UK | ಯುಕೆಯಲ್ಲಿ ಫೋರ್ಡ್ ಟ್ರಾನ್ಸಿಟ್ ಮಿನಿಬಸ್ ರಾಂಗ್ ರೂಟ್ನಲ್ಲಿ ಚಲಿಸುತ್ತಿರುವಾಗ ಎರಡು ಕಾರುಗಳಿಗೆ ಮುಖಾಮುಖಿ ಡಿಕ್ಕಿ ಹೊಡಿದಿದ್ದು, ಈ ಭಯಾನಕ ದೃಶ್ಯವು ಡ್ಯಾಶ್‌ಕ್ಯಾಮರಾ ಸೆರೆಹಿಡಿದಿದೆ. ಸೋಮರ್‌ಸೆಟ್‌ನ ಯೋವಿಲ್‌ನಲ್ಲಿರುವ ಶೆರ್ಬೋರ್ನ್ ರಸ್ತೆಯಲ್ಲಿ ಈ ದುರಂತ ಸಂಭವಿಸಿದೆ.
ಇಲ್ಲಿದೆ ನೋಡಿ ವಿಡಿಯೋ
ಫೋರ್ಡ್ ಟ್ರಾನ್ಸಿಟ್ ಮಿನಿಬಸ್ ರಾಂಗ್ ರೂಟ್ನಲ್ಲಿ ಚಲಿಸುತ್ತಿದ್ದಾಗ ಎರಡು ಕಾರುಗಳಿಗೆ ಮುಖಾಮುಖಿ ಡಿಕ್ಕಿ ಹೊಡೆದಿರುವುದನ್ನು ಡ್ಯಾಶ್ಕ್ಯಾಮ್ನಲ್ಲಿ ಸೆರೆಯಾಗಿದೆ. ಈ ದೃಶ್ಯವು ಮಿನಿಬಸ್ ಹೆಚ್ಚಿನ ವೇಗದಲ್ಲಿ ಹತ್ತಿರ ಬರುತ್ತಿರುವುದನ್ನು ತೋರಿಸುತ್ತದೆ,
ಮೊದಲು ಅದು ಮುಂದೆ ಬರುತ್ತಿದ್ದ ಟೊಯೋಟಾ ಯಾರಿಸ್‌ಗೆ ಡಿಕ್ಕಿ ಹೊಡೆಯುತ್ತದೆ. ನಂತರ ಮಿನಿಬಸ್ ಮತ್ತು ಯಾರಿಸ್ ನೇರವಾಗಿ ವೋಕ್ಸ್‌ವ್ಯಾಗನ್ ಪೋಲೊಗೆ ಡಿಕ್ಕಿ ಹೊಡೆದಿದೆ.
ತದನಂತರ ಬಂದ ತುರ್ತು ಸೇವೆಗಳು 20ರ ಹರೆಯದ ಪುರುಷ ಮತ್ತು ಮಹಿಳೆಯನ್ನು ಹತ್ತಿರದ ವೈದ್ಯಕೀಯ ಸೌಲಭ್ಯಕ್ಕೆ ಕರೆದೊಯ್ದವು ಎಂದು ವರದಿಯಲ್ಲಿ ತಿಳಿಸಿದ್ದಾರೆ. ಗಂಭೀರ ಗಾಯಗೊಂಡಿದ್ದ 60 ವರ್ಷದ ವೃದ್ಧ ವ್ಯಕ್ತಿಯನ್ನು ಏರ್ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಪೊಲೀಸರು ನಂತರ ಮಿನಿಬಸ್ ಚಾಲಕನನ್ನು ಸೋಮರ್‌ಸೆಟ್‌ನ ಯೆಯೋವಿಲ್‌ನ 35 ವರ್ಷದ ಬೆಂಜಮಿನ್ ಚಾರ್ಲ್ಸ್ ಫೋಸ್ಟರ್ ಎಂದು ಗುರುತಿಸಿದ್ದಾರೆ. ತನಿಖೆಯ ನಂತರ, ಫೋಸ್ಟರ್‌ನನ್ನು ಹಲವಾರು ಆರೋಪಗಳ ಮೇಲೆ ಬಂಧಿಸಲಾಗಿದೆ. ಜೊತೆಗೆ
ಚಾಲಕನಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು 7 ವರ್ಷಗಳ ಪರವಾನಗಿ ರದ್ದತಿಯನ್ನು ವಿಧಿಸಲಾಗಿದೆ. (ಏಜೆನ್ಸೀಸ್)