ನ್ಯೂಸ್

ಮನೆಯೊಳಗೆ ಪತಿಯ ಅಂತ್ಯಸಂಸ್ಕಾರ ಮಾಡಿದ ಪತ್ನಿ!

ನರ್ನೂಲ್​: ಆಘಾತಕಾರಿ ಘಟನೆ ಒಂದರಲ್ಲಿ ಮೃತ ಪತಿಯ ಅಂತ್ಯಸಂಸ್ಕಾರವನ್ನು ಪತ್ನಿ ಮನೆಯಲ್ಲೇ ನೆರವೇರಿಸಿರುವ ಘಟನೆ ಆಂಧ್ರಪ್ರಧೇಶದ ಕರ್ನೂಲ್​ ಜಿಲ್ಲೆಯ ಪತ್ತಿಕೊಂಡದಲ್ಲಿ ನಡೆದಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಹರಿಕೃಷ್ಣ ಪ್ರಸಾದ್​(63) ಅವರು ಸೋಮವಾರ ನಿಧನರಾಗಿದ್ಧಾರೆ. ಅವರ ಪತ್ನಿ ಲಲಿತಾ ಮಾನಸಿಕ ಅಸ್ವಸ್ಥರಾಗಿದ್ದು ಪತಿಯ ಅಂತ್ಯಸಂಸ್ಕಾರವನ್ನು ಮನೆಯಲ್ಲಿಯೇ ನೆರವೇರಿಸಿದ್ದಾರೆ.

ಯಾರು ಬರುವುದಿಲ್ಲ ಎಂದು ಕೃತ್ಯ

ಈ ಕುರಿತು ಪ್ರತಿಕ್ರಿಯಿಸಿರುವ ಪತ್ತಿಕೊಂಡ ಪೊಲೀಸ್​ ಠಾಣಾಧಿಕಾರಿ ಮುರಳಿ ಮೋಹನ್​ ಮಧ್ಯಾಹ್ನ 12:00 ಘಂಟೆಗೆ ಸಂಭವಿಸಿದ್ದು ಆರೋಪಿ ಲಲಿತಾರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

ಕಳೆದ ಕೆಲ ವರ್ಷಗಳಿಂದ ಅನಾರೊಗ್ಯದಿಂದ ಬಳಲುತ್ತಿದ್ದ ತಮ್ಮ ಪತಿ ಸೋಮವಾರ ಬೆಳಗ್ಗ ಮೃತಪಟ್ಟಿದ್ದಾರೆ. ನೆರೆ ಹೊರಯವರಿಗೆ ವಿಷಯ ತಿಳಿಸಿದ್ದರೆ ಯಾರು ಬರುವುದಿಲ್ಲ ಎಂದು ಭಾವಿಸಿದ ಮಹಿಳೆ ತಮ್ಮ ಇಬ್ಬರು ಪುತ್ರರಿಗೆ ವಿಚಾರವ್ನು ತಿಳಿಸದೆ ಮನೆಯಲ್ಲಿದ್ದ ಪುಸ್ತಕಗಳನ್ನ ಪತಿಯ ದೇಹದ ಮೇಲೆ ಇಟ್ಟು ಬೆಂಕಿ ಹಚ್ಚಿ ಅಂತ್ಯಕ್ರಿಯೆ ಮಾಡಿದ್ದಾಳೆ.

ಮತಿಭ್ರಮಣೆ ಅಥವಾ ದಿಗ್ಭ್ರಮೆಗೊಂಡು ಮಾಡಿರಬಹುದು

ಈ ಕುರಿತು ನೆರೆ ಮನೆಯ ನಿವಾಸಿ ಒಬ್ಬರು ಪೊಲೀಸ್​ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ತೆರಳಿ ಪರಿಶೀಲಿಸಿದಾಗ ದೇಹವು ಶೇ 80ರಷ್ಟು ಸುಟ್ಟು ಹೋಗಿತ್ತು. ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳಿದ್ದು ಮೊದಲನೆಯವರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು ಎರಡನೇಯವರು ಕೆನೆಡಾದಲ್ಲಿ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತಿ ಸಾವಿನಿಂದ ಆಘಾತಕ್ಕೊಳಗಾದ ಪತ್ನಿ ಲಲಿತಾ ಮತಿಭ್ರಮಣೆ ಅಥವಾ ದಿಗ್ಭ್ರಮೆಗೊಂಡು ಅಥವಾ ದಿಗ್ಭ್ರಮೆಗೊಂಡು ಈ ರಿತಿ ಮಾಡಿರಬಹುದು ಎಂದು ಪತ್ತಿಕೊಂಡ ಪೊಲೀಸ್​ ಠಾಣಾಧಿಕಾರಿ ಮುರಳಿ ಮೋಹನ್ ಮಾಹಿತಿ ನೀಡಿದ್ದಾರೆ.