ಬೆಂಗಳೂರು: ಸಂಯುಕ್ತ ರಾಷ್ಟ್ರಗಳ ಪರ್ಮನೆಂಟ್ ಮಿಷನ್ ಆ್ ಇಂಡಿಯಾ, ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಐತಿಹಾಸಿಕ ಪ್ರಥಮ ವಿಶ್ವ ಧ್ಯಾನ ದಿನವನ್ನು ಆಚರಿಸಲಾಯಿತು. ‘ಜಾಗತಿಕ ಶಾಂತಿ ಮತ್ತು ಸಾಮರಸ್ಯಕ್ಕಾಗಿ ಧ್ಯಾನ’ ಎಂಬ ಶೀರ್ಷಿಕೆಯಡಿ ನಡೆಸಲಾದ ಸಮಾವೇಶದಲ್ಲಿ ಜಗತ್ತಿನ ಪ್ರಮುಖರು ಪಾಲ್ಗೊಂಡಿದ್ದರು.
ಸಮಾವೇಶದಲ್ಲಿ ಪಾಲ್ಗೊಂಡಿದ್ದ ಆರ್ಟ್ ಆ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ ಗುರೂಜಿ ಮಾತನಾಡಿ, ಒಂದು ಪ್ರಶಾಂತವಾದ ಮನಸ್ಸು ಇತರ ನೂರು ಜನರಿಗೆ ಉತ್ತಮವಾದ ವಾತಾವರಣವನ್ನು ಸೃಷ್ಟಿಸಬಲ್ಲದು. ಜಾಗತಿಕ ಶಾಂತಿ ಮತ್ತು ಐಕ್ಯತೆಗಾಗಿ ಧ್ಯಾನವು ಗಹನವಾದ ಪ್ರಭಾವ ಬೀಡುತ್ತದೆ ಎಂದು ವಿವರಿಸಿದರು.
ಸಾಮೂಹಿಕ ಒಳಿತಿಗಾಗಿ, ಸಾಮರಸ್ಯಕ್ಕಾಗಿ ಮತ್ತು ಆಧ್ಯಾತ್ಮಿಕ ಬೆಳವಣಿಗೆಗಾಗಿ ವ್ಯಕ್ತಿಗಳು ಹಾಗೂ ರಾಷ್ಟ್ರಗಳು ಧ್ಯಾನವನ್ನು ಆಲಂಗಿಸಬೇಕು. ದಿನನಿತ್ಯದ ಜೀವನದಲ್ಲಿ ಧ್ಯಾನವನ್ನು ಅಳವಡಿಸಿಕೊಳ್ಳಲೇಬೇಕಾದ ತುರ್ತು ಸ್ಥಿತಿ ಇದೆ. ಧ್ಯಾನವು ಪ್ರತಿಯೊಂದು ವ್ಯಕ್ತಿಗೂ, ಪ್ರತಿ ಮನೆಗೂ ತಲುಪಬೇಕು. ಇದು ಆಧುನಿಕ ದಿನದ ಸವಾಲುಗಳಾದ ಆತಂಕ, ಕೌಟುಂಬಿಕ ಹಿಂಸಾಚಾರ, ಮಾದಕ ಚಟಗಳಿಂದ ಹೊರಬರುವ ದಾರಿಯಾಗಿದೆ. ಧ್ಯಾನವು ಧರ್ಮಗಳನ್ನು, ರಾಷ್ಟ್ರಗಳ ಗಡಿಗಳನ್ನು, ವಯೋಮಿತಿಗಳನ್ನು ಮೀರಿರುವಂತದ್ದು. ಇದರಿಂದಾಗಿ ಧ್ಯಾನವು ಜಾಗತಿಕವಾಗಿ ಪ್ರಶಕ್ತವಾಗಿದೆ. ತಮ್ಮ ಭಾವನೆಗಳನ್ನು ಹೇಗೆ ನಿಭಾಯಿಸುವುದು ಎಂಬುದರ ಬಗ್ಗೆ ಪ್ರಶಿಕ್ಷಣವನ್ನು ನೀಡಿದರೆ, ಈ ಜಗತ್ತು ಬಹಳ ಉತ್ತಮವಾದ ಸ್ಥಳವಾಗುತ್ತದೆ ಎಂದರು.
ಸಮಾವೇಶದಲಿ ಅಮೆರಿಕದ ಜನರಲ್ ಅಸೆಂಬ್ಲಿಯ ಅಧ್ಯಕ್ಷ ಫಿಲಿಮಾನ್ ಯಾಂಗ್, ಯುಎನ್‌ನ ಭಾರತದ ಪ್ರತಿನಿಧಿ ಪರ್ವತನೇನಿ ಹರೀಶ್, ಯುಎನ್ ಅಂಡರ್ ಸೆಕ್ರೆಟರಿ ಜನರಲ್ ಅತುಲ್ ಖರೆ, ಯುಎನ್ ಪರ್ಮನೆಂಟ್ ಮಿಷನ್‌ನ ಸುಗೀಶ್ವರ ಗುಣರತ್ನ, ಶ್ರೀಲಂಕಾದ ಯುಎನ್ ಚಾರ್ಜ್ ಡಿ ಅಫೇರ್ಸ್, ನೇಪಾಲ್ ನ ಯುಎನ್‌ನ ಶಾಶ್ವತ ಪ್ರತಿನಿಧಿ ಲೋಕ ಬಹದೂರ್ ಥಾಪ ಮೊದಲಾದವರು ಪಾಲ್ಗೊಂಡಿದ್ದರು.