ಅಲಿಗಢ: ದೇವಸ್ಥಾನದ ಆವರಣದಲ್ಲಿಯೇ ಸಾಧುವೊಬ್ಬ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದ ಅಲಿಗಢದ ನೋಗ್ವಾ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ರಾಮದಾಸ್(70) ಎಂದು ಗುರುತಿಸಲಾಗಿದ್ದು, ಆತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶನಿವಾರದಂದು ಬೆಳಿಗ್ಗೆ, ಸ್ಥಳೀಯ ಜನರು ಪೂಜೆ ಮತ್ತು ದರ್ಶನಕ್ಕಾಗಿ ದೇವಾಲಯವನ್ನು ತಲುಪಿದಾಗ, ಸನ್ಯಾಸಿಯ ಮೃತದೇಹವು ನೇಣು ಬಿಗಿದುಕೊಂಡಿರುವುದನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಗಳ ಮದುವೆಯಲ್ಲಿ ಸಿಗರೇಟ್ ಸೇದುತ್ತಾ ಡ್ಯಾನ್ಸ್ ಮಾಡಿದ ಅಮ್ಮ; ವರ ಹೇಳಿದ್ದೇನು..?
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಆರೋಪಿಗಳು ರಾಮದಾಸ್ನ ಕತ್ತು ಹಿಸುಕಿ, ಆತನ ದೇಹವನ್ನು ಸುಡಲು ಯತ್ನಿಸಿದ್ದಾರೆ ಎಂದು ಹೇಳಿದ್ದಾರೆ.
ರಾಮದಾಸ್ ದೇವಸ್ಥಾನದಲ್ಲಿ ಏಕಾಂಗಿಯಾಗಿಯೇ ಇದ್ದು ಪೂಜೆ ಸಲ್ಲಿಸುತ್ತಿದ್ದು, ಈತನ ಕುಟುಂಬ ಸದಸ್ಯರು ಸಮೀಪದ ಪ್ರದೇಶದ ದಾಡೋ ಪೊಲೀಸ್ ಠಾಣೆಯ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಈತನ ಹತ್ಯೆ ಬಗ್ಗೆ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದು, ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)