ನ್ಯೂಸ್

ಬಿಹಾರ, ಒಡಿಶಾ ವಲಸೆ ಕಾರ್ಮಿಕರಿಂದ ಪೊಲೀಸರ ಮೇಲೆ ಕಲ್ಲು ತೂರಾಟ; ಪೀಣ್ಯ ಅಧಿಕಾರಿಗೆ ಗಾಯ

lakshmihegde

ಬೆಂಗಳೂರು: ಬಿಹಾರ ಮತ್ತು ಒಡಿಶಾದ ವಲಸೆ ಕಾರ್ಮಿಕರು ಬೆಂಗಳೂರು ಪೊಲೀಸ್ ಅಧಿಕಾರಿಯೋರ್ವನ ಮೇಲೆ ತೀವ್ರ ಹಲ್ಲೆ ಮಾಡಿದ್ದಾರೆ.

ನಮ್ಮ ರಾಜ್ಯದ ಬೇರೆಬೇರೆ ಜಿಲ್ಲೆಗಳ ವಲಸೆ ಕಾರ್ಮಿಕರನ್ನೆಲ್ಲ ಅವರ ಊರಿಗೆ ಕೆಎಸ್​ಆರ್​ಟಿಸಿ ಬಸ್​ಗಳ ಮೂಲಕ ಕಳಿಸಲಾಗುತ್ತಿದೆ. ಬೇರೆ ರಾಜ್ಯದ ವಲಸಿಗರೂ ಕೂಡ ತಮ್ಮ ಊರಿಗೆ ತೆರಳಲು ತುದಿಗಾಲಿನಲ್ಲಿ ನಿಂತಿದ್ದಾರೆ.

ಇಂದು ಇದೇ ವಿಚಾರಕ್ಕೆ ಪೀಣ್ಯದ ಬಳಿ ಬಿಹಾರಿ, ಒಡಿಶಾದ ಹಲವು ಕಾರ್ಮಿಕರು ಪೊಲೀಸರ ಜತೆ ಜಗಳಕ್ಕೆ ಇಳಿದಿದ್ದರು. ನಮಗೆ ವಿಶೇಷ ರೈಲಿನ ವ್ಯವಸ್ಥೆ ಮಾಡಿಕೊಡಿ ಎಂದು ಒತ್ತಾಯ ಮಾಡುತ್ತಿದ್ದರು. ಅವರನ್ನು ನಿಯಂತ್ರಿಸಲು ಪ್ರಯತ್ನಿಸಿದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಈ ಗಲಾಟೆಯಲ್ಲಿ ಪೀಣ್ಯ ಪೊಲೀಸ್ ಇನ್ಸ್​ಪೆಕ್ಟರ್​ ಮುದ್ದುರಾಜ್​ ಅವರ ತಲೆಗೆ ಗಾಯವಾಗಿದೆ. ಸದ್ಯ ಬೆಂಗಳೂರಿನಿಂದ ನೆಲಮಂಗಲಕ್ಕೆ ತೆರಳುವ ಮಾರ್ಗ ಸಂಪೂರ್ಣ ಬಂದ್ ಆಗಿದೆ.