ಆರ್ಥಿಕತೆಗೆ ಚೇತರಿಕೆ ನೀಡುವ ಸವಾಲಂತೂ ಈ ಬಾರಿ ನರೇಂದ್ರ ಮೋದಿ ಸರ್ಕಾರದ ಮುಂದಿದೆ. ಈ ಸರ್ಕಾರದ ಮೊದಲ ಅವಧಿಯಲ್ಲಿ ಬಜೆಟ್ಗಳು ಹೇಗಿದ್ದವು? ಏನೆಲ್ಲ ಹೊಸ ಕೊಡುಗೆಗಳನ್ನು ಕೊಡಲಾಯಿತು ಎಂಬುದರ ಸಂಕ್ಷಿಪ್ತ ಅವಲೋಕನ ಇಲ್ಲಿದೆ.
ಬಜೆಟ್-2014: ಮಂಡನೆ: ಜುಲೈ 10 ಮಂಡಿಸಿದವರು: ಅರುಣ್ ಜೇಟ್ಲಿ
ಪ್ರಮುಖ ಘೋಷಣೆ
- ಆದಾಯ ತೆರಿಗೆ ಮಿತಿಯಲ್ಲಿ 50 ಸಾವಿರ ರೂಪಾಯಿ ಏರಿಕೆ
- ಹೂಡಿಕೆ ಮೇಲಿನ ತೆರಿಗೆ ವಿನಾಯಿತಿ 1.5 ಲಕ್ಷ ರೂಪಾಯಿಗೆ ಹೆಚ್ಚಳ ‘
- 5 ಐಐಎಂ, ಐಐಟಿ, 4 ಏಮ್ಸ್ ಸ್ಥಾಪನೆಗೆ ಅನುದಾನ
- ನೂತನ ಯೂರಿಯಾ ನೀತಿ-
- ಸ್ವಚ್ಛ ಭಾರತ ಅಭಿಯಾನ
- ನಮಾಮಿ ಗಂಗೆ, ಜನಧನ, ಮೇಕ್ ಇನ್ ಇಂಡಿಯಾ
- ಬಜೆಟ್ ಗಾತ್ರ: 17,94,892 ಕೋಟಿ ರೂಪಾಯಿ
- ವಿತ್ತೀಯ ಕೊರತೆ: ಶೇ.4.1 (5,31,177 ಕೋಟಿ ರೂಪಾಯಿ)
ಬಜೆಟ್-2015 ಮಂಡನೆ: ಫೆಬ್ರವರಿ 28 ಮಂಡಿಸಿದವರು: ಅರುಣ್ ಜೇಟ್ಲಿ
ಪ್ರಮುಖ ಘೋಷಣೆ
- ಕಾರ್ಪೆರೇಟ್ ತೆರಿಗೆ ಶೇ.25ಕ್ಕೆ ಇಳಿಕೆ
- ಗ್ರಾಮೀಣ ಮೂಲಸೌಕರ್ಯಾಭಿವೃದ್ಧಿ ಬ್ಯಾಂಕ್ಗೆ
- 25 ಸಾವಿರ ಕೋಟಿ ರೂಪಾಯಿ ರೈತರಿಗೆ
- 8.5 ಲಕ್ಷ ಕೋಟಿ ಸಾಲ ರೂಪಾಯಿ
- ಕರ್ನಾಟಕಕ್ಕೆ ಐಐಟಿ, ಸ್ಕಿಲ್ ಇಂಡಿಯಾ
- ನೀತಿ ಆಯೋಗ ಸ್ಥಾಪನೆ ಹಾಗೂ ಪಂಚವಾರ್ಷಿಕ ಯೋಜನೆ ಅಂತ್ಯ
- ಬಜೆಟ್ ಗಾತ್ರ: 17,77,477 ಕೋಟಿ ರೂಪಾಯಿ
- ವಿತ್ತೀಯ ಕೊರತೆ: ಶೇ.3.9 (5,55,649 ಕೋಟಿ ರೂಪಾಯಿ)
ಬಜೆಟ್-2016 ಮಂಡನೆ: ಫೆಬ್ರವರಿ 29 ಮಂಡಿಸಿದವರು: ಅರುಣ್ ಜೇಟ್ಲಿ
ಪ್ರಮುಖ ಘೋಷಣೆ
- ಸ್ವಚ್ಛ ಭಾರತಕ್ಕೆ 9,500 ಕೋಟಿ ರೂಪಾಯಿ
- ಬಡ ಕುಟುಂಬಗಳಿಗೆ ಎಲ್ಪಿಜಿ ವಿತರಣೆ
- ಪ್ರಧಾನ ಮಂತ್ರಿ ಜನೌಷಧ ಯೋಜನೆ -ರಸ್ತೆ ನಿರ್ಮಾಣಕ್ಕೆ- 97 ಸಾವಿರ ಕೋಟಿ ರೂಪಾಯಿ
- 5 ಲಕ್ಷ ಎಕರೆ ವ್ಯಾಪ್ತಿಯಲ್ಲಿ ಸಾವಯವ ಕೃಷಿ
- ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ
- ಅಂಚೆ ಕಚೇರಿಗಳಲ್ಲೂ ಎಟಿಎಂ
- ಬಜೆಟ್ ಗಾತ್ರ: 19,78,060 ಕೋಟಿ ರೂಪಾಯಿ
- ವಿತ್ತೀಯ ಕೊರತೆ: ಶೇ.3.5 (5,33,904 ಕೋಟಿ ರೂಪಾಯಿ)
ಬಜೆಟ್-2017 ಮಂಡನೆ: ಫೆಬ್ರವರಿ 1 ಮಂಡಿಸಿದವರು: ಅರುಣ್ ಜೇಟ್ಲಿ
ಪ್ರಮುಖ ಘೋಷಣೆ
- ಕೃಷಿ ಭೂಮಿ ಪರೀಕ್ಷೆ ಕೃಷಿ ವಿಜ್ಞಾನ ಕೇಂದ್ರ
- ಕೃಷಿವಲಯಕ್ಕೆ 10 ಲಕ್ಷ ಕೋಟಿ ರೂಪಾಯಿ ಸಾಲ
- ಗ್ರಾಮೀಣ ಮೂಲಸೌಕರ್ಯ ನಿರ್ಮಾಣಕ್ಕೆ 3 ಲಕ್ಷ ಕೋಟಿ ರೂಪಾಯಿ
- ಡಿಜಿಟಲ್ ಇಂಡಿಯಾ’ ಯೋಜನೆಯಲ್ಲಿ ಭೀಮ್ ಆಪ್
- ಬಜೆಟ್ ಗಾತ್ರ: 21,46,735 ಕೋಟಿ ರೂಪಾಯಿ
- ವಿತ್ತೀಯ ಕೊರತೆ: ಶೇ.3.2 (5,46,532 ಕೋಟಿ ರೂಪಾಯಿ)
ಬಜೆಟ್-2018 ಮಂಡನೆ: ಫೆಬ್ರವರಿ 1 ಮಂಡಿಸಿದವರು: ಅರುಣ್ ಜೇಟ್ಲಿ
ಪ್ರಮುಖ ಘೋಷಣೆ
- ಗ್ರಾಮೀಣಾಭಿವೃದ್ಧಿಗೆ ಒಟ್ಟು 14.34 ಲಕ್ಷ ಕೋಟಿ ರೂಪಾಯಿ
- ಪ್ರಮುಖ ಕೃಷಿ ಉತ್ಪನ್ನಗಳಿಗೆ ಎಂಎಸ್ಪಿ ನಿಗದಿ
- 10 ಕೋಟಿ ಕುಟುಂಬಗಳಿಗೆ ಆಯುಷ್ಮಾನ ಭಾರತ ವಿಮಾ ಯೋಜನೆ
- ಮೂಲಸೌಕರ್ಯ ಅಭಿವೃದ್ಧಿಗೆ 5.97 ಲಕ್ಷ ಕೋಟಿ ರೂಪಾಯಿ
- 2022ರೊಳಗೆ ರೈತರ ಆದಾಯ ದ್ವಿಗುಣ.
- ಬಜೆಟ್ ಗಾತ್ರ: 24,42,213 ಕೋಟಿ ರೂಪಾಯಿ
- ವಿತ್ತೀಯ ಕೊರತೆ: ಶೇ.3.3 (6,24,276 ಕೋಟಿ ರೂಪಾಯಿ)
ಬಜೆಟ್-2019 ಮಂಡನೆ: ಫೆಬ್ರವರಿ 1 ಮಂಡಿಸಿದವರು: ಪಿಯೂಷ್ ಗೋಯಲ್
ಪ್ರಮುಖ ಘೋಷಣೆ
- ಆದಾಯ ತೆರಿಗೆ ಮಿತಿ 5 ಲಕ್ಷ ರೂಪಾಯಿಗೆ ಏರಿಕೆ
- 10 ಕೋಟಿ ಕಾರ್ವಿುಕರಿಗೆ 3 ಸಾವಿರ ರೂಪಾಯಿ ಪಿಂಚಣಿ
- ರೈತರ ಖಾತೆಗೆ ವಾರ್ಷಿಕ - 6 ಸಾವಿರ ರೂಪಾಯಿ
- 24 ಗಂಟೆಯಲ್ಲಿ ಟಿಡಿಎಸ್ ಪಾವತಿಗೆ ಕ್ರಮ
- ಬಜೆಟ್ ಗಾತ್ರ: 27.84 ಲಕ್ಷ ಕೋಟಿ ರೂಪಾಯಿ
- ವಿತ್ತೀಯ ಕೊರತೆ: ಶೇ.3.4 (7,03,999 ಕೋಟಿ ರೂಪಾಯಿ)
ಬಜೆಟ್-2019 (ಮಧ್ಯಂತರ) ಮಂಡನೆ: ಜುಲೈ 5 ಮಂಡಿಸಿದವರು: ನಿರ್ಮಲಾ ಸೀತಾರಾಮನ್
ಪ್ರಮುಖ ಘೋಷಣೆ
- 2022ರ ವೇಳೆಗೂ ಪ್ರತಿ ಮನೆಗೂ ವಿದ್ಯುತ್, ಎಲ್ಪಿಜಿ ಸಂಪರ್ಕ
- ಜಿಎಸ್ಟಿಯಿಂದ 17 ತೆರಿಗೆ, 20 ನೀತಿ ರದ್ದು
- ನೈರುತ್ಯ ರೈಲ್ವೆಗೆ 2,536 ಕೋಟಿ ರೂಪಾಯಿ
- 300 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಅನುಮೋದನೆ
- ಬಜೆಟ್ ಗಾತ್ರ: 27.86 ಲಕ್ಷ ಕೋಟಿ ರೂಪಾಯಿ