ವಾರಾಣಸಿ: ವಾರಣಾಸಿಯ ಸಂಸದರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರದ ವ್ಯಕ್ತಿಯೊಬ್ಬರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ವಾರಾಣಸಿಯ 'ಡೋಮ್ ರಾಜಾ' ಎಂದೇ ಕರೆಯಲಾಗುತ್ತಿದ್ದ 55 ವರ್ಷದ ಜಗದೀಶ್ ಚೌಧರಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಪವಿತ್ರ ನಗರದ ಅವಿಚ್ಛಿನ್ನ ಸಂಪ್ರದಾಯದ ಪ್ರತಿನಿಧಿಯಾಗಿದ್ದರು ಜಗದೀಶ್ ಚೌಧರಿ ಎಂದು ಹೇಳಿದ್ದಾರೆ.
ಇಷ್ಟಕ್ಕೂ ಯಾರೂ ಈ ಜಗದೀಶ್ ಚೌಧರಿ, ಇವರನ್ನೇಕೆ ಡೋಮ್ ರಾಜಾ ಎಂದು ಕರೆಯಲಾಗುತ್ತದೆ ಎಂಬುದನ್ನು ನೋಡುವುದಾದರೆ..., ವಾರಾಣಸಿಯ ವಿವಿಧ ಘಾಟ್ಗಳಲ್ಲಿ ಅಂತ್ಯಕ್ರಿಯೆಗಳನ್ನು ನಡೆಸಲಾಗುತ್ತದೆ. ಈ ಅಂತ್ಯಕ್ರಿಯೆ ನಡೆಸುವವರ ಮುಖ್ಯಸ್ಥರಾಗಿದ್ದವರು ಈ ಜಗದೀಶ್ ಚೌಧರಿ. ಈ ಕಾರಣಕ್ಕೆ ಇವರನ್ನು ಡೋಮ್ ರಾಜಾ ಎಂದು ಕರೆಯಲಾಗುತ್ತದೆ.
ಮೋದಿ ಸಂತಾಪ ಸೂಚಿಸುವದಕ್ಕೆ ಇನ್ನೊಂದು ಕಾರಣವೂ ಇದೆ. ಮೋದಿ ವಾರಾಣಸಿಯಿಂದ ಲೋಕಸಭಾ ಕ್ಷೇತ್ರಕ್ಕೆ ಸ್ಫರ್ಧೆಗೆ ಇಳಿದಾಗ ಅವರ ನಾಮಪತ್ರದಲ್ಲಿ ಡೋಮ್ರಾಜಾ ಕೂಡ ಒಬ್ಬ ಸೂಚಕರಾಗಿದ್ದರು.
ಡೋಮ್ ರಾಜಾ ಎನ್ನುವುದು ಬಹುಮುಖ್ಯ ಗೌರವವೂ ಆಗಿದೆ. ಜಗದೀಶ್ ಚೌಧರಿ ಅವರಿಗೆ ವಾರಾಣಸಿಯ ಇನ್ನೊಂದು ಹೆಸರಾದ ಕಾಶಿಯ ಸಾಂಸ್ಕೃತಿಕ ಪರಂಪರೆಯಲ್ಲಿ ಪ್ರಮುಖರಾಗಿದ್ದಾರೆ. ಜೀವನದುದ್ದಕ್ಕೂ ಡೋಮ್ ರಾಜಾ ಇಲ್ಲಿನ ಸಾಮಾಜಿಕ ಸೌಬಾರ್ದತೆಗಾಗಿ ಶ್ರಮಿಸಿದ್ದಾರೆ ಎಂದು ಮೋದಿ ಬಣ್ಣಿಸಿದ್ದಾರೆ.
ಇನ್ನೊಂದು ಮುಖ್ಯ ವಿಷಯವೆಂದರೆ, ಅಂತ್ಯಕ್ರಿಯೆ ನಡೆಸಲಾಗುವ ಮಣಿಕರ್ಣಿಕಾ ಹಾಗೂ ಹರಿಶ್ಚಂದ್ರ ಘಾಟ್ಗಳಲ್ಲಿ ಬೆಂಕಿ ನಂದದಂತೆ ನೋಡಿಕೊಳ್ಳುವುದು ಇವರ ಕುಟುಂಬದ ಕಾಯಕವಾಗಿತ್ತು. ಈ ಬೆಂಕಿಯಿಂದಲೇ ಇವರ ಮನೆಗಳಲ್ಲಿ ಆಹಾರ ತಯಾರಿಸಲಾಗುತ್ತದೆ ಎಂದು ಹೇಳಲಾಗುತ್ತದೆ.