ಚಂಡಿಗರ್: ಒಡಹುಟ್ಟಿದ ಸಹೋದರಿಯರನ್ನೇ ಯುವಕನೊಬ್ಬ ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಪಂಜಾಬ್ನ ಮೋಗಾ ಜಿಲ್ಲೆಯ ಮಾನುಕೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಕುನ್ವಾಲ್ ಪ್ರೀತ್ ಕೌರ್ (18) ಹಾಗೂ ಅಮನಪ್ರೀತ್ ಕೌರ್ (24) ಗುಂಡೇಟಿಗೆ ಬಲಿಯಾದ ಸಹೋದರಿಯರು. ಶೇಕ್ ಕುರ್ದ್ ಹಳ್ಳಿಯ ಕಾಂಗ್ರೆಸ್ ಮುಖಂಡ ಹಾಗೂ ಸರಪಂಚ್ ಸುಖವಿಂದರ್ ಕೌರ್ನ ಮಗ ಗುರುವೀರ್ ಸಿಂಗ್ನೇ ತನ್ನ ಸಹೋದರಿಯರಿಯರನ್ನು ಗುಂಡಿಟ್ಟು ಕೊಂದವ. ಸದ್ಯ ಗುರುವೀರ್ ಸಿಂಗ್ನನ್ನು ಪೊಲೀಸರು ಬಂಧಿಸಿದ್ದು, ಈ ಘಟನೆ ಪಂಜಾಬ್ ನ್ನು ಬೆಚ್ಚಿ ಬಿಳ್ಳಿಸಿದೆ.
ಮಾನುಕೆ ಎಂಬ ಹಳ್ಳಿಯಲ್ಲಿ ಕಾರ್ನಲ್ಲಿ ಹೋಗುತ್ತಿದ್ದಾಗ ಗುರುವೀರ್ ಸಿಂಗ್ ತನ್ನ ಸಹೋದರಿಯರನ್ನು ಹೊರಗೆಳೆದು ಗುಂಡೇಟು ನೀಡಿದ್ದಾನೆ. ತೀವ್ರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಇಬ್ಬರೂ ಯುವತಿಯರು ಹಳ್ಳಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಯುವತಿಯರು ಯುವಕನೊಬ್ಬನೊಂದಿಗೆ ಸಲುಗೆಯಿಂದ ಇದ್ದಿದ್ದಕ್ಕೆ ಗುರುವೀರ್ ಸಿಂಗ್ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಇನ್ನು ಈ ಘಟನೆ ಬಗ್ಗೆ ಆಘಾಥ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು, ಕೂಡಲೇ ತ್ವರಿತ ತನಿಖೆ ನಡೆಸಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಆದೇಶ ಮಾಡಿದ್ದಾರೆ. (ಏಜೇನ್ಸಿಸ್).