ನ್ಯೂಸ್

ಬಿಡಿಯೂಟ ಅಡುಗೆಯವರಿಗೆ ಇಡುಗಂಟು ಸೌಲಭ್ಯ|Midday Meal workers

Bengaluru - Political - Vilas Melagiri

ಬೆಂಗಳೂರು: ಮಧ್ಯಾಹ್ನ ಉಪಹಾರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿದ್ದು, ಅರವತ್ತು ವರ್ಷ ವಯೋಮಿತಿ ಪೂರೈಸಿ (31.03.2022) ರಂದು ಅಥವಾ ನಂತರ ಬಿಡುಗಡೆ ಹೊಂದುವ ಅಡುಗೆ ಸಿಬ್ಬಂದಿಗೆ ಸರ್ಕಾರ ಒಂದು ಬಾರಿಯ ಇಡುಗಂಟು ಸೌಲಭ್ಯ ಪ್ರಕಟಿಸಿದೆ.

ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಕಾರ್ಯಕ್ರಮದಡಿ ಆಯ್ಕೆಗೊಂಡು ಶಾಲೆಗಳಲ್ಲಿ ಅಡುಗೆ ಕೆಲಸದಿಂದ ಬಿಡುಗಡೆಗೊಂಡಿರುವ ಹಾಗೂ ಬಿಡುಗಡೆ ಹೊಂದುವವರಿಗೆ ತಲಾ 30 ಸಾವಿರ ಹಾಗೂ 40 ಸಾವಿರ ರೂ. ಇಡುಗಂಟು ನೀಡಲಾಗುತ್ತದೆ.

5 ವರ್ಷಕ್ಕಿಂತ ಮೇಲ್ಪಟ್ಟು 15 ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ್ದಲ್ಲಿ 30 ಸಾವಿರ ರೂ. ಹಾಗೂ 15 ವರ್ಷ ಹಾಗೂ ಅದಕ್ಕೂ ಹೆಚ್ಚು ಸೇವೆ ಸಲ್ಲಿಸಿದ್ದಲ್ಲಿ 40 ಸಾವಿರ ರೂ. ಗಳನ್ನು ಒಂದು ಬಾರಿಗೆ ಇಡುಗಂಟು ನೀಡಲಾಗುತ್ತದೆ. ಈ ಸಂಬಂಧ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ ಸುತ್ತೋಲೆ ಹೊರಡಿಸಿದೆ.