ನ್ಯೂಸ್

ತಮಿಳುನಾಡು ಮೇಲೆ ಕಲ್ಲು ತೂರಿದ ಕಿಡಿಗೇಡಿಗಳು

ಬೆಂಗಳೂರು: ನಗರದಲ್ಲಿ ಚಲಿಸುತ್ತಿದ್ದ ತಮಿಳುನಾಡು ಸರ್ಕಾರಿ ಬಸ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಿ ಹಾನಿ ಮಾಡಿರುವ ಪ್ರಕರಣ ಕೆ.ಆರ್.ಮಾರ್ಕೆಟ್ ್ಲೇಓವರ್ ಮೇಲೆ ನಡೆದಿದೆ.
ಈ ಸಂಬಂಧ ಚಾಲಕ ಸೆಂದಿಲ್ ಕುಮಾರ್ ನೀಡಿರುವ ದೂರಿನನ್ವಯ ಎ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ತಮಿಳುನಾಡಿನ ವೆಲ್ಲೂರುನಿಂದ ಕೆ.ಆರ್.ಮಾರ್ಕೆಟ್ ್ಲೇಓವರ್ ಮುಖಾಂತರ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಸೆ.೧೧ ಮುಂಜಾನೆ ೩ ಗಂಟೆಯ ಸಮಯದಲ್ಲಿ ್ಲೈಓವರ್ ಡೌನ್ ರಾಂಪ್ ಇಳಿಯುತ್ತಿದ್ದಾಗ ಬೈಕಿನಲ್ಲಿ ಮಾರ್ಕೆಟ್ ಕಡೆ ಹೋಗುತ್ತಿದ್ದ ಇಬ್ಬರು ಕಿಡಿಗೇಡಿಗಳು ಬಸ್ ಮೇಲೆ ಕಲ್ಲು ತೂರಿ ಓಡಿಹೋಗಿದ್ದಾರೆ. ಬಸ್ ಅನ್ನು ಪರಿಶೀಲಿಸಿದಾಗ ಬಸ್‌ನ ಮುಂಭಾಗ ಗ್ಲಾಜು ಮತ್ತು ಕಿಟಕಿಯ ಗಾಜು ಹೊಡೆದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಚಾಲಕ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಅಧಿಕಾರಿಗಳ ಸೂಚನೆ ಮೇರೆಗೆ ಚಾಮರಾಜಪೇಟೆ ಠಾಣೆಗೆ ಚಾಲಕ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸುತ್ತಮುತ್ತಲಿನಲ್ಲಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಕಿಡಿಗೇಡಿಗಳ ಪತ್ತಗೆ ಬಲೆ ಬೀಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.