ಬೆಂಗಳೂರು: ನಗರದ ಪ್ರತಿಷ್ಠಿತ ಕ್ಲಬ್ವೊಂದರಲ್ಲಿ ನಟ ಸೃಜನ್ ಲೋಕೇಶ್ರ ಬೆಂಬಲಿಗರ ಮೇಲೆ ಸಚಿವ ವಿ.ಸೋಮಣ್ಣ ಅವರ ಪುತ್ರನ ಗ್ಯಾಂಗ್ ದಾಂಧಲೆ ನಡೆಸಿದೆ. ಮಧ್ಯಪ್ರವೇಶಿಸಿದ ಸೋಮಣ್ಣ, ಮಾತುಕತೆ ನಡೆಸಿ ಗಲಾಟೆಯನ್ನ ನಿಲ್ಲಿಸಿದ್ದಾರೆ. ದೂರು ಕೊಡದಂತೆ ಒತ್ತಡ ಹಾಕಿದ್ದು, ಕ್ಲಬ್ನ ಸಿಸಿಟಿವಿ ಫೂಟೇಜ್ ಅನ್ನೂ ಡಿಲೀಟ್ ಮಾಡಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಘಟನೆ ಸೋಮವಾರ ತಡರಾತ್ರಿ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಆದರೆ ಈ ಕುರಿತು ದಿಗ್ವಿಜಯ ನ್ಯೂಸ್ಗೆ ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ ಅವರ ಪುತ್ರ ಅರುಣ್, 'ಇದೊಂದು ರಾಜಕೀಯ ವಿರೋಧಿಗಳ ತಂತ್ರ, ಕಾಂಗ್ರೆಸ್ನ ಪ್ರಿಯಕೃಷ್ಣ ಮತ್ತು ಇವರ ತಂದೆ ಕೃಷ್ಣಪ್ಪ ಅವರ ಪೂರ್ವ ನಿಯೋಜಿತ ತಂತ್ರ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ಅಂದು ಗಲಾಟೆಯೇ ನಡೆದಿಲ್ಲ. ಆ ಗಲಾಟೆ ವಿಷ್ಯಕ್ಕೂ ನನನೂ ಯಾವುದೇ ಸಂಬಂಧ ಇಲ್ಲ. ನಾನು ಅಲ್ಲಿಗೆ ಹೋಗಿಯೇ ಇಲ್ಲ. ರಾಜಕೀಯ ದುರುದ್ದೇಶದಿಂದ ನನ್ನ ತಂದೆಯ ತೇಜೋವಧೆಗೆ ಯತ್ನಿಸುತ್ತಿದ್ದಾರೆ. ಸೃಜನ್ರನ್ನು ನಾನು ಅಂದು ಭೇಟಿಯೇ ಮಾಡಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿರೋಧಿಗಳು ಇಲ್ಲಸಲ್ಲದ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. (ದಿಗ್ವಿಜಯ ನ್ಯೂಸ್)