ಕರೀನಾ ಕಪೂರ್ ಅವರ ಶೋನಲ್ಲಿ ಕಾಣಿಸಿಕೊಂಡ ನಟಿ ಕೃತಿ ಸನೂನ್ 
ನ್ಯೂಸ್

‘ತಮ್ಮ ಕೆಲಸ ತಾವು ನೋಡಿಕೊಳ್ಳಿ, ಜಡ್ಜ್ ಮಾಡಬೇಡಿ’: ಟ್ರೋಲಿಗರಿಗೆ ನಟಿ ಕೃತಿ ಸನೂನ್ ಖಡಕ್ ಮಾತು! | Kriti Sanon Controversy

ರಕ್ಷಾ ಬಂಧನ ಜಾಹೀರಾತಿನ ಉಡುಪಿನ ವಿವಾದದ ಬಗ್ಗೆ ಕೃತಿ ಸನೂನ್ ಕರೀನಾ ಕಪೂರ್ ಶೋನಲ್ಲಿ ಮಾತನಾಡಿದ್ದಾರೆ. ಮಹಿಳೆಯರು ತಮ್ಮಷ್ಟಕ್ಕೆ ಇರಲು ಬಯಸುತ್ತಾರೆ ಎಂದು ಟ್ರೋಲಿಗರಿಗೆ ಟಾಂಗ್ ಕೊಟ್ಟಿದ್ದಾರೆ.

Raksha Bandhan ad controversy: ರಕ್ಷಾ ಬಂಧನ ಜಾಹೀರಾತಿನ ಉಡುಪಿನ ವಿವಾದದ ಬಗ್ಗೆ ಕರೀನಾ ಕಪೂರ್ ಅವರ 'ವಾಟ್ ವುಮೆನ್ ವಾಂಟ್' ಶೋನಲ್ಲಿ ಮಾತನಾಡಿರುವ ಕೃತಿ ಸನೂನ್, ತನ್ನ ಬ್ಲೌಸ್ ಪ್ರೈಮ್‌ಟೈಮ್ ನ್ಯೂಸ್‌ನಲ್ಲಿ ಚರ್ಚೆಯಾಗಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿ, ಮಹಿಳೆಯರ ಪಾಡಿಗೆ ಅವರನ್ನು ಬಿಡಬೇಕು ಎಂದು ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.

ಈ ವಿವಾದದ ಬಗ್ಗೆ ಮಾತನಾಡಿದ ಅವರು, ‘ಇದು ಕೇವಲ ನನ್ನ ವಿಚಾರವಲ್ಲ, ಮಹಿಳೆಯರನ್ನು ಪ್ರತಿಯೊಂದಕ್ಕೂ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ ಮತ್ತು ಸಣ್ಣ ವಿಷಯಕ್ಕೂ ಗುರಿಯಾಗಿಸಲಾಗುತ್ತದೆ ಎಂಬ ದೊಡ್ಡ ಸಮಸ್ಯೆಯಾಗಿದೆ’ ಎಂದಿದ್ದಾರೆ.

ಇನ್ನು, ಸಂಸ್ಕೃತಿ ಮತ್ತು ಗೌರವದ ಬಗ್ಗೆ ಮಾತನಾಡುವವರೇ ತಮ್ಮ ಪೋಷಕರು ಹಾಗೂ ಸಹೋದರಿಯ ಪೋಸ್ಟ್‌ಗಳ ಕೆಳಗೆ ಅತ್ಯಂತ ಕೀಳು ಮಟ್ಟದ ಪದಗಳಿಂದ ನಿಂದಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳೆಯರು ತಮ್ಮ ಪರವಾಗಿ ತಾವೇ ನಿಲ್ಲುವುದು ತುಂಬಾ ಮುಖ್ಯ ಎಂದಿರುವ ನಟಿ ಕೃತಿ ಸನೂನ್, ಮಹಿಳೆಯರು ವಾಸ್ತವವಾಗಿ ಬಯಸುವುದು ಯಾರೂ ನಮ್ಮನ್ನು ನಿರ್ಣಯಿಸಬಾರದು ಮತ್ತು ಜನರು ತಮ್ಮ ಕೆಲಸವನ್ನು ತಾವು ನೋಡಿಕೊಳ್ಳಬೇಕು ಎಂಬುದನ್ನು ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ. (ಏಜೆನ್ಸೀಸ್​)