ನ್ಯೂಸ್

Success Story: ಮಿಸ್ ಇಂಡಿಯಾದಿಂದ ಐಎಫ್​ಎಸ್​ ಕಡೆ ಹೆಜ್ಜೆ.. ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡ ಸೌದರ್ಯವತಿ!

ಜೈಪುರ: ಹುಡುಗಿಯರಿಗೆ ಸಾಮಾನ್ಯವಾಗಿ ಗ್ಲಾಮರ್ ಕ್ಷೇತ್ರದಲ್ಲಿ ಮಿಂಚಬೇಕು ಎಂಬ ಆಸೆಯಿರುತ್ತದೆ. ಅದರಂತೆ ಇಲ್ಲೊಬ್ಬ ಹುಡುಗಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಫೈನಲ್​ ಗೆ ಆಯ್ಕೆಯೂ ಆದಳು. ಆದರೆ ಆಕೆ ಒಳಮನಸ್ಸು ನಾಗರಿಕ ಸೇವಾ ​ ಅಧಿಕಾರಿಯಾಗಬೇಕೆಂದು ಹೇಳುತ್ತಿತ್ತು. ಆಕೆ ಅದರಂತೆ ಸಿವಿಲ್ ಸರ್ವೀಸ್​ ಪರೀಕ್ಷೆ ತೆಗೆದುಕೊಂಡು ಮೊದಲ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿದಳು. ಇದು ರಾಜಸ್ಥಾನದ ಐಎಫ್‌ಎಸ್ ಅಧಿಕಾರಿ ಐಶ್ವರ್ಯಾ ಶೆರಾನ್ ಅವರ ಸ್ಫೂರ್ತಿದಾಯಕ ಕಥೆ.

ಅಮ್ಮನ ಆಸೆಯಂತೆ ಗ್ಲಾಮರ್​ ಜಗತ್ತಿನ ಕಡೆ ವಾಲಿದ್ದ ಐಶ್ವರ್ಯಾ ಕಡೆಗೆ ಅಪ್ಪನ ಆಸೆಯಂತೆ ನಾಗರಿಕ ಸೇವಾ ಹುದ್ದೆಕಡೆ ಹೆಜ್ಜೆ ಹಾಕಿದಳು. ತಂದೆ ಅಜಯ್ ಕುಮಾರ್ ಪ್ರಸ್ತುತ ತೆಲಂಗಾಣದ ಕರೀಂನಗರದಲ್ಲಿರುವ 9 ನೇ ಎನ್‌ಸಿಸಿ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಆಗಿದ್ದಾರೆ.

ಐಶ್ವರ್ಯಾ ಪ್ರಾಥಮಿಕ ಶಿಕ್ಷಣವನ್ನು ರಾಜಾಸ್ಥಾನದ ಚಾನ್ಯಕಪುರಿಯಲ್ಲಿ ಪೂರ್ಣಗೊಳಿಸಿದ್ದು, ದೆಹಲಿಯಲ್ಲಿ 12ನೇ ತರಗತಿಯಲ್ಲಿ ಶೇ.97.50 ಅಂಕಗಳನ್ನು ಗಳಿಸಿದ್ದಳು. ನಂತರ ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾಮರ್ಸ್‌ ಪದವಿ ಪೂರ್ಣಗೊಳಿಸಿದಳು. ಪದವಿ ಓದುತ್ತಿರುವಾಗಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಳು. ಆಗ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಳು. 2014 ರಲ್ಲಿ ಮಿಸ್ ಕ್ಲೀನ್ ಮತ್ತು ಕೇರ್ ಫ್ರೆಶ್ ಫೇಸ್ ಪ್ರಶಸ್ತಿಯನ್ನು ಮತ್ತು 2015 ರಲ್ಲಿ ಮಿಸ್ ದೆಹಲಿ ಕಿರೀಟವನ್ನು ಗೆದ್ದಳು. ಅದರ ನಂತರ ಮಿಸ್ ಇಂಡಿಯಾ ಸ್ಪರ್ಧೆಗೆ ಹೋದರು. 2016 ರಲ್ಲಿ ನಡೆದ ಸ್ಪರ್ಧೆಗಳಲ್ಲಿ ಆಕೆ ಫೈನಲ್​ ಲಿಸ್ಟ್ ಆದರು. ತಾಯಿ ಸುಮನ್ ಶೆಯೋರಾನ್ ಅವರ ಕನಸನ್ನು ನನಸು ಮಾಡಲುಈ ಕ್ಷೇತ್ರಕ್ಕೆ ಕಾಲಿಟ್ಟಿದ್ದೆ ಎಂದು ಹೇಳಿಕೊಂಡಿದ್ದಾರೆ.

'ಇದಾದ ನಂತರ ಉನ್ನತ ಶಿಕ್ಷಣದತ್ತ ಗಮನ ಹರಿಸಿದೆ. 2018 ರಲ್ಲಿ ಐಐಎಂ ಇಂದೋರ್‌ನಲ್ಲಿ ಸೀಟು ಸಿಕ್ಕಿತು.. ಆದರೆ ಸೇರಲಿಲ್ಲ. ಮಾಡೆಲಿಂಗ್ ಕ್ಷೇತ್ರದಿಂದ ಜನರ ಸೇವೆ ಮಾಡಲು ಯೋಚಿಸಿದೆ. ಸಿವಿಲ್ಸ್ ಪರೀಕ್ಷೆಗೆ ತಯಾರಿ ನಡೆಸಿದೆ. ಯಾವುದೇ ಕೋಚಿಂಗ್ ತೆಗೆದುಕೊಳ್ಳದೆಯೇ ಎಲ್ಲಾ ತಯಾರಿ ನಡೆಸಿದೆ. ಹಾಗಾಗಿ ಮೊದಲ ಪ್ರಯತ್ನದಲ್ಲೇ ಯುಪಿಎಸ್​ಸಿಯಲ್ಲಿ 93ನೇ ರ‍್ಯಾಂಕ್

ಗಳಿಸಿದೆ. 10 ತಿಂಗಳು ಕಷ್ಟಪಟ್ಟು ಓದಿದ್ದು, ನನ್ನ ಶ್ರಮಕ್ಕೆ ತಕ್ಕ ಫಲ ಸಿಕ್ಕಿತ್ತು. ಸಿವಿಲ್ಸ್ ತಯಾರಿಗಾಗಿ 10+8+6 ತಂತ್ರ ಅನುಸರಿಸಿದ್ದೇನೆ' ಎನ್ನುತ್ತಾರೆ ಐಶ್ವರ್ಯಾ.

ಅಂದರೆ ಹತ್ತು ಗಂಟೆ ಅಧ್ಯಯನ, ಎಂಟು ಗಂಟೆ ನಿದ್ದೆ ಮತ್ತು ಆರು ಗಂಟೆ ಇತರ ಕೆಲಸಗಳನ್ನು ಮಾಡುವುದು. ಐಎಫ್‌ಎಸ್ ಅಧಿಕಾರಿಯಾಗಿ ಆಯ್ಕೆಯಾಗಿರುವ ಈಕೆ ಪ್ರಸ್ತುತ ವಿದೇಶಾಂಗ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಧಿಸುವ ಹಂಬಲವಿರಬೇಕು ಆದರೆ ಎಂತಹ ಕಠಿಣ ಪರೀಕ್ಷೆಯಲ್ಲೂ ಮಿಂಚಬಹುದು ಎಂಬುದನ್ನು ಐಶ್ವರ್ಯಾ ಸಾಬೀತುಪಡಿಸಿದ್ದಾರೆ.