ನ್ಯೂಸ್

ಕಿಡಿಗೇಡಿಗಳಿಂದ ಅಸಭ್ಯ ವರ್ತನೆ; ಚಿತ್ರೀಕರಣ ನಿಲ್ಲಿಸಿದ ಶುಭಾ ಪೂಂಜಾ ತಂಡ

ಬೆಂಗಳೂರು:  ಸ್ಯಾಂಡಲ್​ವುಡ್​​ ನಟಿ ಶುಭಾ ಪೂಂಜಾ ಹಾಡಿನ ಚಿತ್ರೀಕರಣದಲ್ಲಿದ್ದ ವೇಳೆ ನಟಿಯೊಂದಿಗೆ ಕಿಡಿಗೇಡಿಗಳು ಅಸಭ್ಯ ವರ್ತಿಸಿ, ಶೂಟಿಂಗ್‌ ಸೆಟ್‌ ಧ್ವಂಸಗೊಳಿಸಿದ್ದಾರೆ ಎನ್ನಲಾಗಿದೆ.

ಸುಧೀರ್ ಅತ್ತಾವರ ನಿರ್ದೇಶನದಲ್ಲಿ ಕೊರಗಜ್ಜ ಚಿತ್ರ ಮೂಡಿಬರುತ್ತಿದ್ದು, ಶುಭಾ ಪೂಂಜಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಚಿತ್ರೀಕರಣ ಮಾಡುವ ವೇಳೆಯಲ್ಲಿ ಅಪರಿಚಿತ ಯುವಕರ ಗುಂಪು ಕೈ ಹಿಡಿದು ಎಳೆದಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.

ಯುವಕರ ಅಸಭ್ಯ ವರ್ತನೆಯಿಂದ ಚಿತ್ರತಂಡ ತಕ್ಷಣ ಹಾಡಿನ ಚಿತ್ರೀಕರಣ ನಿಲ್ಲಿಸಿದೆ. ಕುದುರೆಮುಖದ  ಮೈದಾಡಿಗುಡ್ಡ ಪ್ರದೇಶದಲ್ಲಿ ಕೊರಗಜ್ಜ ಚಿತ್ರದ ಹಾಡಿನ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಜೊತೆ ಶುಭಾ ಶೂಟಿಂಗ್ ನಡೆಸುತ್ತಿದ್ದರು.

 ಈ ಘಟನೆ ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುತ್ತದೆ. ಘಟನೆ ಬಗ್ಗೆ ಚಿತ್ರತಂಡ ಈವರೆಗೂ ಪೊಲೀಸರಿಗೆ ದೂರು ನೀಡಿಲ್ಲ ಎಂದು ತಿಳಿದುಬಂದಿದೆ.