ಬಿಹಾರ: 7 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ಸಾವನ್ನಪ್ಪಿದ್ದಾನೆಂದು ತಿಳಿದ ಪೋಷಕರು ಆತನ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದರು. ಆದ್ರೆ, ಇದೀಗ ತಂದೆ-ತಾಯಿಗೆ ಅಚ್ಚರಿ ಎದುರಾಗಿದ್ದು, ನಾಪತ್ತೆಯಾಗಿದ್ದ ಮಗನು ಮನೆಗೆ ಹಿಂದಿರುಗಿದ್ದಾನೆ.
7 ವರ್ಷಗಳ ಹಿಂದೆ ಮನೆಬಿಟ್ಟು ಹೋದ ಪುತ್ರ ಹಿಂದಿರುಗದ ಕಾರಣ ಆತ ಮೃತಪಟ್ಟಿದ್ದಾನೆ ಎಂದು ಹೆತ್ತವರು ಭಾವಿಸಿದ್ದು, ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದರು. ಆದ್ರೆ, ಗ್ರಾಮದ ಪಂಚಾಯತ್ ಮುಖ್ಯಸ್ಥರ ಸಹಾಯದಿಂದ ಅವರ ಪುತ್ರ ಇದೀಗ ಮನೆಗೆ ವಾಪಾಸ್ ಬಂದಿದ್ದು, ತಂದೆ-ತಾಯಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಏಳು ವರ್ಷಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ರಾಯ್ ಎಂದು ಗುರುತಿಸಲಾಗಿದ್ದು, ಮನೆಬಿಟ್ಟು ಹೋದ ರಾಯ್ ದೆಹಲಿಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸದಸ್ಯರೊಡನೆ ವಾಸಿಸುತ್ತಿದ್ದ. ಆತನಿಗೆ ಅಪಘಾತವಾಗಿ ಆಸ್ಪತ್ರೆಗೆ ದಾಖಲಾದ ವೇಳೆ ಸಂಸ್ಥೆಯ ವ್ಯಕ್ತಿಯೊಬ್ಬರು ಈತನ ಹಿನ್ನೆಲೆ ತಿಳಿದು, ರಾಯ್ ವಾಸವಿದ್ದ ಗ್ರಾಮದ ಪಂಚಾಯತ್ ಮುಖ್ಯಸ್ಥರನ್ನು ಸಂಪರ್ಕಿಸಿ, ದೆಹಲಿಯಿಂದ ಸಾರಿಗೆ ವ್ಯವಸ್ಥೆ ಮಾಡಿ ಕಳುಹಿಸಿದ್ದಾರೆ.
ಇದನ್ನೂ ಓದಿ: NIMHANSನಲ್ಲಿ ಡಾಟಾ ಎಂಟ್ರಿ ಆಪರೇಟರ್ ನೇಮಕ; ಪಿಯು ವಿದ್ಯಾರ್ಹತೆ, ಅರ್ಜಿ ಸಲ್ಲಿಕೆಗೆ ಆಗಸ್ಟ್ 10 ಕೊನೆ ದಿನ
ಪಂಚಾಯತ್ ಮುಖ್ಯಸ್ಥರ ಸಹಾಯದಿಂದ ಪೋಷಕರಿಗೆ ಇದೀಗ ತಮ್ಮ ಮಗ ವಾಪಸ್ ಸಿಕ್ಕಿದ್ದು, ಈ ಬಗ್ಗೆ ಗಂಡ-ಹೆಂಡತಿ ಸಂತಸ ವ್ಯಕ್ತಪಡಿಸಿದ್ದಾರೆ. ಕುಟುಂಬದವರು ನೀಡಿದ ಮಾಹಿತಿ ಪ್ರಕಾರ, ರಾಯ್ ಮನೆಯಿಂದ ಹೋದಾಗ ಅವರ ವಯಸ್ಸು 30 ವರ್ಷ. ಊರು ಬಿಟ್ಟು ಹೋಗುವ ಮೊದಲೇ ಅವರ ಹೆಂಡತಿ ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ,(ಏಜೆನ್ಸೀಸ್).