ರಾಜಂ: ಆಂಧ್ರಪ್ರದೇಶದ ರಾಜಂನಲ್ಲಿ ವೈಎಸ್‌ಆರ್‌ಸಿಪಿ ಪರ ಪ್ರಚಾರ ನಡೆಸುತ್ತಿದ್ದ ವಾಹನ ಡಿಕ್ಕಿ ಹೊಡೆದು 9 ವರ್ಷದ ಬಾಲಕ ಸಾವನ್ನಪ್ಪಿರು ಘಟನೆ ನಡೆದಿದೆ.
9 ವರ್ಷದ ಬಾಲಕ ಗುರುವಾರ ರಾತ್ರಿ ಬೊಬ್ಬಲಿ ಜಂಕ್ಷನ್ ಬಳಿ 8 ಗಂಟೆ ಸುಮಾರಿಗೆ ತಿಂಡಿ ಖರೀದಿಸಲು ಬಂದಿದ್ದ ವೇಳೆ ವಿಧಾನಸಭೆ ಚುನಾವಣೆಗೆ ಆಂಧ್ರಪ್ರದೇಶದ ಆಢಳಿತರೂಡ ವೈಎಸ್‌ಆರ್‌ಸಿಪಿ ರಾಜಂ (ಎಸ್‌ಸಿ) ವಿಧಾನಸಭಾ ಅಭ್ಯರ್ಥಿ ಟಿ ರಾಜೇಶ್ ಅವರ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆ ವೇಳೆ ಅಭ್ಯರ್ಥಿ ಪ್ರಚಾರದ ವಾಹನದಲ್ಲಿ ಇರಲಿಲ್ಲ. ಪ್ರಚಾರ ಮುಗಿದ ಬಳಿಕ ಚಾಲಕ ವಾಹನದ ಟೈರ್ಗಳಿಗೆ ಗಾಳಿ ತುಂಬಿಸಲು ವಾಹವನ್ನು ತೆಗದುಕೊಂಡು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಈ ಪ್ರಕರಣದಲ್ಲಿ ಚಾಲಕನ ಸುಧೀರ್ ವಿರುದ್ಧ ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಬಂಧಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತ ಬಾಲಕನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.