ನ್ಯೂಸ್

ತಾನಾಗಿಯೇ ಒಡೆಯುವ ತೆಂಗಿನಕಾಯಿ: ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ ದೇವರ ಪವಾಡ ವಿಡಿಯೋ ವೈರಲ್​

ಭುವನೇಶ್ವರ: ಒಡಿಶಾದ ಬೌದ್​ ಜಿಲ್ಲೆಯ ಬಿಲಾಸ್ಪುರ್​ ಪಂಚಾಯಿತಿಯ ಬದರಾಹಜುರ್​ ಗ್ರಾಮದ ಪೂರ್ಣಬಾಷಿ ದೇವಸ್ಥಾನವು ತನ್ನ ಪವಾಡದಿಂದಲೇ ತುಂಬಾ ಹೆಸರುವಾಸಿಯಾಗಿದೆ.

ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಸಾಕಷ್ಟು ಭಕ್ತರು ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಬರುವ ಭಕ್ತರು ದೇವತೆಗೆ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. ಅಚ್ಚರಿ ಏನೆಂದರೆ, ಈ ದೇವಸ್ಥಾನದಲ್ಲಿ ತೆಂಗಿನಕಾಯಿ ಅದಾಗಿಯೇ ಒಡೆದು ಹೋಗುತ್ತದೆ.

ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ತೆಂಗಿನಕಾಯಿಯನ್ನು ಕೊಟ್ಟರೆ ಪೂಜಾರಿಗಳು ಕಲ್ಲಿನ ಮೇಲೆ ಒಡೆದು, ಎರಡು ಹೋಳು ಮಾಡಿ, ದೇವರಿಗೆ ಅರ್ಪಿಸಿ, ವಾಪಸ್​ ಕೊಡುತ್ತಾರೆ. ಆದರೆ, ಈ ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ದೇವರ ಮುಂದೆ ಇಡಲಾಗುತ್ತದೆ. ವಾಪಸ್​ ಕೊಡುವಾಗ ತೆಂಗಿನಕಾಯಿ ತಾನಾಗಿಯೇ ಒಡೆದಿರುತ್ತದೆ.

ಈ ದೇವಸ್ಥಾನದಲ್ಲಿ ಕೀರಾಭಿಷೇಕ, ಜಲ ಅಭಿಷೇಕಕ್ಕೂ ಹೆಸರುವಾಸಿಯಾಗಿದ್ದು, ಕಳೆದ 40 ವರ್ಷಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾ ಬರುತ್ತಿದ್ದಾರೆ. ತಮ್ಮ ಮನದಲ್ಲಿ ಅಂದುಕೊಂಡಿದ್ದನ್ನು ದೇವರು ಈಡೇರಿಸುತ್ತಾನೆ ಎಂಬುದು ಜನರ ನಂಬಿಕೆಯಾಗಿದೆ. (ಏಜೆನ್ಸೀಸ್​)