ಸರಗೂರು : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ವತಿಯಿಂದ ಸೋಮವಾರ ತಾಲೂಕಿನ ವಿವಿಧೆಡೆ ಸಂಘದ ಅಧ್ಯಕ್ಷ ನಟರಾಜು ಸಮ್ಮುಖದಲ್ಲಿ ಸದಸತ್ವ ಅಭಿಯಾನ ನಡೆಯಿತು.
ಪ್ರದಾನ ಕಾರ್ಯದರ್ಶಿ ಮನುಗನಹಳ್ಳಿ ಗುರುಸ್ವಾಮಿ ಮಾತನಾಡಿ, ಪ್ರತಿ ಗ್ರಾಮಗಳಲ್ಲಿ 100 ರಿಂದ 200 ಜನ ಸದಸತ್ವ ಪಡೆದು ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ಯುವ ಪೀಳಿಗೆ ಭವಿಷ್ಯಕ್ಕೆ ಮಾದರಿವಾಗುವ ನಿಟ್ಟಿನಲ್ಲಿ ನಮ್ಮ ಜತೆ ಕೈಜೋಡಿಸಲು ಮುಂದೆ ಬನ್ನಿ ಎಂದರು.
ಬಸವ ಬಳಗ ಅಧ್ಯಕ್ಷ ಗಣಪತಿ, ಕಾರ್ಯದರ್ಶಿ ಬಸವರಾಜು ಎಂ.ಎನ್., ನಿರ್ದೇಶಕರಾದ ಬಿ.ಮಾದಪ್ಪ, ಸಿದ್ದಪ್ಪ, ಜಯಕುಮಾರ್, ಶಿವಾನಂದ, ಮುಖಂಡರಾದ ಹಂಚಿಪುರ ಬಸವಣ್ಣ, ಗಿರೀಶ್, ನಂಜಪ್ಪ, ಯುವ ಸಮಿತಿ ಅಧ್ಯಕ್ಷ ನಂದೀಶ, ಮುಖಂಡರಾದ ಹಂಚಿಪುರ ಬಸವಣ್ಣ, ಪರಶಿವಮೂರ್ತಿ, ಗ್ರಾಮದ ಮುಖಂಡರಾದ ಮಹದೇವಸ್ವಾಮಿ, ದೇವರಾಜು, ಪ್ರಕಾಶ್, ನಾಗೇಂದ್ರ ಸ್ವಾಮಿ ಇತರರು ಹಾಜರಿದ್ದರು.