ನ್ಯೂಸ್

ಗುರುದಾಸ್​ಪುರ ಕ್ಷೇತ್ರದ ಸಂಸದ ಸನ್ನಿ ಡಿಯೋಲ್​ ನಾಪತ್ತೆಯಾಗಿದ್ದಾರೆ; ರೈಲ್ವೆ ಸ್ಟೇಶನ್​, ಪಾರ್ಕ್​ಗಳಲ್ಲಿ ರಾರಾಜಿಸುತ್ತಿವೆ ಪೋಸ್ಟರ್​ಗಳು

ಪಠಾಣ್​ ಕೋಟ್​: ಪಂಜಾಬ್​ನ ಗುರುದಾಸ್​ಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್​ ಅವರು ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂದು ಅಲ್ಲಿನ ಜನರು ಪೋಸ್ಟರ್​ಗಳನ್ನು ಹಾಕುತ್ತಿದ್ದಾರೆ.

ಪಠಾಣ್​ಕೋಟ್​ದ ರೈಲ್ವೆ ಸ್ಟೇಶನ್​ ಮತ್ತು ಪಾರ್ಕ್​ಗಳಲ್ಲಿ ಎಂಪಿ ಸನ್ನಿ ಡಿಯೋಲ್​​ ಮಿಸ್ಸಿಂಗ್​ ಪೋಸ್ಟರ್​ಗಳನ್ನು ಅಂಟಿಸಲಾಗಿದೆ.

ಸನ್ನಿ ಡಿಯೋಲ್​ ಅವರನ್ನು ತುಂಬ ದಿನಗಳಿಂದ ನಾವು ನೋಡಲಿಲ್ಲ. ಅವರು ಕ್ಷೇತ್ರದಲ್ಲಿ ಎಲ್ಲಿಯೂ ಕಾಣುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಗುರುದಾಸ್​ ಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸನ್ನಿ ಡಿಯೋಲ್​, ಕಾಂಗ್ರೆಸ್​ನ ಸುನೀಲ್​ ಝಾಕರ್​ ಮತ್ತು ಆಪ್​ನ ಪೀಟರ್​ ಮಾಸಿಹ್​ ವಿರುದ್ಧ ಗೆಲುವು ಸಾಧಿಸಿದ್ದರು.

ಸನ್ನಿ ಡಿಯೋಲ್​ಗೆ ವಿವಾದ ಹೊಸದೇನಲ್ಲ.ಸಂಸದರಾಗಿ ಚುನಾಯಿತರಾದ ಅವರು ತಮ್ಮ ಗೈರಿನಲ್ಲಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಭೆಗಳಿಗೆ ಹಾಜರಾಗಲು, ಪ್ರಮುಖ ಚರ್ಚೆಗಳಲ್ಲಿ ಪಾಲ್ಗೊಳ್ಳಲು ಪ್ರತಿನಿಧಿಯೋರ್ವನನ್ನು ನೇಮಕ ಮಾಡಿಕೊಳ್ಳುವ ಮೂಲಕ ಕಾಂಟ್ರವರ್ಸಿ ಸೃಷ್ಟಿಸಿದ್ದರು. (ಏಜೆನ್ಸೀಸ್​)