ಅಂಬೇಡ್ಕರ್ ಭವನದಲ್ಲಿ ಹದ್ದು ಮೀರದಿರಲಿ ಹದಿಹರೆಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಪಾಸಿಟಿವ್ ಮೈಂಡ್ ಆಸ್ಪತ್ರೆಯ ಮನೋವೈದ್ಯ ಡಾ. ಎಸ್.ಟಿ.ಅರವಿಂದ್ ಉದ್ಘಾಟಿಸಿದರು. ಎನ್.ಪಿ.ಕಿರಣ್, ಡಾ. ಐಶ್ವರ್ಯ ಅರವಿಂದ್, ಶಂಕರ್ ಸರ್ಜಿ, ಗಿರೀಶ್ ಒಡೆಯರ್, ಶೃತಿ ಅಶೋಕ್, ಎಸ್.ಪ್ರದೀಪ್, ಭಾಸ್ಕರ್ ಶೆಟ್ಟಿ, ಅಶ್ವಿನಿ ಗಿರಿಮಾಜಿ, ಘನಶಾಮ್ ಗಿರಿಮಾಜಿ ಇದ್ದರು. 
ನ್ಯೂಸ್

ಮಿತಿ ಮೀರುತ್ತಿದೆ ಮೊಬೈಲ್ ವ್ಯಾಮೋಹ: ಡಾ. ಎಸ್.ಟಿ.ಅರವಿಂದ್

ಶಿವಮೊಗ್ಗ: ಯಶಸ್ಸು, ಜ್ಞಾನ ಎಂಬುದು ಯಾರ ಸ್ವತ್ತೂ ಅಲ್ಲ. ಮನಸ್ಫೂರ್ತಿಯಾಗಿ ಜೀವನದಲ್ಲಿ ಮುಂದೆ ಬರಬೇಕು. ಅದಕ್ಕೆ ಪರಿಪೂರ್ಣವಾಗಿ ಶ್ರಮ ಹಾಕಬೇಕಾಗುತ್ತದೆ ಎಂದು ಪಾಸಿಟಿವ್ ಮೈಂಡ್ ಆಸ್ಪತ್ರೆಯ ಮನೋವೈದ್ಯ ಡಾ. ಎಸ್.ಟಿ.ಅರವಿಂದ್ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಜೆಸಿಐ ಶಿವಮೊಗ್ಗ ಮಲ್ನಾಡ್, ಶಿವಮೊಗ್ಗ ಮಲ್ನಾಡ್ ಇನ್‌ಸ್ಟಿಟ್ಯೂಟ್ ಆಫ್ ಲೀಡರ್‌ಶಿಪ್ ಎಕ್ಸಲೆನ್ಸ್ ಹಾಗೂ ಪಾಸಿಟಿವ್ ಮೈಂಡ್ ಆಸ್ಪತ್ರೆಯ ಸಹಯೋಗದಲ್ಲಿ ಹದ್ದು ಮೀರದಿರಲಿ ಹದಿಹರೆಯ ಕುರಿತು ಉಪನ್ಯಾಸ ನೀಡಿದರು.
ಎಲ್ಲೆಡೆ ಮಾದಕ ವಸ್ತುಗಳ ಬಳಕೆ ವ್ಯಾಪಕವಾಗಿದೆ. ಜತೆಗೆ ಮೊಬೈಲ್ ವ್ಯಾಮೋಹ ಮಿತಿ ಮೀರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ಪ್ರತಿವರ್ಷ ವಿಶ್ವದಲ್ಲಿ 8ರಿಂದ 9 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ 1.5 ಲಕ್ಷ ಜನರು ಹಾಗೂ ಪ್ರತಿ 34 ನಿಮಿಷಕ್ಕೆ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಇದು ಅವರ ಮಾನಸಿಕ ಪರಿಸ್ಥಿತಿ ಸೂಕ್ಷ್ಮವಾಗಿರುವುದೇ ಕಾರಣವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜೆಸಿಐ ಮಲ್ನಾಡ್ ಶಿವಮೊಗ್ಗದ ಅಧ್ಯಕ್ಷ ಎನ್.ಪಿ.ಕಿರಣ್ ಪ್ರಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು ಮುಂದೆಯೂ ಮತ್ತಷ್ಟು ಜನಪರ ಕೆಲಸಗಳನ್ನು ಮಾಡಲಾಗುವುದು ಎಂದರು. ಡಾ. ಐಶ್ವರ್ಯ ಅರವಿಂದ್, ಕಾರ್ಯಕ್ರಮ ನಿರ್ದೇಶಕ ಶಂಕರ್ ಸರ್ಜಿ, ಸಹ ನಿರ್ದೇಶಕ ಗಿರೀಶ್ ಒಡೆಯರ್, ಜೆಸಿಗಳಾದ ಶೃತಿ ಅಶೋಕ್, ಎಸ್.ಪ್ರದೀಪ್, ಭಾಸ್ಕರ್ ಶೆಟ್ಟಿ, ಅಶ್ವಿನಿ ಗಿರಿಮಾಜಿ, ಘನಶಾಮ್ ಗಿರಿಮಾಜಿ ಇತರರಿದ್ದರು.