ತಿರುವನಂತಪುರಂ: ಕೇರಳದ 140 ಸ್ಥಾನಗಳಿಗೆ ನಡೆದಿರುವ ಮತದಾನದ ಮತಎಣಿಕೆ ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾಗಿದ್ದು, ಮೆಟ್ರೋ ಮ್ಯಾನ್ ಎಂದು ಖ್ಯಾತಿ ಪಡೆದಿರುವ ಬಿಜೆಪಿ ಅಭ್ಯರ್ಥಿ ಇ. ಶ್ರೀಧರನ್ ಪಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಮತಎಣಿಕೆಯ ಆರಂಭಿಕ ಟ್ರೆಂಡ್ ಪ್ರಕಾರ ಶ್ರೀಧರನ್ ಮುನ್ನಡೆ ಕಾಯ್ದುಕೊಂಡಿದ್ದು, ಎರಡು ಬಾರಿ ಕಾಂಗ್ರೆಸ್ ಶಾಸಕರಾದ ಯೂತ್ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಶಫಿ ಪರಂಬಿಲ್ ಮತ್ತು ಸಿಪಿಐ-ಎಂ ನ ಸಿಪಿ ಪ್ರಮೋದ್ ವಿರುದ್ಧ ಮೆಟ್ರೊಮ್ಯಾನ್ ಸ್ಪರ್ಧಿಸಿದ್ದಾರೆ.
ಟ್ರೆಂಡ್ ಹೀಗೆ ಮುಂದುವರಿದರೆ ಪಲಕ್ಕಾಡ್ನಲ್ಲಿ ಶ್ರೀಧರನ್ ಅವರು ಜಯಭೇರಿ ಬಾರಿಸಲಿದ್ದಾರೆ. ಅಂದಹಾಗೆ ಶ್ರೀಧರನ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿದೆ. (ಏಜೆನ್ಸೀಸ್)