MLC K. Kavitha: ತೆಲಂಗಾಣ ರಾಜಕೀಯದಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆ ಕುರಿತು ಕಿಡಿಕಾರಿರುವ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಮತ್ತು ಎಂಎಲ್‌ಸಿ ಕೆ. ಕವಿತಾ, ತಮ್ಮದೇ ಪಕ್ಷದ ಕೆಲವು ಸದಸ್ಯರ ವಿರುದ್ಧ ಗಂಭೀರ ಆರೋಪಗಳನ್ನು ಎಸಗಿದ್ದಾರೆ.
"ಬಿಆರ್‌ಎಸ್ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ಕೆಲ ಪ್ರಯತ್ನಗಳು ನಡೆಯುತ್ತಿವೆ. ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಜೈಲು ಸೇರಿದ್ದ ಸಮಯದಲ್ಲಿ ಪಕ್ಷದ ಕೆಲವರು ಈ ಪಿತೂರಿ ನಡೆಸಿದ್ದಾರೆ. ನನ್ನ ಮತ್ತು ತಂದೆ ಕೆ. ಚಂದ್ರಶೇಖರ್ ರಾವ್ ನಡುವೆ ಬಿರುಕು ಮೂಡಿಸುವ ಪ್ರಯತ್ನ ಕೂಡ ಮಾಡಿದ್ದಾರೆ. ಇದು ನನ್ನ ಗಮನಕ್ಕೆ ಬಂದಿದೆ" ಎಂದು ಯಾರ ಹೆಸರನ್ನೂ ಹೇಳದೆ ಆರೋಪಿಸಿದ್ದಾರೆ.
"ನಮ್ಮದೇ ಪಕ್ಷದವರು ಬಿಆರ್‌ಎಸ್ ಅನ್ನು ಬಿಜೆಪಿಯೊಂದಿಗೆ ಸೇರಿಸುವ ಕುರಿತು ಮಾತುಕತೆ ನಡೆಸಿದ್ದರು. ಈ ವಿಚಾರ ಜೈಲಿನಲ್ಲಿದ್ದ ನನ್ನವರೆಗೆ ಬಂದಿತು. ಆದರೆ, ನಾನು ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಬದಲಿಗೆ ತಿರಸ್ಕರಿಸಿದೆ. ಜೈಲಿನಲ್ಲಿದ್ದರೂ ಪರವಾಗಿಲ್ಲ, ಪಕ್ಷವನ್ನು ವಿಲೀನಗೊಳಿಸುವ ಪ್ರಸ್ತಾವ ಬೇಡಬೇ ಬೇಡ ಎಂದಿದ್ದೆ" ಎಂದು ಕವಿತಾ ಮಾಧ್ಯಮಗಳಿಗೆ ತಿಳಿಸಿದರು.
ಇದನ್ನೂ ಓದಿ: ಮೂವರು ಹೆಂಡತಿಯರು, 9 ಮಕ್ಕಳು: ಸಂಸಾರ ನಡೆಸಲು ಕಳ್ಳತನ, ಮಗನಿಗೆ ತಂದೆಯಿಂದಲೇ ಟ್ರೈನಿಂಗ್ | Bengaluru
ನೀವು ಕಾಂಗ್ರೆಸ್ ಜೊತೆಗೆ ಸಂಪರ್ಕದಲ್ಲಿದ್ದೀರಾ? ನಿಮ್ಮದೇ ಪಕ್ಷ ರಚಿಸಲು ಮುಂದಾಗುತ್ತಿದ್ದೀರಾ? ಎಂಬ ಮಾತುಗಳು ಕೇಳಿಬಂದಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಕವಿತಾ, "ಇದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಕಾಂಗ್ರೆಸ್ ಒಂದು ಮುಳುಗುವ ಹಡಗು. ಇಲ್ಲಿ ಹೊಸ ಪಕ್ಷದ ಮಾತಿಲ್ಲ. ನಾನು ತಂದೆ ಮಾರ್ಗದರ್ಶನದಲ್ಲಿ ನಡೆಯುತ್ತಿರುವವಳು. ಇದನ್ನೇ ಮುಂದುವರಿಸುತ್ತೀನಿ. ನನಗೆ ಚೂರಿ ಇರಿಯುವ ಬುದ್ಧಿಯಿಲ್ಲ. ತಲೆ ಎತ್ತಿ ಬಾಳುವ ಹಾದಿ ನನ್ನದು" ಎಂದಿದ್ದಾರೆ,(ಏಜೆನ್ಸೀಸ್).