ನ್ಯೂಸ್

Model Towel Dance At India Gate: ಟವೆಲ್ ಸುತ್ತಿಕೊಂಡು ಇಂಡಿಯಾ ಗೇಟ್‌ ಮುಂದೆ ಮಾಡೆಲ್‌ ಡ್ಯಾನ್ಸ್

Model towel dance at India Gate : 2017 ರ ಮಿಸ್ ಕೋಲ್ಕತ್ತಾ ಸ್ಪರ್ಧೆಯ ವಿಜೇತೆಯಾಗಿರುವ ಕೋಲ್ಕತ್ತಾ ಮೂಲದ ರೂಪದರ್ಶಿ ಸನ್ನತಿ ಮಿತ್ರ ಅವರು ದೆಹಲಿಯಲ್ಲಿ ಇಂಡಿಯಾ ಗೇಟ್‌ನ ಮುಂದೆ ಟವೆಲ್‌ ಧರಿಸಿ ನಿಂತು ನೃತ್ಯ ಮಾಡಿದ್ದಾರೆ. ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಸಾವಿರಾರು ಪ್ರವಾಸಿಗರು ಭೇಟಿ ನೀಡುವಂತಹ ಇಂಡಿಯಾ ಗೇಟ್‌ ಬಳಿ ಬರೀ ಟವೆಲ್‌ ಸುತ್ತಿಕೊಂಡು ಬೋಲ್ಡ್‌ ಡಾನ್ಸ್‌ ಮಾಡಿದ್ದಾಳೆ. ಈಕೆಯ ಈ ಮಿತಿಮೀರಿದ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಅಂತರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲು ಅಪ್‌ಲೋಡ್ ಮಾಡಲಾದ ಈ ವೀಡಿಯೊ ತ್ವರಿತವಾಗಿ ವೈರಲ್ ಆಗಿದ್ದು, ಕೆಲವೇ ಗಂಟೆಗಳಲ್ಲಿ Instagram ನಲ್ಲಿ 4.8 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಅವರು ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ, “ಅಂತರರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು. ನೀವೆಲ್ಲರೂ ನಿಮ್ಮ ಧೈರ್ಯ, ದಯೆ ಮತ್ತು ಸಹಾನುಭೂತಿಯಿಂದ ಇತರರನ್ನು ಪ್ರೇರೇಪಿಸಲು ಮತ್ತು ಪ್ರೇರೇಪಿಸುವುದನ್ನು ಮುಂದುವರಿಸಲಿ ಎಂದು ಬರೆದುಕೊಂಡು ವಿಡಿಯೋ ಶೇರ್​​ ಮಾಡಿದ್ದಾಳೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಾಮೆಂಟ್​ ಮಾಡುವ ಮೂಲಕವಾಗಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಮೀತಿ ಮೀರಿ ವರ್ತಿಸುತ್ತಿದ್ದೀರ.... ಪೊಲೀಸರು ಅಲ್ಲಿ ಇರಲಿಲ್ಲವೇ... ಇದೆಲ್ಲ ಸಭ್ಯತೆನಾ?... ಯಾಖೆ ಹೀಗೆಲ್ಲ ಮಾಡ್ತೀರ ಎಂದು ನೆಟ್ಟಿಗರು ಕಾಮೆಂಟ್​​ ಮಾಡಿ ಯುವತಿ ವಿಡಿಯೋಗೆ ಆಕ್ರೋಶ ಹೊರ ಹಾಕುತ್ತಿದ್ದಾರೆ.