ನ್ಯೂಸ್

ಜನರಿಗೆ ಪಶುಗಳ ಔಷಧಿ ಕೊಡುತ್ತಿಲ್ಲ: ಗುಂಡೂರಾವ್

Bengaluru - Political - Shivananda Tagadur


ಬೆಂಗಳೂರು:

ಜನರಿಗೆ ಪಶುಗಳ ಔಷಧಿ ಕೊಡುತ್ತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬಿಜೆಪಿ ಛಲವಾದಿ ನಾರಾಯಣ ಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿ, ಔಷಧಿ ಸರಬರಾಜು ಮಾಡುವವರು ಮನುಷ್ಯರ ಔಷಧಿಯ ಮೇಲೆ ಲೆಬಲ್ ಹಾಕುವುದನ್ನನ್ನ ತಪ್ಪು ಮಾಡಿದ್ದಾರೆ.
ಕೂಡಲೇ ಇದನ್ನ ಪರಿಶೀಲಿಸಿ ಸರಬರಾಜು ಮಾಡುವವರಿಗೆ ನೋಟಿಸ್ ನೀಡಿ ದಂಡವಿಧಿಸಿದ್ದೇವೆ.

ಔಷಧಿಯ ಸರಬರಾಜಿನಲ್ಲಿ ಯಾವುದೇ ತಪ್ಪಿಲ್ಲ ಎಂದರು.

ಲೇಬಲ್ ಹಾಕಿರುವುದರಲ್ಲಿ ತಪ್ಪಾಗಿದೆ. ಅದಕ್ಕೆ ದಂಡ ಹಾಕಿದ್ದೇವೆ ಎಂದರು.