ತೀರ್ಥಹಳ್ಳಿ: ದೇಶದ ಆರ್ಥಿಕತೆಗೆ ಬೆನ್ನೆಲುಬಾಗಿ ಬಲ ತಂದಿರುವ ಸಹಕಾರ ಸಂಘಟನೆ ಸಾಮಾಜಿಕ ಕಳಕಳಿಯೊಂದಿಗೆ ಜನಸಾಮಾನ್ಯರ ಆರ್ಥಿಕ ಸಂಕಷ್ಟಗಳಿಗೂ ನೆರವಾಗುವ ಅಗತ್ಯವಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಲ್ಲಿನ ತುಳುನಾಡು ಸಿರಿ ಸೌಹಾರ್ದ ಸಹಕಾರ ಸಂಘದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು. ದಾಖಲೆ ಮತ್ತಿತರ ಕಾರಣಗಳಿಂದ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಆರ್ಥಿಕ ನೆರವು ಪಡೆಯುವುದು ಕಷ್ಟವಾಗಿರುವ ಕಾಲಘಟ್ಟದಲ್ಲಿ ಸಹಕಾರ ಸಂಘಗಳು ಆರ್ಥಿಕವಾಗಿ ಬಡವರ ನೆರವಿಗೆ ಬರುತ್ತಿವೆ. ತುಳುನಾಡು ಸಿರಿ ಸೌಹಾರ್ದ ಸಹಕ್ಟಾ ಸೇರಿದಂತೆ ಈ ತಾಲೂಕಿನ ಸಹಕಾರ ಕ್ಷೇತ್ರದ ಸಾಧನೆ ಗಮನಾರ್ಹ ಎಂದರು.
ಸಂಘದ ಅಧ್ಯಕ್ಷ ಬಿ.ಆರ್.ರಾಘವೇಂದ್ರ ಶೆಟ್ಟಿ, ರಾಜ್ಯ ಸೌಹಾರ್ದ ೆಡರೇಶನ್ ಉಪಾಧ್ಯಕ್ಷ ಪ್ರಸನ್ನಕುಮಾರ್, ಪ್ರಮುಖರಾದ ಕೆ.ನಾಗರಾಜ ಶೆಟ್ಟಿ, ಕೆಸ್ತೂರು ಮಂಜುನಾಥ್, ಡಿ.ಎಸ್.ವಿಶ್ವನಾಥ ಶೆಟ್ಟಿ, ಟಿ.ಎಲ್.ಸುಂದರೇಶ್, ಸಂಘದ ನಿರ್ದೇಶಕರಾದ ವಿಶಾಲ್ ಕುಮಾರ್, ಗಣಪತಿ ಇತರರಿದ್ದರು. ಅಂಧರ ಸುಗಮ ಸಂಗೀತ ಕಾರ್ಯಕ್ರಮ ಸಭೆಯ ಗಮನ ಸೆಳೆಯಿತು. ಮೋಹನ್ ಶೆಟ್ಟಿ ಮುನ್ನೂರು ಕಾರ್ಯಕ್ರಮ ನಿರ್ವಹಿಸಿದರು.