ಶೃಂಗೇರಿ ಮಠದ ಗುರುಭವನದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಚರಣ್, ಗೋಪಾಲಕೃಷ್ಣ, ಶಿವಶಂಕರ್, ಯಡಗೆರೆ ಗೋಪಾಲ್ ಇದ್ದರು. 
ನ್ಯೂಸ್

ಭಗವದ್ಗೀತೆ ಪಠಣದಿಂದ ಮಾನಸಿಕ ನೆಮ್ಮದಿ

ಶೃಂಗೇರಿ: ಭಗವದ್ಗೀತೆಯನ್ನು ಪ್ರತಿದಿನವೂ ಓದುವುದರಿಂದ ಮಾನಸಿಕ ನೆಮ್ಮದಿ, ಜ್ಞಾನ ವೃದ್ಧಿಯಾಗುತ್ತದೆ ಎಂದು ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.
ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾಸಭಾ ಮಠದ ಗುರುಭವನದಲ್ಲಿ ಮಂಗಳವಾರ ಚಾತುರ್ಮಾಸ್ಯ ವ್ರತದಲ್ಲಿರುವ ಜಗದ್ಗುರುಗಳ ಗುರುದರ್ಶನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಯಾವುದೇ ಶ್ರಮವಿಲ್ಲದೆ, ಖರ್ಚು ಇಲ್ಲದೆ ದೊಡ್ಡ ಲಾಭ ನೀಡುವ ಭಗವದ್ಗೀತೆ ಪಠಣವನ್ನು ಸಾಧ್ಯವಾದಷ್ಟು ಪಠಣ ಮಾಡಬೇಕು. ಭಗವದ್ಗೀತೆಯಲ್ಲಿ 18 ಅಧ್ಯಾಯವಿದ್ದು ಒಂದು ಅಧ್ಯಾಯವನ್ನಾದರೂ ಓದಬೇಕು. ನಿರಂತರ ಓದುವುದರಿಂದ ಅದು ಕಂಠಪಾಠವಾಗುವುದಲ್ಲದೆ, ಅದರಿಂದ ನೆಮ್ಮದಿ ದೊರಕುತ್ತದೆ ಎಂದರು.
ಸುಖ ಬೇಕು ಎಂದು ಎಲ್ಲರೂ ಹಾತೊರೆಯುತ್ತಾರೆ. ದೊಡ್ಡ ಲಾಭ ನೀಡುವ ಭಗವದ್ಗೀತೆಯನ್ನು ಸಮಯ ಹೊಂದಿಸಿಕೊಂಡು ಓದಬೇಕು. ಅದರಲ್ಲಿ ಭಗವಂತನ ಮಹಿಮೆಯನ್ನು ವಿಸ್ತಾರವಾಗಿ ಹೇಳಲಾಗಿದೆ. ನಮ್ಮಲ್ಲಿರುವ ಆಂತರಿಕ ಶತ್ರುಗಳನ್ನು ಮೊದಲು ನಿಗ್ರಹಿಸಬೇಕು. ನಾವು ಗಟ್ಟಿ ಇದ್ದರೆ ಮಾತ್ರ ಹೊರಗಿನ ಶತ್ರುವನ್ನು ನಿಗ್ರಹಿಸಬಹುದು ಎಂದರು.
ಅಹಂಕಾರ ಮನುಷ್ಯನ ಶತ್ರು. ನಾವು ಪ್ರತಿದಿನವೂ ಉತ್ಸಾಹದಿಂದ ಇರಬೇಕು. ಯಾವುದೇ ಕೆಲಸ ಮಾಡಲು ಉತ್ಸಾಹ ಮುಖ್ಯ. ಕೆಲಸಕ್ಕೆ ನಿರೀಕ್ಷಿತ ಲ ದೊರಕದಿದ್ದರೂ ಸಮಚಿತ್ತ ಕಾಪಾಡಿಕೊಳ್ಳಬೇಕು. ಲದ ಬಗ್ಗೆ ಚಿಂತಿಸದೆ ಶ್ರದ್ಧೆಯಿಂದ ಕರ್ತವ್ಯ ಮಾಡಿದರೆ ಯಶಸ್ಸು ಖಚಿತವಾಗುತ್ತದೆ. ಹೆಬ್ಬಾರ ಸಮಾಜದವರು ಪ್ರತಿವರ್ಷ ಸಾಮೂಹಿಕವಾಗಿ ಬಂದು ಗುರುದರ್ಶನ ಮಾಡುತ್ತಿದ್ದು ಶ್ರೀಮಠದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಹೇಳಿದರು.
ಜಗದ್ಗುರುಗಳ ಆದೇಶದಂತೆ ಕೋಟಿ ಶ್ರೀ ಗಾಯತ್ರಿ ಜಪದ ಮೂರನೇ ಆವೃತ್ತಿ ಚಾಲ್ತಿಯಲ್ಲಿದೆ. ಇದರೊಂದಿಗೆ ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ ಪಾರಾಯಣ ಯಜ್ಞ ನಡೆಯುತ್ತಿದೆ. ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ಯಜ್ಞ ಹಾಗೂ ಅಡಕೆ ಬೆಳೆಗಾರರ ಸಂಕಷ್ಟ ಪರಿಹಾರಕ್ಕಾಗಿ ಕೋಟಿ ಕುಂಕುಮಾರ್ಚನೆಯೂ ಜಗದ್ಗುರುಗಳ ಆಶೀರ್ವಾದದಿಂದ ಸುಸೂತ್ರವಾಗಿ ನಡೆದಿದೆ ಎಂದರು.
ಸಮಾಜದಿಂದ ಲ ಸಮರ್ಪಣೆ, ಬಿಕ್ಷಾ ವಂದನೆ, ಪಾದಪೂಜೆ ನಡೆಸಲಾಯಿತು. ಶ್ರೀಮಠದ ಅನ್ನಸಂತರ್ಪಣೆಗೆ 1.75 ಲಕ್ಷ ರೂ. ದೇಣಿಗೆಯನ್ನು ಅಡೇಕಂಡಿ ಲಕ್ಷ್ಮೀನಾರಾಯಣ ಕುಟುಂಬ ಹಾಗೂ ಶೆಟ್ಟಿಹಳ್ಳಿ ಸೂರ್ಯನಾರಾಯಣರಾವ್ ಕುಟುಂಬಸ್ಥರು ನೀಡಿದರು.
ಸಮಾಜದ ಮುಖಂಡರಾದ ಗುಡ್ಡೇತೋಟ ಗೋಪಾಲಕೃಷ್ಣ, ಚರಣ್ ಹೆಬ್ಬಾರ್, ಶಿವಶಂಕರ್, ರಾಜೇಶ್ ಕೀಳಂಬಿ, ಯಡಗೆರೆ ಗೋಪಾಲ್, ಹೆಬ್ಬಿಗೆ ಗಣೇಶ್, ರಾಜೇಶ್ ಇತರರಿದ್ದರು.