ಚೋಳಪುರಂ; ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಜು.27) ಬಿಳಿ ಪಂಚೆ, ಶಲ್ಯ ಧರಿಸಿ ತಮಿಳುನಾಡಿನ ಚೋಳಪುರಂ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ. ರಾಜೇಂದ್ರ ಚೋಳ ಸ್ವತಃ ನಿರ್ಮಿಸಿದ 11 ನೇ ಶತಮಾನದ ಶಿವ ದೇವಾಲಯವು, ರಾಜವಂಶದ ವಾಸ್ತುಶಿಲ್ಪ ಮತ್ತು ಮಿಲಿಟರಿ ಪರಾಕ್ರಮದ ಸ್ಮಾರಕದ ಸಂಕೇತವಾಗಿದೆ.
ಇದನ್ನೂ ಓದಿ: ಈ ಆಹಾರಗಳನ್ನು ಮಿತಿ ಮೀರಿ ತಿನ್ನುತ್ತಿದ್ದೀರಾ; ಹಾಗಿದ್ರೆ ಕ್ಯಾನ್ಸರ್ ಬರುವ ಅಪಾಯ ಇರುತ್ತದೆ ಎಚ್ಚರ| health tips
ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಮಹತ್ವವನ್ನು ಹೊಂದಿರುವ ಗಂಗೈಕೊಂಡ ಚೋಳಪುರಂಅನ್ನು ಆಯ್ಕೆ ಮಾಡಿರುವುದು, ತಮಿಳುನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಕೇಂದ್ರ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ. ಈ ಕಾರ್ಯಕ್ರಮವು ಪ್ರವಾಸೋದ್ಯಮ ಮತ್ತು ಚೋಳ ರಾಜವಂಶದ ಪರಂಪರೆಯ ಐತಿಹಾಸಿಕ ಅರಿವನ್ನು, ವಿಶೇಷವಾಗಿ ಯುವ ಪೀಳಿಗೆಯಲ್ಲಿ ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.
ಗಂಗೈಕೊಂಡ ಚೋಳಪುರಂ ದೇವಾಲಯವು ತಮಿಳುನಾಡಿನ ಅರಿಯಲೂರು ಜಿಲ್ಲೆಯಲ್ಲಿದೆ. ಈ ದೇವಾಲಯವನ್ನು ಚೋಳ ರಾಜ ರಾಜೇಂದ್ರ I ಕ್ರಿ.ಶ. 1035 ರಲ್ಲಿ ನಿರ್ಮಿಸಿದನು. ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ, ದೇವಾಲಯದ ಗರ್ಭಗುಡಿಯಲ್ಲಿ 13 ಅಡಿ ಎತ್ತರದ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಇತರ ದೇವಾಲಯಗಳಲ್ಲಿನ ದೇವತೆಗಳಿಗೆ ಹೋಲಿಸಿದರೆ ಇದು ಅತ್ಯಂತ ಎತ್ತರವಾದ ದೇವಾಲಯವಾಗಿದೆ.
ಇದನ್ನೂ ಓದಿ: ತಂತ್ರಜ್ಞಾನ ಬದಲಾವಣೆ; ಮುಂದಿನ ಹಣಕಾಸು ವರ್ಷದ ವೇಳೆಗೆ 2% ಉದ್ಯೋಗಿಗಳನ್ನು ಕಡಿತಗೊಳಿಸಲಿದೆ 'TCS'| employees
ದೇಶದ ಅತಿ ಎತ್ತರದ ಮತ್ತು ಭವ್ಯವಾದ ದೇವಾಲಯಗಳ ಪಟ್ಟಿಯಲ್ಲಿ ಗಂಗೈಕೊಂಡ ಚೋಳಪುರಂ ದೇವಾಲಯದ ಹೆಸರನ್ನು ಸೇರಿಸಲಾಗಿದೆ. ಈ ದೇವಾಲಯದ ಶಿಖರ ಎತ್ತರ 55 ಮೀಟರ್ ಇದೆ. ಇದು ದೇಶದ ಅತಿ ಎತ್ತರದ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು 341 ಅಡಿ ಉದ್ದ ಮತ್ತು 100 ಅಡಿ ಅಗಲವಿದೆ. ದೇವಾಲಯದ ಅಂಗಳದ ಉದ್ದ 170 ಮೀಟರ್ ಮತ್ತು ಅಗಲ 98 ಮೀಟರ್ ಇದೆ.
1987 ರಲ್ಲಿ, ಯುನೆಸ್ಕೋ ಮಹಾ ಜೀವಂತ ಚೋಳ ದೇವಾಲಯವನ್ನು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಿತು. ದೇಶದ ಅತಿದೊಡ್ಡ ದೇವಾಲಯಗಳಲ್ಲಿ ಒಂದಾದ ಬೃಹದೇಶ್ವರ ದೇವಾಲಯದ ಜೊತೆಗೆ ಗಂಗೈಕೊಂಡ ಚೋಳಪುರಂ ದೇವಾಲಯದ ಹೆಸರೂ ದೇವಾಲಯಗಳ ಪಟ್ಟಿಯಲ್ಲಿತ್ತು .
ಗಂಗೈಕೊಂಡ ಚೋಳಪುರದಲ್ಲಿ ಅನೇಕ ದೇವಾಲಯಗಳಿದ್ದವು . ಅಂದಹಾಗೆ ಮಧ್ಯಕಾಲೀನ ಅವಧಿಯಲ್ಲಿ ಒಂದರ ನಂತರ ಒಂದರಂತೆ ಆಕ್ರಮಣಗಳಿಂದಾಗಿ ಈ ದೇವಾಲಯಗಳು ನಾಶವಾದವು. ಆದರೆ ಗಂಗೈಕೊಂಡ ಚೋಳಪುರ ದೇವಾಲಯವು ಇಂದಿಗೂ ಅಸ್ತಿತ್ವದಲ್ಲಿದೆ. ಈ ದೇವಾಲಯವನ್ನು 2017 ರಲ್ಲಿ ಪುನರ್ನಿರ್ಮಿಸಲಾಯಿತು. ಈ ಸಮಯದಲ್ಲಿ, ದೇವಾಲಯದಲ್ಲಿ ಧ್ವಜಸ್ತಂಭವನ್ನು ಸ್ಥಾಪಿಸಲಾಯಿತು ಮತ್ತು ದೇವಾಲಯದಲ್ಲಿ ಮಹಾ ಕುಂಭಾಭಿಷೇಕದ ಸಂಪ್ರದಾಯವನ್ನು ಪ್ರಾರಂಭಿಸಲಾಯ್ತು.
ರಾಜೇಂದ್ರ ಚೋಳ ಸಾಮ್ರಾಜ್ಯದ ರಾಜಧಾನಿಯನ್ನು ತಂಜಾವೂರಿನಿಂದ ಗಂಗೈಕೊಂಡ ಚೋಳಪುರಕ್ಕೆ ಸ್ಥಳಾಂತರಿಸಿದನು . ಇದರ ನಂತರ, ಇದು ಸುಮಾರು 250 ವರ್ಷಗಳ ಕಾಲ ಚೋಳ ಸಾಮ್ರಾಜ್ಯದ ರಾಜಧಾನಿಯಾಗಿ ಉಳಿಯಿತು.
(ಏಜೆನ್ಸೀಸ್)