ನ್ಯೂಸ್

ಮಹಿಳೆಯ ಜೇಬಿನಲ್ಲಿದ್ದ ಫೋನ್ ಸ್ಫೋಟ! mobile explodes ವಿಡಿಯೋ ನೋಡಿ..

Webdesk - Savina Naik

ಬ್ರೆಜಿಲ್: ( mobile explodes ) ಮಹಿಳೆಯೊಬ್ಬರು ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಖರೀದಿಸುತ್ತಿರುವ ವೇಳೆ ಆಕೆಯ ಜೇಬಿನಲ್ಲಿಟ್ಟಿದ್ದ ಮೊಬೈಲ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಳ್ಳುತ್ತದೆ. ಈ ಘಟನೆ ಬ್ರೆಜಿಲ್​​ನಲ್ಲಿ ನಡೆದಿದೆ ಎಂದು ಹೇಳಲಾಗುತ್ತದೆ.

ಮಹಿಳೆಯ ಹಿಂದಿನ ಜೇಬಿನಲ್ಲಿ ಇಟ್ಟಿದ್ದ ಮೊಟೊರೊಲಾ E32 ಫೋನ್ ಸ್ಫೋಟಗೊಂಡು ಆಕೆಯ ಜೀನ್ಸ್‌ಗೆ ಬೆಂಕಿ ಹತ್ತಿಕೊಂಡಿದೆ. ಆ ಮಹಿಳೆಗೆ ಗಂಭೀರವಾಗಿ ಗಾಯವಾಗಿದೆ ಎನ್ನಲಾಗಿದೆ.

ಈ ರೀತಿ ಮೊಬೈಲ್ ಫೋನ್‌ಗಳು ಏಕೆ ಸ್ಫೋಟಗೊಳ್ಳುತ್ತವೆ?, ಇದರ ಹಿಂದಿನ ಕಾರಣ ಏನು? ಎನ್ನುವ ಪ್ರಶ್ನೆ  ನೆಟ್ಟಿಗರು ಮಾಡುತ್ತಿದ್ದಾರೆ. 

ನಿಮ್ಮ ಫೋನ್‌ನಲ್ಲಿ ನೀಡಿರುವ ಚಾರ್ಜರ್ ಬಿಟ್ಟು ಇತರೆ ಚಾರ್ಜರ್ ಬಳಕೆ ಮಾಡಿದರೆ ಸ್ಮಾರ್ಟ್‌ಪೋನ್‌ಗಳು ಸ್ಪೋಟಗೊಳ್ಳುವ ಸಾಧ್ಯತೆನೆ ಹೆಚ್ಚು. ಒಂದು ಫೋನ್‌ಗೂ ಮತ್ತು ಇನ್ನೊಂದು ಫೋನ್‌ ಚಾರ್ಜಿಂಗ್ ಸ್ಟ್ರೆಂತ್ ಬದಲಾಗಿರುತ್ತದೆ.

ಅತೀ ಹೆಚ್ಚು ಘಂಟೆಗಳ ಕಾಲ ಮೊಬೈಲ್ ಅನ್ನು ಚಾರ್ಜ್​ಗೆ ಹಾಕಿಡುವ ಅಭ್ಯಾಸ ಇದ್ದರೆ ಇಂದಿನಿಂದಲೇ ಬಿಟ್ಟುಬಿಡಿ. ನಿಮ್ಮ ಫೋನ್ ಶೇಕಡಾ 90ರಷ್ಟು ಚಾರ್ಜ್ ಆದ ಕೂಡಲೇ ಅನ್ ಪ್ಲಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.

ಫೋನ್ ಬಿಸಿಯಾಗುವುದು. ಫೋನ್ ಬಿದ್ದು ಒಡೆದರೆ ಅಂತಹ ಪರಿಸ್ಥಿತಿಯಲ್ಲಿ ಬ್ಯಾಟರಿಯ ಒಳಗಿನ ರಚನೆಯು ಹಾನಿಗೊಳಗಾಗಬಹುದು. ಇದು ಶಾರ್ಟ್ ಸರ್ಕ್ಯೂಟ್‌ಗೆ ಕಾರಣವಾಗಬಹುದು.

ಫೋನ್ ಅನ್ನು ದೀರ್ಘಕಾಲದವರೆಗೆ ಸೂರ್ಯನ ಬೆಳಕಿನಲ್ಲಿ ಇರಿಸಿದರೆ ಅಥವಾ ಯಾವುದೇ ಮಾಲ್‌ವೇರ್‌ನಿಂದಾಗಿ ಪ್ರೊಸೆಸರ್ ಮೇಲೆ ಅತಿಯಾದ ಒತ್ತಡ ಹೇರಿದರೆ, ಅದು ಬ್ಯಾಟರಿಗೆ ಹಾನಿಯನ್ನುಂಟುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಫೋನ್ ಸ್ಫೋಟಗೊಳ್ಳುತ್ತದೆ.