ಮೆಕ್ಸಿಕೋ: ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಬಯಕೆಗಳು ಇರುತ್ತವೆ. ಅದು ಸಹವೂ ಹೌದು. ಆದರೆ, ಕೆಲವರ ಬಯಕೆಗಳು ಎಷ್ಟು ವಿಚಿತ್ರವಾಗಿರುತ್ತದೆ ಎಂಬುದಕ್ಕೆ ಈ ಒಂದು ಸ್ಟೋರಿ ಸಾಕ್ಷಿಯಾಗಿದೆ. ಪ್ರವಾಸವೆಂದೆ ಯಾರಿಗೆ ತಾನೇ ಇಷ್ಟವಿಲ್ಲ. ಇದು ಕೂಡ ಬಯಕೆಯೇ ಆದರೆ, ಬೆತ್ತಲೆಯಾಗಿ ಇಡೀ ಪ್ರಪಂಚವನ್ನೇ ಪ್ರವಾಸ ಮಾಡಬೇಕೆನ್ನುವುದು ಯಾವ ರೀತಿಯ ಬಯಕೆ ನೀವೇ ಊಹಿಸಿಕೊಳ್ಳಿ.
ಪ್ರವಾಸವನ್ನೇ ಉಸಿರಾಗಿಸಿಕೊಂಡಿರುವ ಬೆಲ್ಜಿಯಂ ದಂಪತಿ, ತಮ್ಮ ಬೆತ್ತಲೆ ಪ್ರವಾಸದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಾಗಿನಿಂದ ಭಾರಿ ಸುದ್ದಿಯಾಗಿದ್ದಾರೆ. ದಂಪತಿಯನ್ನು ನಿಕ್ ಮತ್ತು ಲಿನ್ಸ್ ಕಾರ್ಟೆ ಎಂದು ಗುರುತಿಸಲಾಗಿದ್ದು, ಇಬ್ಬರ ವಯಸ್ಸು 30. ಎಲ್ಲಿಲ್ಲೆ ಸಾಧ್ಯವೋ ಅಲ್ಲೆಲ್ಲ ಇಬ್ಬರು ಬೆತ್ತಲೆಯಾಗಿಯೇ ಪ್ರವಾಸ ಮಾಡಿದ್ದಾರೆ. ತಮ್ಮ ಅನುಭವವನ್ನು ದಾಖಲೆ ರೂಪದಲ್ಲಿ ತಮ್ಮದೇ ನೇಕೆಡ್ ವಾಂಡರಿಂಗ್ಸ್ ಬ್ಲಾಗ್ ಮತ್ತು ಇನ್ಸ್ಟಾಗ್ರಾಂ ಪೇಜ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕರೊನಾ ಸಾಂಕ್ರಾಮಿಕ ಆರಂಭದಲ್ಲಿ ಲಾಕ್ಡೌನ್ ಕಾರಣದಿಂದಾಗಿ ದಂಪತಿ ಮೆಕ್ಸಿಕೋದಲ್ಲಿ ಸಿಲುಕಿಕೊಂಡಿದ್ದರು. ಸಾಕಷ್ಟು ಪ್ರಯತ್ನ ಮಾಡಿದ್ದರೂ ಯೂರೋಪ್ಗೆ ಬರಲು ಸಾಧ್ಯವಾಗಿರಲಿಲ್ಲ. ಆದರೂ ತಲೆಕೆಸಿಕೊಳ್ಳದ ದಂಪತಿ ತಮ್ಮ ಕ್ವಾರಂಟೈನ್ ಅವಧಿಯನ್ನು ಧನಾತ್ಮಕವಾಗಿ ಕಳೆದಿದ್ದಾರೆ.
ನಾವು ಮೂರು ತಿಂಗಳು ಮೆಕ್ಸಿಕೋದಲ್ಲಿ ಸಿಲುಕಿದ್ದೆವು. ಅದೊಂದು ರೀತಿಯಲ್ಲಿ ಅರೆ ಲಾಕ್ಡೌನ್ ಆಗಿತ್ತು ನಿಕ್ ಹೇಳಿದ್ದು, ಇದಕ್ಕೆ ಧ್ವನಿಗೂಡಿಸಿರುವ ಲಿನ್ಸ್ ನಮಗೇನು ಬೇಸರವಾಗಲಿಲ್ಲ. ನಾವು ಬೆತ್ತಲೆ ಬೀಚ್ ಹೊಂದಿದ್ದೆವು ಎಂದಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ದಂಪತಿ ಶೇರ್ ಮಾಡಿಕೊಂಡಿರುವ ಫೋಟೋಗಳಲ್ಲಿ ಇಬ್ಬರು ಬೆತ್ತಲೆಯಾಗೇ ತಿನ್ನುವುದು, ಕುಡಿಯುವುದು, ವಿಶ್ರಾಂತಿ ಪಡೆಯುವುದು ಮತ್ತು ಸ್ನೇಹಿತರನ್ನು ಭೇಟಿ ಮಾಡುವುದು ಮಾಡಿದ್ದಾರೆ. ಮೆಕ್ಸಿಕೋದ ಝಿಪೊಲೈಟ್ ಮತ್ತು ಓಕ್ಷಕಾ ಏರಿಯಾದಲ್ಲಿ ಮೂರು ತಿಂಗಳ ಲಾಕ್ಡೌನ್ ಕಳೆದ ಬಳಿಕ ಜುಲೈ ತಿಂಗಳಲ್ಲಿ ಯೂರೋಪ್ಗೆ ಮರಳಿದರು.
ದಂಪತಿ ಇಬ್ಬರು ಬೆಲ್ಜಿಯಂನ ಘೆಂಟ್ ನಗರದವರು. ಕಳೆದ 12 ವರ್ಷಗಳಿಂದ ಇಬ್ಬರು ಜತೆಯಾಗಿದ್ದಾರೆ. ಬೆತ್ತಲೆ ಕಡ್ಡಾಯವಾಗಿರುವ ಬೆಲ್ಜಿಯಂ ಸ್ಪಾ ಕೇಂದ್ರಗಳಿಗೆ ಆಗಾಗ ಭೇಟಿ ನೀಡುವುದು ಇವರ ಹವ್ಯಾಸವಾಗಿದೆ. ಇದೊಂದು ಶ್ರೇಷ್ಠ ಅನುಭವ ಎಂದಿರುವ ದಂಪತಿ ಸಮಯ ಸಿಕ್ಕಾಗಲೆಲ್ಲ ಹೋಗುತ್ತೇವೆ ಎಂದಿದ್ದಾರೆ. ಸಾಮಾಜಿಕ ನಗ್ನತೆ ಮತ್ತು ಪ್ರಕೃತಿಯೊಂದಿಗೆ ನಾವು ಇತರ ಆಯ್ಕೆಗಳನ್ನು ಅನ್ವೇಷಿಸಲು ಪ್ರಾರಂಭಿಸಿದ್ದೇವೆ. ಕೆಲವು ವರ್ಷಗಳ ಬಳಿಕ ಪ್ರಯಾಣದ ಸಾಹಸವನ್ನು ಪ್ರಾರಂಭಿಸಿ, ಪ್ರಕೃತಿ ಸಿದ್ಧಾಂತದ ಸುತ್ತಲೂ ಇರುವ ಕೆಲವು ಪುರಾಣಗಳನ್ನು ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ.
ದಂಪತಿಗೆ ಇನ್ಸ್ಟಾಗ್ರಾಂನಲ್ಲಿ 28 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ಗಳಿದ್ದಾರೆ. ಬೆತ್ತಲೆಯಾಗಿ ಪ್ರಪಂಚವನ್ನೇ ಸುತ್ತಬೇಕೆನ್ನುವುದು ದಂಪತಿಯ ಹೆಬ್ಬಯಕೆಯಾಗಿದೆ. (ಏಜೆನ್ಸೀಸ್)