ಕೋಕ್ರಜಾರ್: ಕೇವಲ ನಲವತ್ತು ಗಂಟೆಗಳ ಅವಧಿಯಲ್ಲಿ ರಾಹುಲ್ ಗಾಂಧಿ ಅವರ ಏಟಿನ ಹೇಳಿಕೆ ಮತ್ತೊಮ್ಮೆ ಅವರ ಹೆಸರು ಉಲ್ಲೇಖಿಸದೆಯೇ ಎದುರೇಟು ನೀಡಿ ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆದಿದ್ದಾರೆ.
ಕೋಕ್ರಜಾರ್ನಲ್ಲಿ ಇಂದು ಬೋಡೋ ಶಾಂತಿ ಒಪ್ಪಂದದ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು, ಇದೊಂದು ಐತಿಹಾಸಿಕ ಕಾರ್ಯಕ್ರಮ. ಶಾಂತಿ ಪ್ರಿಯ ಅಸ್ಸಾಂನಲ್ಲಿ ಜನ ಬಯಸುತ್ತಿರುವ ವಾತಾವರಣ ನಿರ್ಮಾಣವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಇಷ್ಟೊಂದು ಜನ ಇಲ್ಲಿ ನೆರೆದಿರುವುದು ಸಂತೋಷದ ವಿಚಾರ. ನಿಮ್ಮ ಪ್ರೀತಿಯ ರಕ್ಷಣೆ ಇರುವಾಗ ಯಾವುದೇ ಏಟಿಗೂ ನಾನು ಹೆದರಬೇಕಾಗಿಲ್ಲ ಎಂದು ಹೇಳುವ ಮೂಲಕ ಮತ್ತೊಮ್ಮೆ ಪರೋಕ್ಷವಾಗಿ ರಾಹುಲ್ ಗಾಂಧಿಯವರಿಗೆ ಎದುರೇಟು ನೀಡಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದ ನಂತರದಲ್ಲಿ ಅಲ್ಲಿ ವಿರೋಧವಾಗಿ ಪ್ರತಿಭಟನೆ ನಡೆದಿದ್ದು, ಮೂವರು ಸಾವನ್ನಪ್ಪಿದ್ದರು. ಇದಾದ ನಂತರದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ಅಲ್ಲಿಗೆ ಭೇಟಿ ನೀಡಿದ್ದು, ಅವರ ಈ ಕಾರ್ಯಕ್ರಮ ದೇಶದ ಗಮನಸೆಳೆದಿದೆ. (ಏಜೆನ್ಸೀಸ್)
ಭಾಷಣದ ಪೂರ್ಣ ವಿವರ ವಿಡಿಯೋ ಇಲ್ಲಿದೆ.