ನವದೆಹಲಿ: ಯುವಜನತೆಗೆ ಬಿಜೆಪಿ ಮೇಲೆ ಭರವಸೆ ಇದೆ. ಹೀಗಾಗಿ ಜಾತಿವಾದ ರಾಜಕಾರಣಕ್ಕೆ ತಕ್ಕ ಪಾಠವನ್ನು ರಾಜ್ಯದ ಯುವಜನತೆ ಕಲಿಸಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ಗುಜರಾತ್ನಲ್ಲಿ ಐತಿಹಾಸಿಕ ಗೆಲುವಿಗೆ ಸಾಕ್ಷಿಯಾದ ಸಂಭ್ರಮದಲ್ಲಿರುವ ಮೋದಿ, ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ಧೇಶಿಸಿ ಮಾತನಾಡಿದರು.
ಗುಜರಾತ್ನಲ್ಲಿ ಜಾತಿ, ಮತ, ವರ್ಗಗಳನ್ನು ಮೀರಿ ಜನತೆ ಬಿಜೆಪಿಗೆ ಮತ ನೀಡಿದ್ದಾರೆ. ಈ ಗೆಲುವಿಗೆ ಕಾರಣರಾದ ಗುಜರಾತಿಗಳಿಗೆ ನಾನು ಮತ್ತೊಮ್ಮೆ ಭರವಸೆ ನೀಡುತ್ತಿದ್ದೇನೆ. ಬಿಜೆಪಿ ಸರ್ಕಾರದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಮೋದಿ ಹೇಳಿದರು.
ಭಾರತ ಅಮೃತಕಾಲದ ಪ್ರವೇಶ ಮಾಡುತ್ತಿದೆ. ದಲಿತರು, ಬಡವರು, ಶೋಷಿತ ವರ್ಗದ ಸಮಗ್ರ ಅಭಿವೃದ್ಧಯಿಂದಾಗಿ ಗುಜರಾತ್ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಪ್ರಚಂದ ಗೆಲುವು ದೇಶದಲ್ಲಿ ಹೊಸ ಭಾಷ್ಯ ಬರೆದಿದೆ. ಈ ಗೆಲುವಿಗೆ ಪ್ರತಿಯೊಬ್ಬ ಕಾರ್ಯಕರ್ತನ ಶ್ರಮವೇ ಕಾರಣ ಎಂದು ಮೋದಿ ಹೇಳಿದರು.