ನ್ಯೂಸ್

ನಾಟಕದ ಮಾತಿಗೆ ಜನ ಮರುಳಾಗುವುದಿಲ್ಲ;ಶಾಸಕ ಎಂ. ಸತೀಶ್ ರೆಡ್ಡಿ

ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜನ ಪ್ರಬುದ್ಧ ಮನಸ್ಥಿತಿಯವರಿದ್ದು, ನಾಟಕದ ಮಾತುಗಳಿಗೆ ಮರುಳಾಗುವುದಿಲ್ಲ ಎಂದು ಶಾಸಕ ಎಂ. ಸತೀಶ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಮ್ಮನ ಪಾಳ್ಯದ ಯುವ ಮುಖಂಡ ಗೋವಿಂದ ಮತ್ತವರ ತಂಡದ 25ಕ್ಕೂ ಅಧಿಕ ಕಾರ್ಯಕರ್ತರನ್ನು ಬಿಜೆಪಿಗೆ ಬರಮಾಡಿಕೊಂಡು ಮಾತನಾಡಿದರು.

ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ನಿಜವಾದ ಕೆಲಸ ಮಾಡುವ ಜನನಾಯಕ ಯಾರು ಎಂದು ಗ್ರಹಿಸುವ ಶಕ್ತಿ ಇಲ್ಲಿನ ಮತದಾರರಿಗಿದೆ. ಕಳೆದ ಹಲವು ವರ್ಷಗಳಿಂದ ಜನರ ಒಡನಾಡಿಯಾಗಿ ನಾನು ಕೆಲಸ ಮಾಡಿದ್ದೇನೆ. ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ಮೋಡಿ ಮಾಡಲಾಗದು. ಕೆಲವರು ಜನರನ್ನು ಹಣ ಕೊಟ್ಟು ಖರೀದಿಸಲು ನೋಡುತ್ತಿದ್ದಾರೆ. ಆದರೆ ಜನರು ಅಭಿವೃದ್ಧಿ ಮಾಡಿದವರಿಗೆ ಮತ ನೀಡುತ್ತಾರೆ ಎಂದರು.