ನ್ಯೂಸ್

ಕೋಟ್ಯಧಿಪತಿ ಕುಟುಂಬಗಳ ಸಂಖ್ಯೆ ಏರಿಕೆ...

ಭಾರತದಲ್ಲಿ 2021ನೇ ಸಾಲಿನಲ್ಲಿ ಕೋಟ್ಯಧಿಪತಿ ಕುಟುಂಬಗಳ ಸಂಖ್ಯೆ ಹೆಚ್ಚಳ ಆಗಿದೆ ಎಂದು ಹರುನ್ ಇಂಡಿಯಾ ವೆಲ್ತ್ ವರದಿ ತಿಳಿಸಿದೆ. 2020ಕ್ಕಿಂತ 2021ರಲ್ಲಿ ಶೇ. 11ರಷ್ಟು ಸಂಪತ್ತು ವೃದ್ಧಿಸಿದೆ. ಐಷಾರಾಮಿ ಗ್ರಾಹಕರ ಈ ಸಮೀಕ್ಷೆಯಲ್ಲಿ ಪಾವತಿಯ ಮಾರ್ಗವನ್ನೂ ಪರಿಗಣಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

ಸಂತಸದ ಪ್ರಮಾಣದಲ್ಲಿ ಇಳಿಕೆ: ವೈಯಕ್ತಿಕ ಮತ್ತು ವೃತ್ತಿಯಲ್ಲಿ ಸಂತಸದ ಪ್ರಮಾಣ ಶೇ. 66ರಷ್ಟು ಎಂದು ಹರುನ್ ಸಂಸ್ಥೆ ಹೇಳಿದೆ. 2020ರಲ್ಲಿ ಇದು ಶೇ. 72 ಇತ್ತು.

  • ಸಮೀಕ್ಷೆಯಲ್ಲಿ ಒಟ್ಟಾರೆ ಸಂಪತ್ತು 7 ಕೋಟಿ ರೂ. ಇರುವ ಕುಟುಂಬಗಳ ಪರಿಗಣನೆ.
  • ದೇಶದಲ್ಲಿ 4.58 ಲಕ್ಷ ಕುಟುಂಬಗಳು ಈ ಪಟ್ಟಿ ಇಲ್ಲಿವೆ. 2020ಕ್ಕಿಂತ ಶೇ.11 ಹೆಚ್ಚು.
  • ಮುಂದಿನ ಐದು ವರ್ಷದಲ್ಲಿ ಕೋಟ್ಯಧಿಪತಿ ಕುಟುಂಬಗಳ ಸಂಖ್ಯೆ ಶೇ. 30 ಏರಿಕೆಯ ಅಂದಾಜು
  • ಶೇ. 36ರಷ್ಟು ಸಿರಿವಂತರು ಇ-ವ್ಯಾಲೆಟ್ ಅಥವಾ ಯುಪಿಐ ಮೂಲಕ ಪಾವತಿ ಮಾಡಿದ್ದಾರೆ. 2020ರಲ್ಲಿ ಇದು ಶೇ. 18 ಇತ್ತು.
  • ಹೂಡಿಕೆಗೆ ಷೇರುಪೇಟೆ, ರಿಯಲ್ ಎಸ್ಟೇಟ್​ಗಳನ್ನು ಶ್ರೀಮಂತರು ಹೆಚ್ಚಾಗಿ ಆಯ್ದುಕೊಂಡಿದ್ದಾರೆ.
  • ಸಮೀಕ್ಷೆಗೆ ಒಳಪಟ್ಟವರಲ್ಲಿ ಮೂರನೇ ಒಂದು ಭಾಗದಷ್ಟು ಜನರು ಅತಿ ಹೆಚ್ಚು ಶ್ರೀಮಂತರು ಒಳಗೊಂಡಿದ್ದರು.
  • ಅತಿ ಶ್ರೀಮಂತರ ಪೈಕಿ ಶೇ. 70 ಮಂದಿ ತಮ್ಮ ಮಕ್ಕಳನ್ನು ವ್ಯಾಸಂಗಕ್ಕೆ ವಿದೇಶಕ್ಕೆ ಕಳುಹಿಸುವ ಇಂಗಿತ ಹೊಂದಿದ್ದಾರೆ.
  • ದೆಹಲಿಯಲ್ಲಿ ಸಿರಿವಂತರು:17,400
  • ಕೋಲ್ಕತದಲ್ಲಿ ಕೋಟ್ಯಧಿಪತಿಗಳ ಕುಟುಂಬ:10,500
  • ಮುಂಬೈನಲ್ಲಿ ಶ್ರೀಮಂತ ಕುಟುಂಬ:2,300