ಬೆಂಗಳೂರು: ಬಿಗ್ಬಾಸ್ ಸ್ಪರ್ಧಿಗಳಲ್ಲಿ ವಿನಯ್ ಮತ್ತು ಮೈಕಲ್ ಮಾಡಿದ ತಪ್ಪಿಗೆ ಇಡೀ ಮನೆಮಂದಿಗೆ ಕಠಿಣ ಶಿಕ್ಷೆ ನೀಡಲಾಗಿದೆ. ಈ ಕುರಿತಾಗಿ ಮನೆಯಲ್ಲಿ ಅಸಮಧಾನ ವ್ಯಕ್ತವಾಗಿದೆ.
ದೊಡ್ಮನೆಯೊಳಗೆ ಸ್ಮೋಕಿಂಗ್ ರೂಮ್ ಅನ್ನು ಒಬ್ಬರಿಗಿಂತ ಹೆಚ್ಚು ಜನರು ಬಳಸಬಾರದು ಎಂಬ ನಿಯಮ ಇದೆ. ಮೈಕೆಲ್ ಮತ್ತು ವಿನಯ್ ಗೌಡ ಏಕಕಾಲಕ್ಕೆ ಬಳಕೆ ಮಾಡಿ ಒಂಟಿ ಮನೆಯ ನಿಯಮ ಉಲ್ಲಂಘಿಸಿದ್ದಾರೆ. ಮಾಡಿದ ತಪ್ಪಿಗೆ ಅವರು ಕ್ಷಮೆ ಕೂಡ ಕೇಳಿದ್ದಾರೆ. ಅದರೂ ಬಿಗ್ ಬಾಸ್ ಕರುಣೆ ತೋರಿಸಿಲ್ಲ. ಇವರಿಬ್ಬರು ಮಾಡಿದ ತಪ್ಪಿಗೆ ಇಡೀ ಮನೆಮಂದಿಗೆ ಶಿಕ್ಷೆ ನೀಡಲಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಮಾಡಿದ ತಪ್ಪಿನಿಂದ ಎಲ್ಲರೂ 50ಕೆಜಿ ಭಾರ ಹೊರಬೇಕಾಗಿದ್ದು, ಈ ಬಗ್ಗೆ ಮನೆಯ ಹೆಚ್ಚಿನ ಸದಸ್ಯರು ವಿನಯ್ ಮೇಲೆ ಸಿಟ್ಟಾಗಿದ್ದಾರೆ.
ರೂಲ್ಸ್ ಬಗ್ಗೆ ಮಾತನಾಡುತ್ತಿದ್ದ ವಿನಯ್ ಅವರೇ ಸ್ವತಃ ರೂಲ್ಸ್ ಬ್ರೇಕ್ ಮಾಡಿ ಮನೆಯ ಎಲ್ಲರೂ ಶಿಕ್ಷೆ ಅನುಭವಿಸುವಂತೆ ಮಾಡಿದ್ದಾರೆ. ಈ ಕುರಿತಾಗಿ ಮನೆಯಲ್ಲಿ ಅಸಮಧಾನ ವ್ಯಕ್ತವಾಗಿದೆ. ಈ ಬಗ್ಗೆ ಮನೆಯ ಸದಸ್ಯರು ಬಹಿರಂಗವಾಗಿಯೇ ವಿನಯ್ ಮತ್ತು ಮೈಕೇಲ್ ಮೇಲೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಈ ಎಪಿಸೋಡ್ ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ.
ಡ್ರೋನ್ ಪ್ರತಾಪ್ "ಬೇರೆ ಯಾರಾದ್ರೂ ಈ ತಪ್ಪು ಮಾಡಿದ್ರೆ ಅವ್ರು ಬದುಕೋಕೆ ಬಿಡ್ತಾ ಇದ್ರಾ?" ಎಂದು ಹೇಳಿದ್ದರೆ ಇನ್ನೊಬ್ಬರು ಬಿಗ್ ಬಾಸ್ ಮನೆಯಲ್ಲಿ ಬೇರೆಯವರು ತಪ್ಪು ಮಾಡಿದರೂ ನಾವು ಶಿಕ್ಷೆ ಅನುಭವಿಸಬೇಕಾಗುತ್ತದೆ" ಎಂದು ಹೇಳುವ ಪ್ರೋಮೊ ಬಿಗ್ಬಾಸ್ ಇಂದಿನ ಎಪಿಸೋಡ್ ಬಗ್ಗೆ ಇರುವ ಕೂತುಹಲ ಹೆಚ್ಚಾಗಿದೆ.