ನ್ಯೂಸ್

ತನ್ನ ರಕ್ತವನ್ನೇ ತಾನೇ ಕುಡಿತಾಳೆ; ಈಕೆ ಬ್ಯೂಟಿ ಸೀಕ್ರೇಟ್ ಇದೆ...

ನವದೆಹಲಿ: ಮಹಿಳೆಯೊಬ್ಬಳು ತನ್ನ ರಕ್ತವನ್ನು ತಾನೇ ಕುಡಿಯುತ್ತಿದ್ದಾಳೆ ಎಂದು ಹೇಳಿದ್ದು, ಸೋಶಿಯಲ್​​ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.

ಮಾಡೆಲ್ ಸೋಫಿಯಾ ಕ್ಲೆರಿಕಿ ಮಾದಕ ಮೈಮಾಟದಿಂದಲೇ ಸೋಫಿಯಾ ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಟ್ರೆಂಡ್​​ ಸೆಟ್​​ ಕ್ರಿಯೇಟ್​​ ಮಾಡಿದ್ದಾಳೆ. ಪ್ರತೀ ಬಾರಿ ಆಕೆ ಹಾಟ್​​ ಫೋಟೋಗಳನ್ನು ಪೋಸ್ಟ್​​​​ ಮಾಡಿದಾಗ ಆಕೆಯ ಅಭಿಮಾನಿಗಳು “ಬ್ಯೂಟಿ ಸೀಕ್ರೇಟ್​​ ಏನು” ಎಂದು ಕಾಮೆಂಟ್​​ ಮಾಡುತ್ತಿದ್ದರು.

ತನ್ನ ಅಭಿಮಾನಿಗಳ ಪ್ರಶ್ನೆಗೆ ಇತ್ತೀಚೆಗಷ್ಟೇ ಉತ್ತರ ನೀಡಿದ್ದು, ಆಕೆಯ ಉತ್ತರ ಕೇಳಿ ನೆಟ್ಟಿಗರು ಶಾಕ್​​ ಆಗಿದ್ದಾರೆ. ವಯಸ್ಸಾದರೂ ಹಾಟ್​​​​ ಆಗಿ ಕಾಣಲು ನಾನು ನನ್ನ ರಕ್ತವನ್ನೇ ಕುಡಿಯುತ್ತೇನೆ ಎಂದು ಸೋಫಿಯಾ ಹೇಳಿಕೊಂಡಿದ್ದಾಳೆ.

“ನಾನು ನನ್ನ ರಕ್ತವನ್ನು ಜ್ಯೂಸ್​​ನೊಂದಿಗೆ ಬೆರೆಸಿ ಕುಡಿಯುತ್ತೇನೆ. ನನ್ನ ಬ್ಯಾಗಿನಲ್ಲಿ ಟ್ಯೂಬ್​​​​ನಲ್ಲಿ ರಕ್ತ ಇರಿಸಿಕೊಂಡು ಹೋಗುತ್ತೇನೆ” ಎಂದು ಹೇಳಿಕೊಂಡಿದ್ದಾಳೆ. ವಿಚಿತ್ರ ಅಭ್ಯಾಸವನ್ನು ಕಂಡು ನೆಟ್ಟಿಗರು ಹಾಗೂ ಆಕೆಯ ಅಭಿಮಾನಿಗಳು ಫುಲ್​​ ಶಾಕ್​​ ಆಗಿ ಹೋಗಿದ್ದಾರೆ.