ನ್ಯೂಸ್

ತೇಜಸ್ವಿ ಹಾಲು ಹಲ್ಲು ಇನ್ನು ಉದುರಿಲ್ಲ ಅವನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ..ಈ ಪಕ್ಷಕ್ಕೆ ನಮ್ಮ ಬೆಂಬಲ : ತೇಜ್ ಪ್ರತಾಪ್ Milk mouthed child

ಬಿಹಾರ: ರಾಜಕೀಯದಲ್ಲಿ ಯಾರು ಖಾಯಂ ಮಿತ್ರರು ಇಲ್ಲ , ಶತೃಗಳು ಇಲ್ಲ ಎಂಬ ಮಾತಿಗೆ ಬಿಹಾರ ಚುನಾವಣೆ ಸಾಕ್ಷಿಯಾಗಿದ್ದು, ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಪುತ್ರರು ಪರಸ್ಪರ ವಾಗ್ವಾದಕ್ಕಿಳಿದಿದ್ದಾರೆ.

ಲಾಲೂರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ತಮ್ಮ ಸಹೋದರ ತೇಜಸ್ವಿ ಯಾದವ್ ರನ್ನು ಸಾರ್ವಜನಿಕವಾಗಿ ವ್ಯಂಗ್ಯವಾಡಿದ್ದು, ಅವನ ಹಾಲಿನ ಹಲ್ಲುಗಳು ಇನ್ನೂ ಉದುರಿಹೋಗಿಲ್ಲ (Milk mouthed child) ಎಂದು ಲೇವಡಿ ಮಾಡಿದ್ದಾರೆ.

ಸುದ್ದಿ ಸಂಸ್ಥೆರೊಂದಿಗೆ ಮಾತನಾಡಿದ ತೇಜ್ ಪ್ರತಾಪ್, ತೇಜಸ್ವಿ ಹಾಲು ಹಲ್ಲು ಇನ್ನು ಉದುರಿಲ್ಲ. ಹೀಗಾಗಿ ಮಗುವಿನ ಮಾತುಗಳನ್ನು ಯಾರು ಗಂಭೀರವಾಗಿ ಪರಿಗಣಿಸಬೇಡಿ ಎಂದು ಹೇಳಿದರು.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಈ ಹಿಂದಿನ ಮಹುವಾದಲ್ಲಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತಿರುವ ತೇಜ್ ವಿರುದ್ಧ, ಸಹೋದರ ತೇಜಸ್ವಿ ಪ್ರಚಾರ ನಡೆಸಿದ ಕೆಲವು ದಿನಗಳ ಬಳಿಕ ಈ ರೀತಿಯ ಆಕ್ರೋಶ ಹೊರಹಾಕಿದ್ದಾರೆ. ಮಹುವಾ ಜನರು ಬಯಸಿದರೆ, ನಾನು ಈ ಬಾರಿ ಮುಖ್ಯಮಂತ್ರಿಯಾಗುತ್ತೇನೆ. ಹಾಗೆಯೇ ನಮ್ಮ ಪಕ್ಷದ 20-30 ಶಾಸಕರು ಗೆಲ್ಲುವ ಸಾಧ್ಯತೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆಯ ಫಲಿತಾಂಶದ ಬಳಿಕ ಅಧಿಕಾರದ ಕೀಲಿಕೈ ನನ್ನ ಬಳಿಯೇ ಇರಲಿದೆ. ಮಹುವಾಗೆ ಎಂಜಿನಿಯರಿಂಗ್ ಕಾಲೇಜು ನೀಡುವವರನ್ನು ನಾವು ಬೆಂಬಲಿಸಲಿದ್ದೇವೆ ಎಂದರು.

ಸಹೋದರರ ನಡುವಿನ ಪರಸ್ಪರ ಟೀಕಾ ಪ್ರಹಾರ ಲಾಲೂ ಕುಟುಂಬದಲ್ಲಿನ ಒಡಕು ಬಯಲಿಗೆ ಬಂದಿದೆ . ಒಂದು ಕಾಲದಲ್ಲಿ ಲಾಲು ಅವರ ರಾಜಕೀಯ ಉತ್ತರಾಧಿಕಾರಿ ಎಂದು ಪರಿಗಣಿಸಲ್ಪಟ್ಟಿದ್ದ ತೇಜ್ ಪ್ರತಾಪ್, ತಮ್ಮ ವಿಚ್ಛೇದನ ಪ್ರಕರಣ ಬಾಕಿ ಇರುವಾಗಲೇ ಬೇರೆ ಇನ್ನೊಬ್ಬ ಮಹಿಳೆಯೊಂದಿಗೆ 12 ವರ್ಷಗಳ ಕಾಲ ಸಂಬಂಧದಲ್ಲಿರುವುದಾಗಿ ಸ್ವತಃ ತಾವೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ ಬಹಿರಂಗಪಡಿಸಿದ ನಂತರ ಅವರನ್ನು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ದಿಂದ ಹೊರಹಾಕಲಾಯಿತು.

ಬಿಹಾರದ ಆರೋಗ್ಯ ಸಚಿವರಾಗಿದ್ದ ಲೂಲೂ ಪ್ರಸಾದ್​ ಯಾದವ್​ ಅವರ ಅವಧಿಯಲ್ಲಿ ಮಹುವಾಗೆ ವೈದ್ಯಕೀಯ ಕಾಲೇಜು ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಆದರೆ ಈಗ ಕ್ಯಾಂಪಸ್​ಗೆ ಬೀಗ ಹಾಕಲ್ಪಟ್ಟಿದ್ದು, ಅಲ್ಲಿ ರೋಗಿಗಳು, ಅಧ್ಯಾಪಕರುಗಳು, ಹಾಸಿಗೆಗಳು ಯಾವುದೂ ಇಲ್ಲ.

ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್​ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್​ ಹೆಸರನ್ನು ಘೋಷಿಸಲಾಗಿದೆ. (ಏಜೆನ್ಸೀಸ್​)