ಗೋರಖ್‌ಪುರ: ಕೇವಲ 1,500 ರೂ.ಗಾಗಿ ಒಂದೇ ಕುಟುಂಬದ(Crime News) ಮೂವರು ಸದಸ್ಯರು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.
ಇದನ್ನೂ ಓದಿ: ಮುಸ್ಲಿಮರ ಬಗ್ಗೆ ಉಗ್ರರ ಗುಂಡಿಗೆ ಬಲಿಯಾದ ನೌಕಾಪಡೆ ಅಧಿಕಾರಿ ವಿನಯ್ ಪತ್ನಿಯಿಂದ ಮಹತ್ವದ ಹೇಳಿಕೆ! Pahalgam terror attack
ವಾಸ್ತವವಾಗಿ 18 ವರ್ಷದ ಮೋಹಿತ್ ಕನೋಜಿಯಾ ಮುಂಬೈನಲ್ಲಿ ಬಟ್ಟೆ ಒಗೆಯುವ ಕೆಲಸ ಮಾಡಿ ತನ್ನ ತಾಯಿ ಕೌಶಲ್ಯ ಮತ್ತು ಸಹೋದರಿಗೆ ಸಹಾಯ ಮಾಡುತ್ತಿದ್ದನು. ಮನೆಗೆ ಹಿಂದಿರುಗಿದ ಹತ್ತು ದಿನಗಳ ನಂತರ ಅವನು ತನ್ನ ಹಾಳಾದ ಮೊಬೈಲ್ಅನ್ನು ಸರಿಪಡಿಸಲು ತಾಯಿ ಕೌಶಲ್ಯಾ ದೇವಿಯ ಬಳಿ 1500 ರೂ. ಕೇಳುತ್ತಾನೆ. ಆದರೆ ಅವನ ತಾಯಿ ಹಣ ನೀಡಲು ನಿರಾಕರಿಸುತ್ತಾಳೆ.ಈ ವಿಷಯಕ್ಕೆ ಸಂಬಂಧಿಸಿದಂತೆ ಆದ ಜಗಳವೇ ಇವರ ಸಾವಿಗೆ ಕಾರಣವಾಗಿದೆ.
ನಡೆದ ಘಟನೆ ಏನು?
ಮಾರುಕಟ್ಟೆಯಲ್ಲಿ ನಡೆದ ಈ ಜಗಳದಲ್ಲಿ ಮೋಹಿತ್ ಕೋಪಗೊಂಡು, ನೀವು ಹಣ ನೀಡಲಿಲ್ಲ ಎಂದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕುತ್ತಾನೆ, ಇದಕ್ಕೆ ಆತನ ತಾಯಿ ಭಾವುಕರಾಗಿ ನೀನು ಸತ್ತರೆ, ನಾನು ಕೂಡಾ ಸಾಯುತ್ತೇನೆ ಎಂದು ಹೇಳುತ್ತಾಳೆ. ಇದಕ್ಕೆ ಕೋಪಗೊಂಡು ಮೋಹಿತ್ ಜಗಳವನ್ನು ಅರ್ಧಕ್ಕೆ ನಿಲ್ಲಿಸಿ, ಮನೆಗೆ ಹಿಂದಿರುಗುತ್ತಾನೆ. ಸ್ವಲ್ಪ ಸಮಯದ ನಂತರ ತಾಯಿ ಮತ್ತು ಆತನ ಸಹೋದರಿ ಮನೆಗೆ ತಲುಪಿದಾಗ, ಬಾಗಿಲು ಮುಚ್ಚಿರುವುದು ಕಂಡುಬಂದಿದೆ. ಬಾಗಿಲು ಬಡಿದು ಎಷ್ಟೇ ಕರೆದರೂ ಮೋಹಿತ್ನಿಂದ ಯಾವುದೇ ಉತ್ತರ ಬರಲಿಲ್ಲ. ಇಬ್ಬರೂ ಭಯಭೀತರಾಗಿ ಕೂಗಾಡಿದಾಗ ಶಬ್ದ ಕೇಳಿ ನೆರೆಹೊರೆಯವರು ಧಾವಿಸಿದ್ದಾರೆ. ನಂತರ ಪಕ್ಕದ ಮನೆಯೊಬ್ಬಳು ಛಾವಣಿಯ ಮೂಲಕ ಮನೆಯೊಳಗೆ ಪ್ರವೇಶಿಸಿದಾಗ ಕಿಟಕಿಯಿಂದ ಮೋಹಿತ್ ನೇಣು ಬಿಗಿದುಕೊಂಡಿರುವುದನ್ನು ನೋಡಿದಳು.
ನಂತರ ಏನಾಯಿತು?
ಇದನ್ನು ನೋಡಿದ ಕೌಶಲ್ಯ ದೇವಿ ಮತ್ತು ಅವರ ಮಗಳು ಅತ್ತು ಗೋಗರೆದರು. ಕೌಶಲ್ಯ ದೇವಿ ಸುಮಾರು ಅರ್ಧ ಗಂಟೆಗಳ ಕಾಲ ತನ್ನ ಮಗನ ದೇಹವನ್ನು ತನ್ನ ತೋಳುಗಳಲ್ಲಿ ಹಿಡಿದಿದ್ದರು. ಈ ಆಘಾತದಿಂದ ಬೇಸರಗೊಂಡ ತಾಯಿ ಮತ್ತು ಮಗಳು ಇಬ್ಬರೂ ವಿಷ ಸೇವಿಸಿದರು. ಅವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆಯ ಸಮಯದಲ್ಲಿ ಇಬ್ಬರೂ ಸಾವನ್ನಪ್ಪಿದರು.
'ಇದು ಆತ್ಮಹತ್ಯೆ ಪ್ರಕರಣ. ಕೌಟುಂಬಿಕ ಕಲಹದಿಂದಾಗಿ ಮೋಹಿತ್ ಆತ್ಮಹತ್ಯೆ ಮಾಡಿಕೊಂಡಿದ್ದು, ನಂತರ ಅವರ ತಾಯಿ ಮತ್ತು ಸಹೋದರಿ ಕೂಡ ವಿಷ ಸೇವಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಶವಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್)