ನ್ಯೂಸ್

ಇನ್ಮೇಲೆ ರಷ್ಯಾದಿಂದ ಭಾರತ ತೈಲ ಖರೀದಿಸಲ್ಲ; ಮೋದಿ ನನಗೆ ಭರವಸೆ ಕೊಟ್ಟಿದ್ದಾರೆ: Donald Trump

ನ್ಯೂಯಾರ್ಕ್: ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್( Donald Trump) ಗುರುವಾರ ಹೇಳಿದ್ದಾರೆ.

"ರಷ್ಯಾದ ಜೊತೆ ಭಾರತ ತೈಲ ಖರೀದಿಸುತ್ತಿರುವುದು ನನಗೆ ಸಂತೋಷವಾಗಿರಲಿಲ್ಲ ಮತ್ತು ಅವರು ಇಂದು ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ನನಗೆ ಭರವಸೆ ನೀಡಿದರು" ಎಂದು ಟ್ರಂಪ್ ಶ್ವೇತಭವನದ ಕಾರ್ಯಕ್ರಮದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಈ ನಡೆಯನ್ನು ಟ್ರಂಪ್ ಮಾಸ್ಕೋವನ್ನು ಆರ್ಥಿಕವಾಗಿ ಪ್ರತ್ಯೇಕಿಸುವ ಪ್ರಯತ್ನಗಳಲ್ಲಿ "ದೊಡ್ಡ ಹೆಜ್ಜೆ" ಎಂದು ಬಣ್ಣಿಸಿದ್ದಾರೆ. ಈಗ ನಾವು ಚೀನಾವನ್ನು ಅದೇ ರೀತಿ ಮಾಡುವಂತೆ ಮಾಡಲಿದ್ದೇವೆ ಎಂದಿದ್ದಾರೆ.

ಪ್ರಧಾನಿ ಮೋದಿ ಟ್ರಂಪ್‌ಗೆ ಅಂತಹ ಬದ್ಧತೆಯನ್ನು ನೀಡಿದ್ದಾರೆಯೇ ಎಂಬ ಬಗ್ಗೆ ಇಮೇಲ್ ಮೂಲಕ ಬಂದ ಪ್ರಶ್ನೆಗಳಿಗೆ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಕ್ಷಣ ಪ್ರತಿಕ್ರಿಯಿಸಲಿಲ್ಲ.(ಏಜೆನ್ಸೀಸ್​)