನಾಲಿಸಾ ಅಚ್ಚರಿ ಮೂಡಿಸಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾಳೆ.

ಮೊನಾಲಿಸಾ ಭೋಂಸ್ಲೆ 08 ಅನ್ನೋ ಯುಟ್ಯೂಬ್ ಚಾನಲ್ ಆರಂಭಿಸಿದ್ದಾಳೆ.   ಜೇನುಗಣ್ಣಿನ  ಈಕೆಯ ಪ್ರತೀ ವಿಡಿಯೋ ಮಿಲಿಯನ್​​ ವೀವ್ಸ್​ ಪಡೆಯುತ್ತಿವೆ. ಇದುವರೆಗೂ ಕೇವಲ 9 ವಿಡಿಯೋ ವ್ಲಾಗ್ ಮಾಡಿರೋ ಮೊನಾಲಿಸಾ ಎಂಟೇ ದಿನಗಳಲ್ಲಿ ಸರಿ ಸುಮಾರು 3 ಲಕ್ಷ ಸಬ್​ಸ್ಕ್ರೈಬರ್ಸ್​ ಹೊಂದಿದ್ದಾಳೆ.  ​

ರುದ್ರಾಕ್ಷಿ ಮಾರುತ್ತಿದ್ದಾಗ ದಿನಕ್ಕೆ ₹1000 ದುಡಿಯುತ್ತಿದ್ದ ಮೊನಾಲಿಸಾ ಇದೀಗ ಲಕ್ಷ.. ಕೋಟಿ ದುಡಿಯೋ ರೇಂಜ್​​ಗೆ ಬಂದಿದ್ದಾಳೆ ಎನ್ನಲಾಗುತ್ತಿದೆ.

ಮೊನಾಲಿಸಾ ಅವರ ಕಂದು ಕಣ್ಣುಗಳು ಮತ್ತು ಸರಳತೆಯು ಲಕ್ಷಾಂತರ ಮಹಾಕುಂಭ ಭಕ್ತರ ಹೃದಯವನ್ನು ಗೆದ್ದಿದೆ. ಅವಳ ಅನನ್ಯ ಸೌಂದರ್ಯವು ಅವಳನ್ನು ಸಾಮಾಜಿಕ ಮಾಧ್ಯಮದಲ್ಲಿ ಸಂವೇದನೆಯನ್ನು ಮಾಡಿದೆ ಮತ್ತು ಜನರು ಅವಳ ಮತ್ತು ಅವಳ ಜೀವನದ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ.