ನವದೆಹಲಿ: ಇಂದಿರಾ ಗಾಂಧಿ ನಂತರ 40 ವರ್ಷಗಳ ಬಳಿಕ ಗ್ರೀಸ್‌ಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಎನ್ನುವ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಾತ್ರರಾಗಿದ್ದಾರೆ.
ಈ ಹಿಂದೆ 1983ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ದೇಶಕ್ಕೆ ಭೇಟಿ ನೀಡಿದ್ದರು. ಗ್ರೀಕ್ ಭಾಗದಲ್ಲಿ, ಪಿಎಂ ಕಿರಿಯಾಕೋಸ್ ಮಿಟ್ಸೊಟಾಕಿಸ್ 2019ರಲ್ಲಿ ನವದೆಹಲಿಗೆ ಭೇಟಿ ನೀಡಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್ ಶೃಂಗಸಭೆಯನ್ನು ಮುಕ್ತಾಯಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗುರುವಾರ ತಮ್ಮ ಗ್ರೀಕ್ ರಾಜಧಾನಿ ಅಥೆನ್ಸ್ ಗೆ ಆಗಮಿಸಿದರು, ಅಲ್ಲಿ ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೋಟಾಕಿಸ್ ಹಾಗೂ ಸರ್ಕಾರದ ಪ್ರತಿನಿಧಿಗಳು ಗೌರವಪೂರ್ವ ಸ್ವಾಗತಿಸಿದ್ದಾರೆ. ಕಳೆದ 40 ವರ್ಷಗಳಲ್ಲಿ ಗ್ರೀಸ್ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನಿ ಮೋದಿ ಆಗಿದ್ದಾರೆ.
ಇದನ್ನೂ ಓದಿ: ನಿಲ್ಲದ ರೀಲ್ಸ್ ಸ್ಟಾರ್ ವಿನೀತನ ಪುಂಡಾಟ: ಮೊದಲು ರೇಪ್, ನಂತ್ರ ಸುಲಿಗೆ, ಇದೀಗ ಚಿನ್ನಾಭರಣ ಪಡೆದು ಅತ್ಯಾಚಾರ
ವಿದೇಶಾಂಗ ಸಚಿವಾಲಯದ ಪ್ರಕಟಣೆ ಪ್ರಕಾರ, ದಕ್ಷಿಣ ಆಫ್ರಿಕಾಕ್ಕೆ ಅವರ ಭೇಟಿಯ ನಂತರ, ಪ್ರಧಾನ ಮಂತ್ರಿ ಗ್ರೀಸ್‌ನ ಪ್ರಧಾನ ಮಂತ್ರಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ಅವರ ಆಹ್ವಾನದ ಮೇರೆಗೆ ಇಂದು ಗ್ರೀಸ್ ಗೆ ಅಧಿಕೃತ ಭೇಟಿ ನೀಡಿದ್ದಾರೆ. ಕಳೆದ 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿಯಾಗಿದೆ ಎಂದು ಹೇಳಿದೆ.
ಈ ಕುರಿತಾಗಿ ಮೋದಿ ಅವರು ಟ್ವೀಟ್ ಮಾಡಿ, "ನಾನು ಅಥೆನ್ಸ್‌ಗೆ ಬಂದಿಳಿದಿದ್ದೇನೆ. ಭಾರತ-ಗ್ರೀಸ್ ಸ್ನೇಹವನ್ನು ಗಾಢಗೊಳಿಸುವ ಉದ್ದೇಶದಿಂದ ಗ್ರೀಸ್ ಭೇಟಿಯನ್ನು ಎದುರು ನೋಡುತ್ತಿದ್ದೇನೆ. ನಾನು @PrimeministerGR ಕಿರಿಯಾಕೋಸ್ ಮಿಟ್ಸೊಟಾಕಿಸ್ ಅವರೊಂದಿಗೆ ಮಾತುಕತೆ ನಡೆಸುತ್ತೇನೆ ಮತ್ತು ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸುತ್ತೇನೆ." ಎಂದು ಟ್ವೀಟ್ ಮಾಡಿದ್ದಾರೆ.
ನಾವು ಅವರನ್ನು ಸ್ವಾಗತಿಸಲು ತುಂಬಾ ಸಂತೋಷಪಡುತ್ತೇವೆ. ಇದು 40 ವರ್ಷಗಳ ನಂತರ ಭಾರತದ ಪ್ರಧಾನಿಯ ಮೊದಲ ಭೇಟಿಯಾಗಿದೆ. ಈ ಭೇಟಿಯ ಸಮಯದಲ್ಲಿ ನಾವು ನಮ್ಮ ಸುದೀರ್ಘ ಸ್ನೇಹವನ್ನು ನವೀಕರಿಸುತ್ತೇವೆ ಎಂದು ಗ್ರೀಕ್ ರಾಯಭಾರಿ ಡಿಮಿಟ್ರಿಯೊಸ್ ಇಯೊನೊವ್ ತಿಳಿಸಿದ್ದಾರೆ.