ನ್ಯೂಸ್

ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆ; ರಾಜ್ಯಪಾಲರನ್ನು ಭೇಟಿ ಮಾಡಿದ ಕಾನೂನು ಸಚಿವ| Finance harassment

ಬೆಂಗಳೂರು: ಮೈಕ್ರೋ ಫೈನಾನ್ಸ್ ಕಿರುಕುಳ, ಬಲವಂತದ ವಸೂಲಿಗೆ ಸಂಬಂಧಿಸಿದಂತೆ ತಾವು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜ್ಯಪಾಲ ಥಾವರ ಚಂದ ಗೆಹಲೋತ್ ಅವರು ಕಾನೂನು ಸಚಿವ ಎಚ್.ಕೆ.ಪಾಟೀಲರಿಗೆ ಸಲಹೆ(Governor advised Law Minister HK Patilar to consider his suggestions regarding micro finance harassment and forced collection seriously) ನೀಡಿದ್ದಾರೆ.

ಸರ್ಕಾರ ತರಲು ಉದ್ದೇಸಿಸಿದ್ದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಿದ ಹಿನ್ನೆಲೆಯಲ್ಲಿ ಕೃತಜ್ಞತೆ ಸಲ್ಲಿಸಲು ತಮ್ಮನ್ನು ಭೇಟಿ ಮಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲರಿಗೆ ಈ ಸಲಹೆ ನೀಡಿದ್ದಾರೆ. ತಾವು ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡುವ ಸಂದರ್ಭದಲ್ಲಿ ಕೆಲವು ಸಲಹೆ ಸೂಚನೆ ನೀಡಿದ್ದು, ಅವುಗಳನ್ನು ವಿಧಾನ ಮಂಡಲದ ಅಧಿವೇಶನದಲ್ಲಿ ಚರ್ಚಿಸಿ ಅನುಸರಣೆ ಮಾಡುವಂತೆ ತಿಳಿಸಿದ್ದಾರೆ.

ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಕಾನೂನು ಸಚಿವ ಎಚ್.ಕೆ ಪಾಟೀಲ, ರಾಜ್ಯಪಾಲರು ಸರ್ಕಾರ ಕಳುಹಿಸಿದ್ದ ಸುಗ್ರಿವಾಜ್ಞೆಗೆ ಒಪ್ಪಿಗೆ ಕೊಟ್ಟಿದ್ದು, ಅವರಿಗೆ ಕೃತಜ್ಞತೆ ಹೇಳಲು ಬಂದಿದ್ದೆ. ಬಹಳ ಸೌಹಾರ್ದಯುತ ಚರ್ಚೆಯಾಗಿದೆ. ರಾಜ್ಯದ ಕೆಲವು ವಿಚಾರವಾಗಿ ಚರ್ಚೆ ಮಾಡಿದ್ದೇನೆ.

ಅವರು ಕೊಟ್ಟ ಸಲಹೆಗಳನ್ನು ಸದನದಲ್ಲಿ ಚರ್ಚೆ ಮಾಡುತ್ತೇವೆ. ಆರ್‌ಬಿಐ ನಿಯಮದಡಿ ಚರ್ಚೆ ಮಾಡಿ ಅಳವಡಿಸುತ್ತೇವೆ. ಸಾವು-ನೋವುಗಳಿಗೆ ಈ ಸುಗ್ರೀವಾಜ್ಞೆ ನೆರವಾಗಲಿದೆ. ಸಾಲಗಾರರ ಭಯದ ವಾತಾವರಣ ನಿವಾರಣೆಯಾಗಲಿದೆ. ಸರ್ಕಾರ ಸುಗ್ರೀವಾಜ್ಞೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಿದೆ ಎಂದರು.

ಬೇರೆ ಬಾಕಿ ಬಿಲ್ಗಳ ಬಗ್ಗೆ ರಾಜ್ಯಪಾಲರ ಬಳಿ ಚರ್ಚೆಯಾಗಿಲ್ಲ. ಈ ಭೇಟಿ ಸುಗ್ರೀವಾಜ್ಞೆ ಬಗ್ಗೆ ಸೀಮಿತವಾಗಿ ಚರ್ಚೆ ಮಾಡಿದ್ದೇವೆ. ರಾಜ್ಯಪಾಲರಿಗೆ ಧನ್ಯವಾದ ತಿಳಿಸಿದ್ದೇನೆ ಎಂದು ಹೇಳಿದರು.