ನ್ಯೂಸ್

ಪ್ರಧಾನಿ ಮೋದಿಯನ್ನು ಸ್ವಾಗತಿಸಿದ ಲೋಹದ ಹಕ್ಕಿಗಳು!

Webdesk - Athul Damale

ಬೆಂಗಳೂರು: ನಿಗದಿಗಿಂತ ಮೊದಲೇ ರಾಜಭವನದಿಂದ ಹೊರಟ ಪ್ರಧಾನಿ ಮೋದಿ (ಬೆಳಗ್ಗೆ 8.35ರ ಹೊತ್ತಿಗೆ) ರಸ್ತೆ ಮಾರ್ಗವಾಗಿ ಮೇಖ್ರೀ ರಸ್ತೆಯಲ್ಲಿರುವ HQTC ಹೆಲಿಪ್ಯಾಡ್​ಗೆ ಆಗಮಿಸಿದರು. ಅಲ್ಲಿಂದ ಯಲಹಂಕ ವಾಯುನೆಲೆಗೆ ವಾಯು ಮಾರ್ಗವಾಗಿ Mi17 ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸಿದರು. ಈ ಸಂದರ್ಭ ಅವರೊಂದಿಗೆ ರಾಜ್ಯಪಾಲರಾದ ಥಾವರ್​ ಚಂದ್​ ಗೆಹ್ಲೋಟ್​ ಕೂಡ ಸಾಥ್ ನೀಡಿದರು.

ಮೇಖ್ರಿ ರಸ್ತೆಯಲ್ಲಿರುವ ಹೆಲಿಪ್ಯಾಡ್​ನಿಂದ ವಾಯುಮಾರ್ಗವಾಗಿ ಬಂದ ಪ್ರಧಾನಿ ಮೋದಿ, ಕಾರ್ಯಕ್ರಮದ ಸ್ಥಳಕ್ಕೆ ರಸ್ತೆ ಮಾರ್ಗವಾಗಿ ಬಂದರು.

ವೇದಿಕೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೆಲಿಕಾಪ್ಟರ್​ಗಳು ತ್ರಿವರ್ಣ ಧ್ವಜ, ಸೇನೆ ಧ್ವಜ ಹಾಗೂ ಏರೋ ಇಂಡಿಯಾ ಧ್ವಜ ಹಾಗೂ ಸೂರ್ಯ ಕಿರಣ್ ತ್ರಿವರ್ಣ ಬಣ್ಣದ ಮೂಲಕ ಸ್ವಾಗತಿಸಿದವು.