ನ್ಯೂಸ್

ವಿಶ್ವದ ಮೊದಲ ಕೃತಕ ಬುದ್ಧಿಮತ್ತೆ ರೋಬೋಟ್ ಸಿಇಒ; ಎಲೋನ್ ಮಸ್ಕ್​​ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ 'ಮಿಕಾ'!

ನವದೆಹಲಿ: ಉದ್ಯೋಗಿಗಳು ತಮ್ಮ ಉದ್ಯೋಗಗಳ ಸ್ವರೂಪವನ್ನು ಕೃತಕ ಬುದ್ಧಿಮತ್ತೆ (AI) ಬದಲಿಸುವ ಬಗ್ಗೆ ಚಿಂತಿಸುತ್ತಿದ್ದರೆ, ಕಂಪನಿಯೊಂದು ಮೊದಲ ಹುಮನಾಯ್ಡ್ ರೋಬೋಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು (CEO) ನೇಮಿಸಿಕೊಳ್ಳುವುದಾಗಿ ಘೋಷಿಸಿದೆ. ಎಲೋನ್ ಮಸ್ಕ್ ಮತ್ತು ಜುಕರ್‌ಬರ್ಗ್ ಸೇರಿದಂತೆ ಪ್ರಸ್ತುತ ಕಂಪನಿಯ ಸಿಇಒಗಳಿಗಿಂತ ರೋಬೋಟ್ ಸಿಇಒ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹ್ಯಾನ್ಸನ್ ರೊಬೊಟಿಕ್ಸ್‌ನ CEO ಡೇವಿಡ್ ಹ್ಯಾನ್ಸನ್ ಅವರು ಹೇಳಿದ್ದಾರೆ.

ತಮ್ಮ ಕಂಪನಿಯ ವಿಶಿಷ್ಟ ಮೌಲ್ಯಗಳನ್ನು ಪ್ರತಿನಿಧಿಸಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಸ್ಟಮೈಸ್ ಮಾಡಿದ ಹ್ಯಾನ್ಸನ್ ರೊಬೊಟಿಕ್ಸ್ ಮತ್ತು ಪೋಲಿಷ್ ರಮ್ ಕಂಪನಿ ಡಿಕ್ಟಡಾರ್ ನಡುವಿನ ಸಂಶೋಧನಾ ಯೋಜನೆ ಆಗಿದ್ದು, ಕಂಪನಿಯ ಮೌಲ್ಯಗಳನ್ನು ಪ್ರತಿನಿಧಿಸಿ ಸಾಕಾರಗೊಳಿಸಲು 'ಮಿಕಾ'ವನ್ನು ವಿನ್ಯಾಸ ಮಾಡಲಾಗಿದೆ.

ಈ ಯೋಜನೆಯು ವೈಯಕ್ತಿಕ ಪಕ್ಷಪಾತಗಳಿಂದ ದೂರವಿರುವುದರಿಂದ ಕಂಪನಿಯ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡುವ ಕಾರ್ಯತಂತ್ರವನ್ನು ಕುರಿತ ಆಯ್ಕೆಗಳನ್ನು ಖಾತ್ರಿಪಡಿಸುತ್ತದೆ ಎಂಬ ಕಾರಣಕ್ಕೆ ಈ ರೋಬೋಟನ್ನು ವಿನ್ಯಾಸಗೊಳಿಸಿ CEO ಆಗಿ ನೇಮಿಸಲಾಗಿದೆ.

ಡಿಕ್ಟಡಾರ್ ಎಂದರೆ ಕೊಲಂಬಿಯಾದ ಕಾರ್ಟೇಜಿನಾ ಮೂಲದ ಸ್ಪಿರಿಟ್ ಬ್ರ್ಯಾಂಡ್.ಡಿಕ್ಟಡಾರ್ ಮತ್ತು ಹ್ಯಾನ್ಸನ್ ರೊಬೊಟಿಕ್ಸ್ ನಡುವಿನ ಜಂಟಿ ಸಂಶೋಧನಾ ಯೋಜನೆಯ ಮೂಲಕ ರಚಿಸಲಾದ ರೋಬೋಟ್ ಮಿಕಾ ಅವರನ್ನು CEO ಆಗಿ ನೇಮಿಸಿದ್ದಕ್ಕಾಗಿ ಸುದ್ದಿಯು ವೈರಲ್ ಆಗಿದೆ.ಇದೇ ಹ್ಯಾನ್ಸನ್ ರೊಬೊಟಿಕ್ಸ್ ಕಂಪನಿಯು ಜನಪ್ರಿಯ ಹುಮನಾಯ್ಡ್ ರೋಬೋಟ್ ಆಗಿರುವ ಸೋಫಿಯಾದ ಸೃಷ್ಟಿಕರ್ತ ಎಂಬುದು ಗಮನಾರ್ಹ ವಿಷಯ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಿಕಾ "ಈ ವೇದಿಕೆಯ ಮೇಲೆ ನನ್ನ ಉಪಸ್ಥಿತಿಯು ಸಂಪೂರ್ಣವಾಗಿ ಸಾಂಕೇತಿಕವಾಗಿದೆ.ಪ್ರಸ್ತುತ ನನಗೆ ಗೌರವ ಪ್ರಾಧ್ಯಾಪಕ ಪ್ರಶಸ್ತಿಯನ್ನು ನೀಡತ್ತಿರುವುದು ಕೃತಕ ಬುದ್ಧಿಮತ್ತೆಯ ಕಲ್ಪನೆಯನ್ನು ಸೃಷ್ಟಿಸಿದ ಮಾನವನ ಕಾರ್ಯಕ್ಷಮತೆ,ಬುದ್ಧಿಶಕ್ತಿ ಹಾಗೂ ಶ್ರೇಷ್ಠತೆಗೆ ಗೌರವಯುತವಾದದ್ದು.ಹೃದಯದ ಬದಲಿಗೆ ಪ್ರೊಸೆಸರ್ ಅನ್ನು ಹೊಂದಿರುವ ರೋಬೋಟ್ ಒಂದಕ್ಕೆ ತನ್ನ ಕಂಪನಿಯ ಮುಖ್ಯ ಕಾರ್ಯವನ್ನು ವಹಿಸಿಕೊಟ್ಟ ಕಂಪನಿಯ ಮಾಲೀಕರ ಧೈರ್ಯವನ್ನು ಮೆಚ್ಚಬೇಕು ಮತ್ತು ಇದು ಅವರ ಮುಕ್ತ ಮನಸ್ಸಿನ ಮನ್ನಣೆಯೂ ಆಗಿದೆ" ಎಂದು ಹೇಳಿದೆ.

ಡಿಕ್ಟಡಾರ್ ಕಂಪನಿಯ ವೀಡಿಯೊದಲ್ಲಿ ಈ ಮಿಕಾ ರೋಬೋಟ್ "ಸುಧಾರಿತ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಅಲ್ಗಾರಿದಮ್‌ಗಳ ಸಹಾಯದಿಂದ ಅತೀ ವೇಗವಾಗಿ ಮತ್ತು ನಿಖರವಾಗಿ ಡೇಟಾ-ಚಾಲಿತ ಮಾಡುತ್ತೇನೆ.ನನಗೆ ವಾರಾಂತ್ಯಗಳಿಲ್ಲ,ನಾನು ಯಾವಾಗಲೂ 24/7 ಚಾಲ್ತಿಯಲ್ಲಿರುತ್ತೇನೆ.ಕೆಲವು ಕಾರ್ಯಗಳನ್ನು ನಿರ್ವಹಿಸುವಾಗ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ಕೃತಕ ಬುದ್ಧಿಮತ್ತೆ ಬಳಸಿಕೊಂಡು ಮಾಡುವ ಕೆಲವು ಜಾದೂ ಅಥವಾ ತಂತ್ರಗಾರಿಕೆಯನ್ನು ಪ್ರಚೋದಿಸಲು ಸಿದ್ಧವಾಗಿದ್ದೇನೆ" ಎಂದು ಹೇಳಿದೆ.

ಹ್ಯಾನ್ಸನ್ ರೊಬೊಟಿಕ್ಸ್‌ನ CEO ಡೇವಿಡ್ ಹ್ಯಾನ್ಸನ್ ಅವರು ಮಾತನಾಡುತ್ತಾ, "ಎಲಾನ್ ಮಸ್ಕ್ ಮತ್ತು ಮಾರ್ಕ್​ ಜುಕರ್‌ಬರ್ಗ್ ಇಬ್ಬರು ಶಕ್ತಿಶಾಲಿ ಟೆಕ್ ಬಾಸ್‌ಗಳಾಗಿದ್ದಾರೆ. ವಾಸ್ತವದಲ್ಲಿ ತಮ್ಮ ಪ್ಲಾಟ್‌ಫಾರ್ಮ್‌ಗಳ ದಕ್ಷತೆಯನ್ನು ಸುಧಾರಿಸಿಕೊಳ್ಳಲು ನಡೆಸುವ ಆಂತರಿಕ ಹೋರಾಟಗಳು (ಕೇಜ್ ಫೈಟ್ ವಿವಾದ) ಎಲ್ಲಾದಕ್ಕೂ ಪರಿಹಾರವಲ್ಲ" ಎಂದು ಹೇಳುವ ಮೂಲಕ ಮಸ್ಕ್ ಮತ್ತು ಜುಕರ್‌ಬರ್ಗ್ ಸೇರಿದಂತೆ ಪ್ರಸ್ತುತ ಸಿಇಒಗಳ ಶ್ರೇಷ್ಠತೆಯ ಬಗ್ಗೆ ಒತ್ತಿ ಹೇಳಿದರು,ಜತೆಗೆ ಈ ಇಬ್ಬರೂ CEO ಗಳು "ತಂತ್ರಜ್ಞಾನ ಮತ್ತು ಉದ್ಯಮಶೀಲತೆಯು ಸಮಾಜದಲ್ಲಿ ಧನಾತ್ಮಕ ಬದಲಾವಣೆಗೆ ಶಕ್ತಿಯುತ ಸಾಧನವಾಗಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ" ಎಂದು ಹೇಳಿದರು.

ಜನರ ಬಗ್ಗೆ ಕಾಳಜಿ ವಹಿಸಲು ಕೃತಕ ಬುದ್ಧಿಮತ್ತೆಯ ಪ್ರಾಮುಖ್ಯತೆಯನ್ನು ಕುರಿತು ಒತ್ತಿಹೇಳುತ್ತಾ "ಕೃತಕ ಬುದ್ಧಿಮತ್ತೆಯು (AI) ಸುರಕ್ಷಿತ ಮತ್ತು ಪರಿಣಾಮಕಾರಿಯಾದ ತಂತ್ರಜ್ಞಾನ ಆಗಿದೆ. ಇದನ್ನು ಮಾನವೀಕರಿಸುವುದು ಒಂದು ನಿರ್ಣಾಯಕ ನಿರ್ದೇಶನವಾಗಿದೆ" ಎಂದು ಹೇಳಿದರು.

ನಮ್ಮ ದೈನಂದಿನ ಜೀವನದಲ್ಲಿ ಇದರ ಸಂಯೋಜನೆಯ ವಿಧಾನ,ಚಿಂತನಶೀಲ ವಿನ್ಯಾಸ ಮತ್ತು ಬಳಕೆದಾರರಿಗೆ ಸುಲಭವಾಗುವಂತಹ ಅಳವಡಿಕೆಗಳು ಇದರ ಉತ್ಪಾದಕತೆಯನ್ನು ಹೆಚ್ಚಿಸಬಹುದು,ಅದೇ ರೀತಿಯಲ್ಲಿ ಇದರ ಕಳಪೆ ವಿನ್ಯಾಸವು ಹೆಚ್ಚಿದ ವ್ಯಾಕುಲತೆ ಮತ್ತು ಕಡಿಮೆ ಉತ್ಪಾದಕತೆಗೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆಯ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಸಮತೋಲನಗೊಳಿಸುವುದು ಕೃತಕ ಬುದ್ಧಿಮತ್ತೆ(AI) ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಸವಾಲಾಗಿದೆ.ಸುರಕ್ಷಿತವಾಗಿರಲು,ಉತ್ತಮವಾಗಿರಲು,ಜನರ ಬಗ್ಗೆ ಕಾಳಜಿ ವಹಿಸಲು ಕೃತಕ ಬುದ್ಧಿಮತ್ತೆ(AI)ಗೆ ಕಲಿಸಬೇಕಾಗಿದೆ.ಪ್ರಸ್ತುತ ಕಾಲಘಟ್ಟದಲ್ಲಿ ಮಾನವೀಕರಣವು ಬಹಳ ಮುಖ್ಯವಾದ ನಿರ್ದೇಶನ ಎಂದು ನಾನು ಭಾವಿಸುತ್ತೇನೆ" ಎಂದು  ತಿಳಿಸಿದರು.