ಅಯೋಧ್ಯೆ: ರಾಮಮಂದಿರ ಶಿಲಾನ್ಯಾಸದಲ್ಲಿ ಪಾಲ್ಗೊಂಡಿದ್ದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಾತನಾಡುವ ವೇಳೆ, ರಾಮಮಂದಿರ ನಿರ್ಮಾಣ ಕನಸು ನನಸಾಗುವಲ್ಲಿ ಶ್ರಮಿಸಿದ ಅನೇಕ ಮುಖಂಡರನ್ನು ನೆನಪಿಸಿಕೊಂಡರು.
ರಾಮಮಂದಿರ ನಿರ್ಮಾಣದ ಕನಸು ಸಾಕಾರಗೊಳ್ಳಲು ಅನೇಕರು ತ್ಯಾಗ, ಬಲಿದಾನಗಳನ್ನು ಮಾಡಿದ್ದಾರೆ. ಆದರೆ ಅವರೆಲ್ಲ ಭೌತಿಕವಾಗಿ ಇಲ್ಲಿಲ್ಲ. ಎಲ್.ಕೆ.ಆಡ್ವಾಣಿಯವರು ತಮ್ಮ ಮನೆಯಿಂದಲೇ ಇಲ್ಲಿನ ಸಮಾರಂಭವನ್ನು ವೀಕ್ಷಿಸುತ್ತಿರುತ್ತಾರೆ. ಈಗಿನ ಪರಿಸ್ಥಿತಿಯಿಂದ ಅನೇಕರಿಗೆ ಆಹ್ವಾನ ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಎಲ್.ಕೆ.ಆಡ್ವಾಣಿಯವರನ್ನಷ್ಟೇ ಅಲ್ಲದೆ ವಿಎಚ್ಪಿ ಮುಖಂಡ ಅಶೋಕ್ ಸಿಂಘಲ್ ಸೇರಿ ಹಲವು ಪ್ರಮುಖರನ್ನು ನೆನಪಿಸಿಕೊಂಡರು.
ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣದ ಸಂಕಲ್ಪವನ್ನು ಪೂರ್ತಿಗೊಳಿಸಲು ಆರ್ಎಸ್ಎಸ್ ಮತ್ತು ಇತರ ಸಮಾನ ಮನಸ್ಕ ಸಂಸ್ಥೆಗಳು 30ಕ್ಕೂ ಹೆಚ್ಚು ವರ್ಷಗಳ ಕಾಲ ಶ್ರಮಿಸಿವೆ ಎಂದು ಹೇಳಿದರು. (ಏಜೆನ್ಸೀಸ್)