ನ್ಯೂಸ್

ಸಚಿವರ ಕಾರು ಅಪಘಾತ; ಸ್ವಲ್ಪದರಲ್ಲೇ ತಪ್ಪಿದ ಅನಾಹುತ

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ನಾಯಕರ ಮೇಲೆ ಹಲ್ಲೆ ಪ್ರಕರಣಗಳ ಬೆನ್ನಲ್ಲೇ ಇದೀಗ ಅಪಘಾತ ಪ್ರಕರಣಗಳೂ ಹೆಚ್ಚಾಗಿ ಕೇಳಿರಲಾರಂಭಿಸಿವೆ. ರಾಜ್ಯದ ಅರಣ್ಯ ಸಚಿವ ರಾಜೀಬ್​ ಬ್ಯಾನರ್ಜಿ ಅವರ ಕಾರು ಭಾನುವಾರದಂದು ಅಪಘಾತಕ್ಕೀಡಾಗಿದೆ.

ಸಚಿವರು ಕೋಲ್ಕತದ ಕಸ್ಬಾ-ರಾಜದಂಗ ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದಾಗ ಕಲ್ಲನ್ನು ತುಂಬಿಕೊಂಡಿದ್ದ ಲಾರಿಯೊಂದು ಸೈಡಿನಿಂದ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿಗೆ ಹಾಣಿಯುಂಟಾಗಿದೆ. ಅದೃಷ್ಟವಶಾತ್​ ಸಚಿವರು ಮತ್ತು ಅವರ ಚಾಲಕನಿಗೆ ಯಾವುದೇ ತೊಂದರೆಯಾಗಿಲ್ಲ.

ಈ ಹಿಂದೆ ಶನಿವಾರದಂದು ಸಂಸದ ಮತ್ತು ಸಚಿವ ಬಾಬುಲ್ ಸುಪ್ರಿಯೋ ಅವರ ಬೆಂಗಾವಲು ವಾಹನಕ್ಕೆ ಅಪಘಾತವಾಗಿತ್ತು. ಸುವೆಂಧು ಅಧಿಕಾರಿಯ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಬಾಬುಲ್ ತೆರಳುತ್ತಿದ್ದಾಗ ಹೌರಾ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿತ್ತು. (ಏಜೆನ್ಸೀಸ್​)