ನ್ಯೂಸ್

ತಮ್ಮನ ಎದುರೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ, ಮೂವರ ಬಂಧನ

ಮುಜಾಫರ್​​ನಗರ: 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಸಹೋದರನ ಎದುರೇ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್​​ನಗರದಲ್ಲಿ ನಡೆದಿದೆ.

ಬಾಲಕಿ ಪೋಷಕರು ಕಾರ್ಯಕ್ರಮ ನಿಮಿತ್ತ ಬೇರೆ ಹಳ್ಳಿಗೆ ಹೊರಟಿದ್ದಾಗ, ಪಕ್ಕದ ಮನೆಯವರು ತಮ್ಮ ಮನೆಗೆ ಪ್ರವೇಶಿಸಿ ಮಕ್ಕಳು ಮಲಗಿದ್ದನ್ನು ನೋಡಿದ್ದಾರೆ ಎಂದು ಬಾಲಕಿಯ ತಂದೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿ ಬಾಲಕಿಗೆ ಗನ್ ತೋರಿಸಿ ತನ್ನ ಮೂವರು ಸ್ನೇಹಿತರೊಂದಿಗೆ ಮನೆ ಒಳಗೆ ನುಗ್ಗಿದ್ದಾನೆ. ನಂತರ ಆರೋಪಿಗಳು ಬಾಲಕಿಯ 12 ವರ್ಷದ ಸಹೋದರನ ಎದುರೇ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಕೃತ್ಯದ ವಿಡಿಯೋವನ್ನು ಸಹ ಚಿತ್ರೀಕರಿಸಿದ್ದು, ಪೊಲೀಸರಿಗೆ ದೂರು ನೀಡಿದರೆ ಅದನ್ನು ವೈರಲ್ ಮಾಡುವುದಾಗಿ ಬಾಲಕಿಗೆ ಬೆದರಿಕೆ ಹಾಕಿದ್ದಾರೆ.

ಬಾಲಕಿಯ ವೈದ್ಯಕೀಯ ವರದಿಯಲ್ಲಿ ಅತ್ಯಾಚಾರ ಎಸಗಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಸಾಮೂಹಿಕ ಅತ್ಯಾಚಾರ, ಮನೆ ಅತಿಕ್ರಮಣ, ಕೊಲೆ ಬೆದರಿಕೆ ಮತ್ತು ಪೊಕ್ಸೊ ಕಾಯ್ದೆಯಡಿ ಬಂಧಿತ ಮೂವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.