ಚನ್ನಪಟ್ಟಣ: ಅಣ್ಣಾ ಎಂದು ಹೇಳಿಕೊಂಡು ಹಾಸ್ಟೆಲ್ ನಿಂದ ಅಪ್ರಾಪ್ತ ಬಾಲಕಿಯನ್ನು ಕರೆದೋಯ್ದು ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಮಹಿಳಾ ಠಾಣೆ ಪೊಲೀಸರು ಬಂದಿಸಿದ್ದಾರೆ.
ಚನ್ನಪಟ್ಟಣದ ಹಾಸ್ಟೆಲ್ ಒಂದರಲ್ಲಿ ಕಲಿಯುತ್ತಿರುವ 15 ವರ್ಷದ ಬಾಲಕಿಯನ್ನು 36 ವರ್ಷದ ವ್ಯಕ್ತಿಯೊಬ್ಬ ಅಣ್ಣಾ ಎಂದು ಹೇಳಿಕೊಂಡು ಕರೆದೋಯ್ದಿದ್ದಾನೆ. ಹಾಸ್ಟೆಲ್ ಸಿಬ್ಬಂದಿ ಟಿ ಕುಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಕರೆದುಕೊಂಡ ಹೋದ ವ್ಯಕ್ತಿ 2 ಗಂಟೆಯಾದರೂ ಬಾಲಕಿಯನ್ನು ವಾಪಾಸ್ ಕರೆತಂದಿಲ್ಲ.
ಇದರಿಂದ ಅನುಮಾನಗೊಂಡ ಹಾಸ್ಟೆಲ್ ಸಿಬ್ಬಂದಿ ತಕ್ಷಣ ವಿಷಯವನ್ನು ಪಾಲಕರಿಗೆ ತಿಳಿಸಿದ್ದಾರೆ. ನಂತರ ಮಹಿಳಾ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ. ತಕ್ಷಣ ಕಾರ್ಯಾಚರಣೆ ಮಾವಿನ ತೋಟವೊಂದರಲ್ಲಿ ಇದ್ದ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಒಂದು ವರ್ಷದಿಂದಲೂ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂದು ತಿಳಿದು ಬಂದಿದ್ದು, ಬಂದಿತನ ವಿಚಾರಣೆ ಮುಂದುವರಿದಿದೆ.